ಸಾರಾಂಶ
ಟೇಕಲ್ ವ್ಯಾಪ್ತಿ ಹಳೇಪಾಳ್ಯ ಗ್ರಾಮದ ರೈತ ಮುನಿರೆಡ್ಡಿ ಒಂದು ಎಕರೆ, ವೆಂಕಟರೆಡ್ಡಿ ಒಂದೂಕಾಲು ಎಕರೆ ಹಾಗೂ ಕೆಂಪಸಂದ್ರ ರೈತ ಮುನಿನಾಗಪ್ಪ ಒಂದು ಕಾಲು ಎಕರೆ ಪ್ರದೇಶದಲ್ಲಿ ಉತ್ತಮ ಫಸಲು ನೀಡುತ್ತಿದೆ ಎಂದು ಆದಿರಾಜ್ ಕಂಪನಿ ಟೊಮೆಟೋ ಬೆಳೆದಿದ್ದಾರೆ.
ಕನ್ನಡಪ್ರಭ ವಾರ್ತೆ ಟೇಕಲ್
ಇಲ್ಲಿನ ಹಳೇಪಾಳ್ಯ ಹಾಗೂ ಕೆಂಪಸಂದ್ರ ಗ್ರಾಮದ ಸುಮಾರು ೪ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮೆಟೋಗೆ ನಕಲಿ ಬಿತ್ತನೆ ಬೀಜದ ಕಾರಣ ಬೆಲೆ ಸಿಗದೆ ರೈತರು ತೀವ್ರ ಕಂಗಾಲಾಗಿದ್ದಾರೆ.ಟೇಕಲ್ ವ್ಯಾಪ್ತಿ ಹಳೇಪಾಳ್ಯ ಗ್ರಾಮದ ರೈತ ಮುನಿರೆಡ್ಡಿ ಒಂದು ಎಕರೆ, ವೆಂಕಟರೆಡ್ಡಿ ಒಂದೂಕಾಲು ಎಕರೆ ಹಾಗೂ ಕೆಂಪಸಂದ್ರ ರೈತ ಮುನಿನಾಗಪ್ಪ ಒಂದು ಕಾಲು ಎಕರೆ ಪ್ರದೇಶದಲ್ಲಿ ಉತ್ತಮ ಫಸಲು ನೀಡುತ್ತಿದೆ ಎಂದು ಆದಿರಾಜ್ ಕಂಪನಿ ಟೊಮೆಟೋ ಬೆಳೆದಿದ್ದಾರೆ. ಆದರೆ ಟೊಮೆಟೋ ಆಕಾರ, ಗುಣಮಟ್ಟ ಸರಿ ಇಲ್ಲವೆಂದು ಬಾಕ್ಸ್‌ಗೆ ೩೦-೫೦ ರುಪಾಯಿ ಬೆಲೆ ಕಟ್ಟುತ್ತಿದ್ದಾರೆ. ಬೇರೆ ತಳಿ ಟಮೆಟೋಗೆ ೩೦೦ ರಿಂದ ೪೦೦ ರು. ಬೆಲೆ ಸಿಗುತ್ತಿದೆ. ನಮಗೆ ಕಂಪನಿಯವರು ನಕಲಿ ಬೀಜ ನೀಡಿ ಮೋಸ ಮಾಡಿದ್ದಾರೆ ಎಂದು ರೈತ ಮುನಿರೆಡ್ಡಿ ಆರೋಪಿಸಿದ್ದಾರೆ.
ಈ ಬಗ್ಗೆ ಹಳೇಪಾಳ್ಯ ಮತ್ತು ಕೆಂಪಸಂದ್ರ ರೈತರು ತಾಲೂಕು ತೋಟಗಾರಿಕೆ ಇಲಾಖೆಗೆ ಮನವಿ ಮಾಡಿ ಕಂಪನಿ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡರು ಪ್ರತಿಕ್ರಿಯಿಸಿದ್ದು ರೈತರಿಗೆ ನಕಲಿ ಟೊಮೆಟೋ ಬಿತ್ತನೆ ಬೀಜ ನೀಡಿ ವಂಚನೆ ಮಾಡಿದ್ದಾರೆ. ಮಾಲೂರು ತಾಲೂಕಿನಲ್ಲಿ ನಕಲಿ ಬಿತ್ತನೆ ಬೀಜ ಮತ್ತು ಗೊಬ್ಬರ ಹಾವಳಿ ಹೆಚ್ಚಾಗಿದೆ. ಈ ನಕಲಿ ಬಿತ್ತನೆ ಬೀಜ ಕಂಪನಿ ವಿರುದ್ಧ ವಿಶೇಷ ತಂಡ ರಚನೆ ಮಾಡುವ ಮುಖಾಂತರ ನೊಂದ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
;Resize=(128,128))
;Resize=(128,128))
;Resize=(128,128))