ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಗ್ರಾಮದ ದೇವರ ೭ನೇ ವರ್ಷದ ವಾರ್ಷಿಕ ಪೂಜೋತ್ಸವ ಸುಂಟಿಕೊಪ್ಪ ವ್ಯಾಪ್ತಿಯ ವಿವಿಧ ದೇವಸ್ಥಾನ ಸಮಿತಿಗಳ ಸಹಭಾಗಿತ್ವದಲ್ಲಿ ನಡೆಯಿತು.

ಪಟ್ಟಣದ ೨ ನೇ ವಿಭಾಗದಲ್ಲಿರುವ ಗ್ರಾಮದೇವರ ಬನದಲ್ಲಿ ೭ನೇ ವರ್ಷದ ವಾರ್ಷಿಕ ಮಹೋತ್ಸವದ ಅಂಗವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಸುಂಟಿಕೊಪ್ಪದ ವಿವಿಧ ದೇವಾಲಯಗಳಾದ ಶ್ರೀಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ ಸಮಿತಿ, ಶ್ರೀ ರಾಮ ಸೇವಾ ಸಮಿತಿ, ಶ್ರೀ ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಸಮಿತಿ, ಶ್ರೀ ಗೌರಿಗಣೇಶೋತ್ಸವ ಸಮಿತಿ, ಶ್ರೀ. ಮಸಣಿಕಮ್ಮ ದೇವಸ್ಥಾನ ಸಮಿತಿ, ಮಹಾಗಣಪತಿ ದೇವಾಲಯ ಸಮಿತಿ ಮದುರಮ್ಮ ಬಡಾವಣೆ, ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಟಿಸಿಎಲ್, ಶ್ರೀ ಅಣ್ಣಪ್ಪ ದೇವಸ್ಥಾನ ಸಮಿತಿ ಶ್ರೀದೇವಿ, ಶ್ರೀ ಚಾಮುಂಡೇಶ್ವರಿ,ಶ್ರೀ ಮುತ್ತಪ್ಪ ಸೇವಾ ಸಮಿತಿ ಬಾಳೆಕಾಡು, ಶ್ರೀ.ಕೊಡಂಗಲ್ಲೂರು ಕುರುಂಬ ಭಗವತಿ ದೇವಾಲಯ ಗದ್ದೆಹಳ್ಳ, ಶ್ರೀ.ನಾಗದೇವತೆ ದೇವಸ್ಥಾನ ಮದುರಮ್ಮ ಬಡಾವಣೆ, ಶ್ರೀಮಳೂರು ಬೆಳ್ಳಾರಿಕಮ್ಮ ದೇವಾಲಯ ಸಮಿತಿ,ಶ್ರೀ ಬಸವೇಶ್ವರ ದೇವಾಲಯ ಸಮಿತಿ ಗದ್ದೆಹಳ್ಳ ಸಹಭಾಗಿತ್ವದಲ್ಲಿ ನಡೆಯಿತು. ದಿನದ ಅಂಗವಾಗಿ ಸ್ಥಳ ಶುದ್ಧಿ ಕಲಶ ಬೆಳಿಗ್ಗೆ ೭ ರಿಂದ ೮. ರವರೆಗೆ, ೮.೩೦ರವೆಗೆ ವಿಶೇಷ ಪೂಜಾ ಕೈಂಕರ್ಯಗಳು, ವಿಧಿ ವಿಧಾನಗಳು ನಡೆಯಿತು. ಗ್ರಾಮ ದೇವರಿಗೆ ೯ ರಿಂದ ೧೦ರವೆಗೆ ಹರಕೆ ಸಮರ್ಪಣೆ, ಅರ್ಚಕರಾದ ಗಣೇಶ್ ಭಟ್ ಅವರಿಂದ ಸ್ಥಳ ಶುದ್ಧಿ ಕಳಸದೊಂದಿಗೆ ಪೂಜಾ ವಿಧಿವಿಧಾನಗಳು ನಡೆಯಿತು.ಕುಂಕುಮ ಪೂಜೆ, ಅಲಂಕಾರ ಪೂಜೆಯ ನಂತರ ೧೦.೩೦ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಗ್ರಾಮ ದೇವತೆಗೆ ಹರಕೆ ಒಪ್ಪಿಸಿ ಸಂತೃಪ್ತರಾದರು.

ಸಮಿತಿ ಅಧ್ಯಕ್ಷ ಎ.ಶ್ರೀಧರ್ ಕುಮಾರ್, ಕಾರ್ಯದರ್ಶಿ ಸುರೇಶ್ ಗೋಪಿ, ಖಜಾಂಚಿ ದಿನು ದೇವಯ್ಯ, ಉಪಾಧ್ಯಕ್ಷರಾದ ಬಿ.ಡಿ.ರಾಜು ರೈ, ಜೆ.ಎನ್.ಚಂದ್ರಶೇಖರ್, ಸಲಹಾ ಸಮಿತಿ ಎ.ಲೋಕೇಶ್ ಕುಮಾರ್, ಶಾಂತರಾಮ್ ಕಾಮತ್, ಬಸವರಾಜು, ಸಂಘಟನಾ ಕಾರ್ಯದರ್ಶಿಗಳಾದ ಧನು ಕಾವೇರಪ್ಪ, ಎಂ.ಎಸ್. ಸುನಿಲ್, ಸಹ ಕಾರ್ಯದರ್ಶಿ ಎ.ಶ್ರೀಧರನ್, ಅಯ್ಯಪ್ಪ, ಪಿ.ಆರ್.ಸುನಿಲ್‌ಕುಮಾರ್, ಪಟ್ಟೆಮನೆ ಕುಟುಂಬಸ್ಥರಾದ ಪಿ.ಪಿ.ಉದಯಕುಮಾರ್, ಪಟ್ಟೆಮನೆ ಸದಾಶಿವ, ಸದಾಶಿವ ರೈ, ಸಂತೋಷ್, ರವಿ, ಶಿವಕುಮಾರ್, ಸಿ.ಸಿ.ಸುನಿಲ್, ಎಂ.ಆರ್.ಶಶಿಕುಮಾರ್, ಬಿ.ಕೆ.ಪ್ರಶಾಂತ್, ಪ್ರೀತಂ ಪ್ರಭಾಕರ್, ಪಿ.ಆರ್.ಸುಕುಮಾರ್ ಸೇರಿದಂತೆ ವಿವಿಧ ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.