ಸಾರಾಂಶ
ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ರೈತರು ಡಿಎಪಿ ಬದಲು ಬೇರೆ ರಸಗೊಬ್ಬರ ಬಳಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು ತಿಳಿಸಿದ್ದಾರೆ.
ಶಿರಾ: ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ರೈತರು ಡಿಎಪಿ ಬದಲು ಬೇರೆ ರಸಗೊಬ್ಬರ ಬಳಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು ತಿಳಿಸಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಬೇವು ಲೇಪಿತ ಯೂರಿಯಾ ರಸಗೊಬ್ಬರ ಎರಡು ವಿಧದ ಕಣಗಳ ಗಾತ್ರದಲ್ಲಿ ಲಭ್ಯವಿರುತ್ತದೆ. ದಪ್ಪ, ಸಣ್ಣ ಕಾಳು ಎರಡೂ ತರಹದ ಯೂರಿಯಾಗಳಲ್ಲಿ ಸಾರಜನಕ ಪೋಷಕಾಂಶವು ಶೇ.46 ಇರುತ್ತದೆ. ಅಲ್ಲದೇ ದಪ್ಪಕಾಳಿನ ಯೂರಿಯಾವು ನಿಧಾನಗತಿಯಲ್ಲಿ ಕರಗುತ್ತದೆ. ಕೃಷಿ ವಿಶ್ವವಿದ್ಯಾಲಯದ ತಜ್ಞರಿಂದ ಶಿಫಾರಸಾಗಿರುತ್ತದೆ. ಯಾವುದೇ ಸಂಸ್ಥೆಯ ಡಿ.ಎ.ಪಿ. ರಸಗೊಬ್ಬರದಲ್ಲಿ ಸಾರಜನಕ ಶೇ.18, ರಂಜಕ ಶೇ.46 ಇರುವುದರಿಂದ ರೈತರು ಒಂದೇ ಸಂಸ್ಥೆಯ ಡಿಎಪಿಗಾಗಿ ಒತ್ತಾಯಿಸಬಾರದು. 20:20:0:13, 16:20:0:13, 10:26:26, 17:17:17, 19:19:19 ಸಹ ರಂಜಕ ಹಾಗೂ ಸಾರಜನಕ ಲಭ್ಯವಿರುತ್ತದೆ.ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ರಸಗೊಬ್ಬರಗಳನ್ನು ಪಿಒಎಸ್ ಯಂತ್ರಗಳ ಮೂಲಕವೇ ಮಾರಾಟ ಮಾಡಬೇಕ ಎಂದು ತಿಳಿಸಿದ್ದಾರೆ.