ದೇಶದ ಉಜ್ವಲ ಭವಿಷ್ಯಕ್ಕಾಗಿ ಬಿಎಸ್ಪಿ ಬೆಂಬಲಿಸಿ: ಪ್ರ.ಕಾರ್ಯದರ್ಶಿ ರಾಧಾಕೃಷ್ಣ ಕರೆ

| Published : Aug 11 2025, 12:30 AM IST

ದೇಶದ ಉಜ್ವಲ ಭವಿಷ್ಯಕ್ಕಾಗಿ ಬಿಎಸ್ಪಿ ಬೆಂಬಲಿಸಿ: ಪ್ರ.ಕಾರ್ಯದರ್ಶಿ ರಾಧಾಕೃಷ್ಣ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಮಹಾನ್ ಮೇಧಾವಿ ಅಂಬೇಡ್ಕರ್ ಜನಿಸದಿದ್ದರೆ ಇಂದಿಗೂ ಗುಲಾಮರಾಗಿ ಬದುಕುವಂಥ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೀಗ ಸಂವಿಧಾನದಡಿ ಜನತೆಯು ಉದ್ಯೋಗ, ಅಧಿಕಾರ, ಸ್ವಾತಂತ್ರ್ಯತೆ ಹಾಗೂ ಸಾಮಾಜಿಕ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅಂಬೇಡ್ಕರ್ ಸಿದ್ಧಾಂತದಡಿ ಉಗಮವಾಗಿರುವ ಬಿಎಸ್ಪಿಯನ್ನು ದೇಶದ ಉಜ್ವಲ ಭವಿಷ್ಯಕ್ಕಾಗಿ ಮತದಾರರು ಸ್ವಯಂ ಪ್ರೇರಿತರಾಗಿ ಬೆಂಬಲಿಸಬೇಕು ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಕರೆ ನೀಡಿದರು.

ಜಿಲ್ಲಾ ಬಿಎಸ್ಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಸಹೋದರತ್ವ ಸಮಿತಿಯ 105ನೇ ಮಾಸಿಕ ಸಭೆಯನ್ನು ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಸ್ಥಳೀಯ ಮಟ್ಟದ ಹಲವಾರು ಚುನಾವಣೆ ಎದುರಾಗಲಿವೆ. ಆ ನಿಟ್ಟಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಲು ಮುಂದಾಗಬೇಕು. ಅಂಬೇಡ್ಕರ್ ಚಿಂತನೆಗಳಡಿ ಕಾನ್ಸಿರಾಂ ನಿರ್ಮಿಸಿರುವ ಬಿಎಸ್ಪಿಯ ರಥವನ್ನು ಎಳೆಯುವ ಮೂಲಕ ಕಾರ್ಯಕರ್ತರು ಮತ ಚಲಾಯಿಸಲು ಪ್ರೇರೇಪಿಸಬೇಕು ಎಂದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ದೇಶದಲ್ಲಿ ಮಹಾನ್ ಮೇಧಾವಿ ಅಂಬೇಡ್ಕರ್ ಜನಿಸದಿದ್ದರೆ ಇಂದಿಗೂ ಗುಲಾಮರಾಗಿ ಬದುಕುವಂಥ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೀಗ ಸಂವಿಧಾನದಡಿ ಜನತೆಯು ಉದ್ಯೋಗ, ಅಧಿಕಾರ, ಸ್ವಾತಂತ್ರ್ಯತೆ ಹಾಗೂ ಸಾಮಾಜಿಕ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸಹೋದರತ್ವ ಸಮಿತಿ ಸಂಸ್ಥಾಪಕ ಕೆ.ಆರ್.ಗಂಗಾಧರ್ ಮಾತನಾಡಿ, ದೌರ್ಜನ್ಯ, ಶೋಷಣೆಗೆ ಒಳಗಾದವರನ್ನು ಸಹೋದರತ್ವ ಸಮಿತಿಯಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಹೋದರತ್ವ ಸಮಿತಿ ಕಾರ್ಯದರ್ಶಿ ಕೆ.ಎಸ್.ಮಂಜುಳಾ, ಮುಖಂಡರಾದ ಆರ್.ವಸಂತ್, ಗಿರೀಶ್, ಹೊನ್ನಪ್ಪ, ಎನ್.ಎಸ್.ಮಂಜುನಾಥ್, ಮಗಣ್ಣಗೌಡ, ಮಹಾದೇವಮ್ಮ ಇದ್ದರು.