ಅಮರನಾಥ್ ಪಾಟೀಲಗೆ ಬೆಂಬಲ ನೀಡಿ: ಹಾಲಪ್ಪ ಆಚಾರ

| Published : May 31 2024, 02:15 AM IST

ಅಮರನಾಥ್ ಪಾಟೀಲಗೆ ಬೆಂಬಲ ನೀಡಿ: ಹಾಲಪ್ಪ ಆಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಜನಹಿತ ಕಾಯುವ ಪಕ್ಷ ಬಿಜೆಪಿ. ಬಿಜೆಪಿಯಿಂದ ರಾಜ್ಯ, ರಾಷ್ಟ್ರಾಭಿವೃದ್ಧಿ ಸಾಧ್ಯ.

ಈಶಾನ್ಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರ ಮಾಜಿ ಸಚಿವ ಮತಯಾಚನೆ

ಕನ್ನಡಪ್ರಭ ವಾರ್ತೆ ಕುಕನೂರು

ಜನಹಿತ ಕಾಯುವ ಪಕ್ಷ ಬಿಜೆಪಿ. ಬಿಜೆಪಿಯಿಂದ ರಾಜ್ಯ, ರಾಷ್ಟ್ರಾಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲಗೆ ಬೆಂಬಲ ನೀಡಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜಿನಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ್ ಪರ ಪ್ರಚಾರ ಮಾಡಿ ಮತಯಾಚನೆ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಹತ್ತು ವರ್ಷದಲ್ಲಿ ರಾಷ್ಟ್ರದ ಅಭಿವೃದ್ಧಿ ಎಷ್ಟಾಗಿದೆ ಎಂದು ಪ್ರತಿಯೊಬ್ಬರಿಗೂ ತಿಳಿದ ವಿಷಯ. ಬಿಜೆಪಿಯಲ್ಲಿ ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ಕೆ ಮೊದಲ ಆದ್ಯತೆ ಇರುತ್ತದೆ. ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಪದವೀಧರ ಕ್ಷೇತ್ರದಲ್ಲಿ ಯಾವುದೇ ತೊಂದರೆ ಇರಲಿ, ಬಿಜೆಪಿ ಬೆಂಬಲವಾಗಿ ಮತ ನೀಡಿದರೆ, ಸಮಸ್ಯೆಗಳ ಪರಿಹಾರಕ್ಕೆ ಪಕ್ಷ ಹಾಗೂ ಅಭ್ಯರ್ಥಿ ಬದ್ಧರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಅಭಿವೃದ್ಧಿ ಕಾರ್ಯಗಳು ಮರೀಚಿಕೆ ಆಗುತ್ತಿವೆ. ಗ್ಯಾರಂಟಿ ಯೋಜನೆಗಳಿಗೆ ಹಣ ಪೂರ್ಣ ಮೀಸಲಿಟ್ಟು, ಹಲವಾರು ಜನಪರ ಯೋಜನೆಗಳು ನಿಂತು ಹೋಗಿವೆ. ಇದರಿಂದ ಸರ್ವತೋಮುಖ ಬೆಳವಣಿಗೆಗೆ ಹೊಡೆತ ಬೀಳುತ್ತದೆ. ಜನರನ್ನು ಸ್ವಾವಲಂಬಿ ಮಾಡುವ ಯೋಜನೆಗಳು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಅವಶ್ಯಕ. ಆದರೆ ಜನರನ್ನು ಗ್ಯಾರಂಟಿ ಯೋಜನೆ ನೆಪದಲ್ಲಿ ಮತ್ತಷ್ಟು ಅವಲಂಬನೆ ಮಾಡುವ ಹಂತದಲ್ಲಿ ಈ ಕಾಂಗ್ರೆಸ್ ಸರ್ಕಾರ ನಡೆದಿದೆ ಎಂದರು.

ಬಿಜೆಪಿ ಯಲಬುರ್ಗಾ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ತಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪೂರಮಠ, ಗುರುಕುಲದ ಕಾರ್ಯದರ್ಶಿ ಜಿ.ವಿ. ಜಾಹಗೀರದಾರ್, ಪಾಲಿಟೆಕ್ನಿಕ್ ಪ್ರಚಾರ್ಯ ಎನ್.ಆರ್. ಕುಕನೂರು, ಮುಖ್ಯ ಶಿಕ್ಷಕ ಸೋಮಶೇಖರ ನಿಲೋಗಲ್, ಲಕ್ಷ್ಮಣ ಬೆದವಟ್ಟಿ, ಸುಭಾಷ ಭಜಂತ್ರಿ, ಈರಣ್ಣ ಬಡಿಗೇರ ಇತರರಿದ್ದರು.