ಸಾಮಾಜಿಕ ನ್ಯಾಯಕ್ಕಾಗಿ ಬದ್ಧತೆ ಇರುವ ಕಾಂಗ್ರೆಸ್ ಬೆಂಬಲಿಸಿ-ವಿನಯ ಕುಲಕರ್ಣಿ

| Published : Apr 28 2024, 01:23 AM IST

ಸಾಮಾಜಿಕ ನ್ಯಾಯಕ್ಕಾಗಿ ಬದ್ಧತೆ ಇರುವ ಕಾಂಗ್ರೆಸ್ ಬೆಂಬಲಿಸಿ-ವಿನಯ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ನ್ಯಾಯಕ್ಕಾಗಿ ಬದ್ಧತೆ ಇರುವ, ಬಡವರು, ಕೃಷಿಕರು, ಕಾರ್ಮಿಕರ ಹಿತಕ್ಕಾಗಿ ಕಾಂಗ್ರೆಸ್ ಗೆಲುವಿಗೆ ಕೈ ಜೋಡಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಮನವಿ ಮಾಡಿದರು.

ಹಾನಗಲ್ಲ:ಸಾಮಾಜಿಕ ನ್ಯಾಯಕ್ಕಾಗಿ ಬದ್ಧತೆ ಇರುವ, ಬಡವರು, ಕೃಷಿಕರು, ಕಾರ್ಮಿಕರ ಹಿತಕ್ಕಾಗಿ ಕಾಂಗ್ರೆಸ್ ಗೆಲುವಿಗೆ ಕೈ ಜೋಡಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಮನವಿ ಮಾಡಿದರು.ಹಾನಗಲ್ಲ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ಮನೆ ಮನೆಗಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದದೇವರಮಠ ಅವರ ಪರವಾಗಿ ಮತಯಾಚಿಸಿದ ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನುಡಿದಂತೆ ನಡೆವ ಬದ್ಧತೆಯನ್ನು ಹೊಂದಿದೆ. ಬಿಜೆಪಿ ಭಾಷಣ ಮಾಡಿ ಮಾಯವಾಗುತ್ತದೆ. ಗ್ಯಾರಂಟಿ ಯೋಜನೆ ಸಾಕಾರ ಮಾಡಿದ್ದು ಕಾಂಗ್ರೆಸ್, ಬಿಜೆಪಿ ಬಗ್ಗೆ ಯಾವ ಗ್ಯಾರಂಟಿಯೂ ಇಲ್ಲ. ಸಿದ್ದರಾಮಯ್ಯ ಅವರು ನುಡಿದಂತೆ ನಡೆದು, ಇಡೀ ಕರ್ನಾಟಕಕ್ಕೆ ಗೌರವ ಬರುವಂತೆ ಆಡಳಿತ ನಡೆಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಶೇಖರಯ್ಯ ಹಿರೇಮಠ, ರಾಜಶೇಖರ ಹಲಸೂರ, ಶಂಕ್ರಪ್ಪ ಸಂಕಣ್ಣನವರ, ಕರಿಯಪ್ಪ ಗುಡ್ಡದ, ಮಲ್ಲಪ್ಪ ಮುಳಗುಂದ, ಅಶೋಕ ಶಾಂತನಗೌಡ, ಅಶೋಕ ಹೆಳವರ, ಶಾಂತನಗೌಡ ಪಾಟೀಲ, ಬಸವರಾಜ ಬೆಂಡಿಗೇರಿ, ಪ್ರಭು ಸಂಕಣ್ಣನವರ, ಬಸವರಾಜ ಮೆಳ್ಳಿಹಳ್ಳಿ, ಮಂಜಪ್ಪ ತಿಮ್ಮಾಪೂರ, ಬೀರಪ್ಪ ಕುಂದೂರ ಮೊದಲಾದವರು ಈ ಸಂದರ್ಭದಲ್ಲಿದ್ದರು.