ಸಹಕಾರ ಕ್ಷೇತ್ರದ ಪ್ರಗತಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸಿ: ಶಾಸಕ ಕೆ.ಎಂ ಉದಯ್

| Published : Oct 27 2025, 12:00 AM IST

ಸಹಕಾರ ಕ್ಷೇತ್ರದ ಪ್ರಗತಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸಿ: ಶಾಸಕ ಕೆ.ಎಂ ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ತಾಲೂಕಿನಿಂದ ಮೂವರು ನಿರ್ದೇಶಕರು ಆಯ್ಕೆಯಾದರೆ ಕೈಗಾರಿಕಾ ಹಾಗೂ ಇತರೆ ಸಹಕಾರಿ ಸಂಘಗಳು, ಡೇರಿಗಳು, ಹಾಗೂ ವ್ಯವಸಾಯೋತ್ಪನ್ನ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯ ಬಳಸಿಕೊಂಡು ಗ್ರಾಮೀಣ ಭಾಗದ ರೈತರು, ಸಹಕಾರಿಗಳ ಆರ್ಥಿಕ ಪ್ರಗತಿಗೆ ನೆರವಾಗಬಹುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ರೈತರ ಆರ್ಥಿಕ ಪ್ರಗತಿಗೆ ನೆರವಾಗಿರುವ ಸಹಕಾರ ಕ್ಷೇತ್ರದ ಪ್ರಗತಿಗೆ ಎಂಡಿಡಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸುವಂತೆ ಎಂದು ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.

ಸಮೀಪದ ತೊರೆಬೊಮ್ಮನಹಳ್ಳಿಯಲ್ಲಿ ಮಂಡ್ಯ ಜಿಲ್ಲಾ ಸಹಕಾರಿ ಕೇಂದ್ರ (ಎಂಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಜೊತೆಗೂಡಿ ಸಹಕಾರಿಗಳ ಜೊತೆ ಸಮಾಲೋಚನ ಸಭೆ ನಡೆಸಿ ಮಾತನಾಡಿದರು.

ಸಹಕಾರಿ ಬಂಧುಗಳು ವಿಪಕ್ಷಗಳ ಯಾವುದೇ ಆಮಿಷಗಳಿಗೆ ಒಳಗಾಗದೆ ಮದ್ದೂರು ತಾಲೂಕಿನ ಮೂರು ಕ್ಷೇತ್ರಗಳ ಮಂಡ್ಯ ಜಿಲ್ಲಾ ಕೈಗಾರಿಕಾ ಸಹಕಾರ ಇತರೆ ಸಂಘಗಳ ಪರಿಷತ್ತಿನ ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ ಜೋಗಿಗೌಡ, ಮಂಡ್ಯ ವಿಭಾಗದ (ಮಂಡ್ಯ, ಮದ್ದೂರು, ಮಳವಳ್ಳಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಸ್ಪರ್ಧಿಸಿರುವ ಸಿ.ಚೆಲುವರಾಜು ಹಾಗೂ ಮದ್ದೂರು ತಾಲೂಕಿನ ವ್ಯವಸಾಯೋತ್ಪಾನ ಕೃಷಿ ಪತ್ತಿನ ಸಹಕಾರ ಸಂಘಗಳ ಹಾಲಿ ನಿರ್ದೇಶಕ ಸಂದರ್ಶ ಅವರನ್ನು ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಕೋರಿದರು.

ತಾಲೂಕಿನಿಂದ ಮೂವರು ನಿರ್ದೇಶಕರು ಆಯ್ಕೆಯಾದರೆ ಕೈಗಾರಿಕಾ ಹಾಗೂ ಇತರೆ ಸಹಕಾರಿ ಸಂಘಗಳು, ಡೇರಿಗಳು, ಹಾಗೂ ವ್ಯವಸಾಯೋತ್ಪನ್ನ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯ ಬಳಸಿಕೊಂಡು ಗ್ರಾಮೀಣ ಭಾಗದ ರೈತರು, ಸಹಕಾರಿಗಳ ಆರ್ಥಿಕ ಪ್ರಗತಿಗೆ ನೆರವಾಗಬಹುದು ಎಂದರು.

ಮನ್ಮುಲ್ ನಿರ್ದೇಶಕ ಹರೀಶ್ ಬಾಬು ಮಾತನಾಡಿ, ಕಾಂಗ್ರೆಸ್ ಸರ್ಕಾರ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಅತಿಹೆಚ್ಚು ಅನುದಾನ ನೀಡಿದೆ. ಎಂಡಿಸಿಸಿ ಬ್ಯಾಂಕ್ ಹಾಗೂ ಮನ್ಮುಲ್‌ನಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಸುಧಾರಣೆಯಾಗಿದೆ ಎಂದರು.

ಕೆ.ಎಂ.ಉದಯ್ ಶಾಸಕರಾದ ನಂತರ ವಿಎಸ್‌ಎಸ್‌ಎನ್ ಸಹಕಾರ ಸಂಘಗಳು ಹಾಗೂ ಡೇರಿ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ತಾಲೂಕಿನ ಮೂರು ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಮತ ನೀಡಿ ಗೆಲ್ಲಿಸುವ ಮೂಲಕ ಶಾಸಕರ ಕೈ ಬಲಪಡಿಸಬೇಕು ಎಂದರು.

ಇದೇ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಪುರಸಭಾ ಸದಸ್ಯ ಪ್ರಸನ್ನಕುಮಾರ್, ಭಾರತಿನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ತಾಲೂಕು ಭೂ ನ್ಯಾಯಮಂಡಳಿ ಸದಸ್ಯ ಮಹೇಂದ್ರ, ಕೆಡಿಪಿ ಸಮಿತಿ ಸದಸ್ಯ ಅಭಿಷೇಕಗೌಡ, ಮುಖಂಡರಾದ ಪುಟ್ಟರಾಮು, ಪೂಜಾರಿ ಮಹೇಶ್, ರಾಜೇಂದ್ರ, ದೇವರಹಳ್ಳಿ ದೊಡ್ಡಣ್ಣ, ಮೇಣಸಗೆರೆ ಪ್ರಕಾಶ್, ಮಡೇನಹಳ್ಳಿ ಪ್ರಸಾದ್, ಅಣ್ಣೂರು ವೀರೇಂದ್ರ, ಬಾಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.