ಶಸ್ತ್ರಚಿಕಿತ್ಸೆ ಕುರಿತು ಮೂಢನಂಬಿಕೆ, ಭಯ ಬಿಡಬೇಕು: ಡಾ.ರವಿಕುಮಾರ್

| Published : Oct 01 2024, 01:21 AM IST

ಸಾರಾಂಶ

ಶಸ್ತ್ರಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಅನಗತ್ಯ ಭಯ, ಮೂಢನಂಬಿಕೆಗಳನ್ನು ಬಿಡಬೇಕು ಎಂದು ದಾವಣಗೆರೆಯ ಪ್ರೀತಿ ಆರೈಕೆ ಟ್ರಸ್ಟ್ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್ ಹೇಳಿದ್ದಾರೆ.

- ಹೊಸಕೆರೆಯಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ - - - ಕನ್ನಡಪ್ರಭ ವಾರ್ತೆ ಜಗಳೂರು

ಶಸ್ತ್ರಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಅನಗತ್ಯ ಭಯ, ಮೂಢನಂಬಿಕೆಗಳನ್ನು ಬಿಡಬೇಕು ಎಂದು ದಾವಣಗೆರೆಯ ಪ್ರೀತಿ ಆರೈಕೆ ಟ್ರಸ್ಟ್ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್ ಹೇಳಿದರು.

ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗಿನ ಅತ್ಯುತ್ತಮ ತಂತ್ರಜ್ಞಾನ ಹಾಗೂ ಪರಿಣಿತ ವೈದ್ಯರ ಸಹಾಯದಿಂದ ಶಸ್ತ್ರಚಿಕಿತ್ಸೆಯಲ್ಲಿ ಯಾವುದೇ ತೊಡಕಾಗುವುದಿಲ್ಲ. ಭಯಪಡುವ ಅಗತ್ಯವಿಲ್ಲ. ಪ್ರೀತಿ ಆರೈಕೆ ಟ್ರಸ್ಟ್ ಮೂಲಕ ಗ್ರಾಮೀಣ ಭಾಗದಲ್ಲಿ ಆರೋಗ್ಯ ದಾಸೋಹ ನೀಡುವ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಲು ಮನವಿ ಮಾಡಿದರು.

ಹೊಸಕೆರೆ ಗ್ರಾಮ ಪಂಚಾಯಿತಿಯ ಪಿಡಿಒ ಅಂಬಿಕಾ ಮಾತನಾಡಿ, ಆರೋಗ್ಯವೆಂದರೆ ಕೇವಲ ದೈಹಿಕವಾಗಿ ಸದೃಢವಾಗಿ ಮಾತ್ರವೇ ಇರುವುದಲ್ಲ. ಮಾನಸಿಕ ಒತ್ತಡಗಳು ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಕಾಡುತ್ತಿದೆ. ನಾವು ಸದಾ ಜಾಗೃತರಾಗುವ ಮೂಲಕ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ ಎಂದರು.

ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ, ಮುಖಂಡರು ಹಾಗೂ ಸದಸ್ಯರು ರೇವಣಸಿದ್ದಪ್ಪ, ನಾರಾಯಣಪ್ಪ, ಜಗದೀಶ್ ಗೌಡ, ರಾಜಪ್ಪ, ತಿಪ್ಪೇಸ್ವಾಮಿ, ಮುಕುಂದ, ಸ್ವಾಮಿ, ಚಿಕ್ಕ ಬನ್ನಿಹಟ್ಟಿ ಚೆನ್ನಪ್ಪ, ಉದ್ಯಮಿಗಳಾದ ನಾಗರಾಜ್ ಸ್ವಾಮಿ ಉಪಸ್ಥಿತರಿದ್ದರು.

- - - -29ಜೆ.ಜಿ.ಎಲ್.1:

ಜಗಳೂರು ತಾಲೂಕಿನ ಹೊಸಕೆರೆಯಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ದಾವಣಗೆರೆಯ ಪ್ರೀತಿ ಆರೈಕೆ ಟ್ರಸ್ಟ್ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.