ಸಾರಾಂಶ
ಕೊಳ್ಳೇಗಾಲ ಪಟ್ಟಣದ 23ನೇ ವಾರ್ಡ್‌ಗೆ ಶುದ್ಧ ನೀರು, ಮೂಲ ಸೌಲಭ್ಯ ಕಲ್ಪಿಸುವಂತೆ ಎಸ್‌ಡಿಪಿಐ ಪದಾಧಿಕಾರಿಗಳು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣ ವ್ಯಾಪ್ತಿಯ 23ನೇ ವಾರ್ಡ್‌ನ ಎಲ್ಲಾ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಎಸ್‌ಡಿಪಿಐ ಕಾರ್ಯಕರ್ತರು ನಗರಸಭೆ ಪೌರಾಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದರು.ನಗರಸಭೆ ಕಚೇರಿಯಲ್ಲಿ ಮನವಿಯನ್ನ ಸಲ್ಲಿಸಿ ಮಾತನಾಡಿದ ಎಸ್‌ಡಿಪಿಐ ಅಧ್ಯಕ್ಷ ಇಮ್ರಾನ್, ಈಗಾಗಲೇ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗಳಲ್ಲಿ ಇರುವ ಜನರು ಕೂಲಿ ಮಾಡಿ ಬದುಕುವವ ಬಡವರಾಗಿದ್ದು, ಅವರಿಗೆ ಸೂಕ್ತ ಪರಿಹಾರವನ್ನು ತುರ್ತಾಗಿ ವಿತರಣೆ ಮಾಡುವುದು, ಕುಡಿಯುವ ನೀರಿಗೆ 5 ರು. ಕಾಯಿನ್ ನೀರಿನ ಹೊಸಘಟಕಗಳನ್ನು ತುರ್ತಾಗಿ ತೆರೆಯುವುದು. ದಿನಂಪ್ರತಿ ಕಸದ ವಾಹನ ನೂರ್ ಮೊಹಲ್ಲಾ, ಮಂಜುನಾಥ ನಗರ ಹಾಗೂ ಅಕ್ಕ ಪಕ್ಕದ ಸ್ಥಳಗಳಿಗೆ ತೆರಳಿ ಕಸವನ್ನು ವಿಲೇವಾರಿ ಮಾಡುಲು ಕ್ರಮವಹಿಸಬೇಕು,
ಅಶುಚಿತ್ವ, ಕಲುಷಿತ ನೀರು ಪೂರೈಕೆಯಿಂದಾಗಿ ಈ ಘಟನೆ ನಡೆದಿದ್ದು ಪೌರ ಕಾರ್ಮಿಕರಿಗೆ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಕಸ ತೆಗೆಯಲು ನಿರ್ದೇಶಿಸಬೇಕು, ಚರಂಡಿಗಳ ಒಳಗೆ, ಮೇಲೆ ಹೋಗಿರುವ ನಲ್ಲಿ ನೀರಿನ ಪೈಪ್ ಲೈನ್‌ಗಳನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಿ ನೀರು ಕಲುಷಿತಗೊಳ್ಳದಂತೆ ಕ್ರಮ ಕೈಗೊಳ್ಳುವುದು. ರಸ್ತೆಗಳ ಡಾಂಬರೀಕರಣ ಮಾಡುವುದು, ಬಡಾವಣೆಗಳಲ್ಲಿ ಜನರಿಗೆ ಆರೋಗ್ಯದ ಸ್ವಚ್ಛತೆಯ ಕುರಿತು ವೈದ್ಯಾಧಿಕಾರಿಗಳಿಂದ 2-3 ತಿಂಗಳಿಗೊಮ್ಮೆಯಾದರೂ ಅರಿವು ಮೂಡಿಸಲು ಮುಂದಾಗಬೇಕಿದೆ, ಮಾಂಸದ ತ್ಯಾಜ್ಯ ದಿನ ವಿಲೇವಾರಿಗೆ ಕ್ರಮ ವಹಿಸಬೇಕು ಎಂದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಕಾರ್ಯದರ್ಶಿ ನದೀಮ್ ಪಾಷ, ಟಿಪ್ಪು ಪದಾಧಿಕಾರಿಗಳು ಕೈಫ್, ಸಿದ್ದಿಖ್, ಅಕೀಫ್ ಇನ್ನಿತರರು ಇದ್ದರು.