ಕ್ಷೇತ್ರ, ದೇಶದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ: ರೂಪಾಲಿ ನಾಯ್ಕ

| Published : May 02 2024, 12:17 AM IST

ಕ್ಷೇತ್ರ, ದೇಶದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ: ರೂಪಾಲಿ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ಅವರನ್ನು ಮೂರನೆ ಬಾರಿ ಪ್ರಧಾನಿಯಾಗಿಸಲು ಜೈ ಶ್ರೀರಾಮ ಘೋಷಣೆಯ ಮೂಲಕ ಮೇ 7ರಂದು ಕಮಲದ ಗುರುತಿಗೆ ಮತದಾನ ಮಾಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮನವಿ ಮಾಡಿದರು.

ಅಂಕೋಲಾ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ, ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆಗೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರೂಪಾಲಿ ಎಸ್‌. ನಾಯ್ಕ ವಿನಂತಿಸಿದರು.

ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿಯ ಕಲ್ಲೇಶ್ವರ, ಸುಂಕಸಾಳ ಪಂಚಾಯಿತಿಯ ಹೆಬ್ಬುಳ, ಅಚವೆ ಪಂಚಾಯಿತಿಯ ಹೊಸಕಂಬಿ, ಸಗಡಗೆರಿಯ ದೇವಿಗದ್ದೆ, ಬೆಳಂಬರ, ಬೆಲೆಕೇರಿ, ಹಾರವಾಡ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಪ್ರಚಾರ ಸಭೆ ನಡೆಸಿ ಮಾತನಾಡಿದರು.

ನರೇಂದ್ರ ಮೋದಿ ಅವರನ್ನು ಮೂರನೆ ಬಾರಿ ಪ್ರಧಾನಿಯಾಗಿಸಲು ಜೈ ಶ್ರೀರಾಮ ಘೋಷಣೆಯ ಮೂಲಕ ಮೇ 7ರಂದು ಕಮಲದ ಗುರುತಿಗೆ ಮತದಾನ ಮಾಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಮನವಿ ಮಾಡಿದರು.

ಮೋದಿ ಒಬ್ಬ ದೇವಮಾನವ, ವಿಶ್ವನಾಯಕ ಶಿರಸಿಗೆ ಬಂದ ಸಂದರ್ಭದಲ್ಲಿ ಶಾಲು ಹೊದಿಸಿ ರಾಮಮಂದಿರ ನಿರ್ಮಿಸಿ ಕೊಟ್ಟಿದ್ದಕ್ಕೆ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದಾಗ ಅವರು ಭಾವುಕರಾದರು. 500 ವರ್ಷ ಹೋರಾಟದ ನಂತರ ರಾಮಮಂದಿರ ನಿರ್ಮಾಣವಾಗಿದೆ. ಅದಕ್ಕೆ ಪ್ರಧಾನಿಯವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಪರೇಶ ಮೇಸ್ತಾ ಕೇಸ್‌ನಲ್ಲಿ ಕಾಂಗ್ರೆಸ್ ಎಲ್ಲಾ ಸಾಕ್ಷಿ ನಾಶ ಮಾಡಿ ನಂತರ ಸಿಬಿಐಗೆ ನೀಡಿತ್ತು. ವೋಟ್‌ ಬ್ಯಾಂಕ್ ರಾಜಕೀಯವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಗೋಪಾಲ ಕೃಷ್ಣ ವೈದ್ಯ, ಬಿಜೆಪಿ ಪ್ರಮುಖರು, ರಾಜೇಂದ್ರ ನಾಯ್ಕ, ನಾಗರಾಜ ನಾಯಕ, ಸವಿತಾ ಬಾನಾವಳಿಕರ, ಜಗದೀಶ ನಾಯಕ ಮೊಗಟಾ, ಭಾಸ್ಕರ ನಾರ್ವೆಕರ, ಶ್ರೀಧರ ನಾಯ್ಕ ಹಾಗೂ ಸ್ಥಳೀಯ ಪ್ರಮುಖರು, ಪದಾಧಿಕಾರಿಗಳು, ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.