ಸಾರಾಂಶ
ನಮ್ಮ ತಂದೆಯವರು ರಾಜ್ಯದ ಮುಖ್ಯಮಂತ್ರಿಗಳಾಗಿ ರಾಜ್ಯವನ್ನು ಪ್ರಗತಿ ಮಾಡುವ ಮೂಲಕ ರಾಜ್ಯಕ್ಕೆ ಸಮರ್ಥ ಆಡಳಿತ ನೀಡಿದ್ದಾರೆ, ಮೋದಿ ಅವರ ಅಪೇಕ್ಷೆಯಂತೇ ದೇಶ ಸೇವೆಗಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ
ಗದಗ: ಭಾರತವನ್ನು ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರ ಮಾಡುವ ಉದ್ದೇಶಕ್ಕಾಗಿಯೇ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಮೂಲಕ ದೇಶ ಮತ್ತಷ್ಟು ಸುಭದ್ರಗೊಳಿಸುವತ್ತ ಪ್ರತಿಯೊಬ್ಬರು ಗಮನ ನೀಡಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ, ಅಖಿಲ ಕರ್ನಾಟಕ ಮೋಚಿಗಾರ ಸಂಘದ ರಾಜ್ಯಾಧ್ಯಕ್ಷ ಶಿವಪ್ಪ ಮುಳಗುಂದ ಹೇಳಿದರು.
ಅವರು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತಯಾಚನೆ ಮಾಡಿ ಮಾತನಾಡಿದರು.ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪುತ್ರ ಭರತ ಬೊಮ್ಮಾಯಿ ಮಾತನಾಡಿ, ನಮ್ಮ ತಂದೆಯವರು ರಾಜ್ಯದ ಮುಖ್ಯಮಂತ್ರಿಗಳಾಗಿ ರಾಜ್ಯವನ್ನು ಪ್ರಗತಿ ಮಾಡುವ ಮೂಲಕ ರಾಜ್ಯಕ್ಕೆ ಸಮರ್ಥ ಆಡಳಿತ ನೀಡಿದ್ದಾರೆ, ಮೋದಿ ಅವರ ಅಪೇಕ್ಷೆಯಂತೇ ದೇಶ ಸೇವೆಗಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ, ಮೋದಿ ಕಂಡ ನವ ಮತ್ತು ವಿಕಸಿತ ಭಾರತಕ್ಕಾಗಿ ಬಸವರಾಜ ಬೊಮ್ಮಾಯಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಮೋದಿ ಸರ್ಕಾರ ರಚಿಸೋಣ ಎಂದರು.
ಈ ಸಂದರ್ಭದಲ್ಲಿ ಪ್ರಶಾಂತ ನಾಯ್ಕರ, ಶಂಕರ ಕಾಕಿ, ದಶರಥ ಕೊಳ್ಳಿ, ಅನೀಲ ಗಡ್ಡಿ, ಬಸವಂತಪ್ಪ ಕರ್ಜಗಿ, ಅಶೋಕ ಮುಳಗುಂದ, ಬೂದಪ್ಪ ಹುಣಶೀಮರದ, ಲಕ್ಷ್ಮಣ ಮುಳಗುಂದ, ಶಂಕರ ಮುಳಗುಂದ, ಬಸವರಾಜ ಗಾರವಾಡ, ಚಿದಾನಂದ ಹೊಸಮನಿ, ಶಿವು ಹಿರೇಮನಿಪಾಟೀಲ್, ಸುಧೀರ ಕಾಟಿಗರ ಸೇರಿದಂತೆ ಹಲವರಿದ್ದರು.