ಸಾರಾಂಶ
ಸಂಘಕ್ಕೆ 2023-24ನೇ ಸಾಲಿನಲ್ಲಿ 33, 50,000 ಲಕ್ಷ ನಿವ್ವಳ ಲಾಭ ಬಂದಿದೆ. ಅದರಲ್ಲಿ ಬೋನಸ್ ರೂಪದಲ್ಲಿ ಹಾಲು ಸರಬರಾಜು ಮಾಡುವ ಸದಸ್ಯರಿಗೆ 18 ಲಕ್ಷ ರು. ಹಂಚಲಾಗುತ್ತದೆ ಮತ್ತು ಪ್ರತಿವರ್ಷ ಮೂರು ಲಕ್ಷ ರು.ಗಳ ವೆಚ್ಚದಲ್ಲಿ ಡೇರಿ ಸದಸ್ಯರಿಗೆ ಹಬ್ಬಕ್ಕೆ ಉಡುಗೊರೆ, 7,20,000 ರು. ವೆಚ್ಚದಲ್ಲಿ 800 ಹಸುಗಳಿಗೆ ಉಚಿತ ವಿಮೆ ಮಾಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ಯತ್ತಂಬಾಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹೆಚ್ಚಿನ ಹಾಗೂ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘ ಮಳವಳ್ಳಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದೆ ಎಂದು ಸಂಘದ ಅಧ್ಯಕ್ಷ ವೈ.ಎಸ್.ದಿನೇಶ್ ತಿಳಿಸಿದರು.ಗ್ರಾಮದ ಡೇರಿ ಆವರಣದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸಂಘಕ್ಕೆ 2023-24ನೇ ಸಾಲಿನಲ್ಲಿ 33, 50,000 ಲಕ್ಷ ನಿವ್ವಳ ಲಾಭ ಬಂದಿದೆ ಎಂದರು.
ಅದರಲ್ಲಿ ಬೋನಸ್ ರೂಪದಲ್ಲಿ ಹಾಲು ಸರಬರಾಜು ಮಾಡುವ ಸದಸ್ಯರಿಗೆ 18 ಲಕ್ಷ ರು. ಹಂಚಲಾಗುತ್ತದೆ ಮತ್ತು ಪ್ರತಿವರ್ಷ ಮೂರು ಲಕ್ಷ ರು.ಗಳ ವೆಚ್ಚದಲ್ಲಿ ಡೇರಿ ಸದಸ್ಯರಿಗೆ ಹಬ್ಬಕ್ಕೆ ಉಡುಗೊರೆ, 7,20,000 ರು. ವೆಚ್ಚದಲ್ಲಿ 800 ಹಸುಗಳಿಗೆ ಉಚಿತ ವಿಮೆ ಮಾಡಿಸಲಾಗಿದೆ ಎಂದರು.ಸಂಘದ ಸದಸ್ಯರು ಮೃತಪಟ್ಟರೆ ಅವರಿಗೆ 10 ಸಾವಿರ ರು. ನೀಡಲಾಗುವುದು. ಸದಸ್ಯರಿಗೂ ಸಹ ಉಚಿತ ವಿಮೆ ಮಾಡಿಸಿಕೊಡಲಾಗಿದೆ. ಸಂಘದಲ್ಲಿ 80 ಲಕ್ಷ ಹಣ ಇದೆ. ಹೆಚ್ಚಿನ ಗುಣಮಟ್ಟದ ಹಾಲು ಸರಬರಾಜು ಮಾಡುವುದರಿಂದ ಸಂಘ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ನೀವುಗಳು ಸಹಕಾರಿಯಾಗಬೇಕು ಎಂದು ಕೋರಿದರು.
ಇದೇ ವೇಳೆ ಕಳೆದ ಸಾಲಿನಲ್ಲಿ ಹೆಚ್ಚು ಹಾಲು ಸರಬರಾಜು ಮಾಡಿದ ಧರ್ಮೇಶ, ಪುಟ್ಟಸ್ವಾಮಿಗೌಡ, ಕೆ.ರಾಜೇಶ ಮೂವರಿಗೆ ಪ್ರೋತ್ಸಾಹ ಧನ ನೀಡುವ ಜೊತೆಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ವೈ.ಎಸ್.ದಿನೇಶ್, ಉಪಾಧ್ಯಕ್ಷ ವೆಂಕಟೇಶ್ ವೈ.ವಿ ಮತ್ತು ನಿರ್ದೇಶಕರಾದ ಧರ್ಮೇಶ, ಸಿದ್ದೇಗೌಡ, ರಾಜೇಶ, ತಿಮ್ಮೇಗೌಡ, ಗೋವಿಂದೇಗೌಡ, ಜಯರಾಮ್, ಸುಧಾ, ಜಯಮ್ಮ, ಚೆನ್ನಮ್ಮ ,ಶೋಭಾ, ಮತ್ತು ಗ್ರಾಮದ ಸಂಘದ ಸದಸ್ಯರು ಹಾಗೂ ಕಂಪ್ಯೂಟರ್ ಆಪರೇಟರ್ ವೈ.ಪಿ.ಚಂದ್ರಕಾಂತ , ಸಹಾಯಕ ಮನೋಜ್ , ಸಹಾಯಕಿ ಭಾಗ್ಯಮ್ಮ , ಹಾಲು ಪರೀಕ್ಷಕ ಕೆ.ಪಿ .ರಘು ಮತ್ತು ಇತರರು ಇದ್ದರು.