ತುಮಕೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್‌ ಬೆಂಬಲಿಸಿ: ಎಸ್.ಪಿ.ಮುದ್ದಹನುಮೇಗೌಡ

| Published : Mar 31 2024, 02:04 AM IST

ತುಮಕೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್‌ ಬೆಂಬಲಿಸಿ: ಎಸ್.ಪಿ.ಮುದ್ದಹನುಮೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಕನಸು ಕಂಡಿರುವ ತಮಗೆ ಜಿಲ್ಲೆಯ ಜನತೆಯ ಬೆಂಬಲ ಬೇಕಿದೆ. ಕಳೆದ ಬಾರಿ ಸಂಸದನಾದ ಸಂಧರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡುವ ಬಯಕೆ ಇದೆ. ಹಾಗಾಗಿ ನನ್ನನ್ನು ಬೆಂಬಲಿಸಿ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಜನರಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತುಮಕೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಕನಸು ಕಂಡಿರುವ ತಮಗೆ ಜಿಲ್ಲೆಯ ಜನತೆಯ ಬೆಂಬಲ ಬೇಕಿದೆ. ಕಳೆದ ಬಾರಿ ಸಂಸದನಾದ ಸಂಧರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡುವ ಬಯಕೆ ಇದೆ. ಹಾಗಾಗಿ ನನ್ನನ್ನು ಬೆಂಬಲಿಸಿ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಜನರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.

ಪಟ್ಟಣದಲ್ಲಿರುವ ಬೆಮಲ್ ಕಾಂತರಾಜ್ ಅವರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನನ್ನು ಗೆಲ್ಲಿಸಿದ ಜನರ ಭಾವನೆಗೆ ಚ್ಯುತಿ ತಂದಿಲ್ಲ. ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದೇನೆ. ನನಗೆ ಆತ್ಮ ತೃಪ್ತಿ ಇದೆ. ಆನರ ನಂಬಿಕೆ ಉಳಿಸಿಕೊಂಡಿದ್ದೇನೆ. ಎಚ್‌ಎ ಎಲ್, ಚತುಷ್ಪಥ ರಸ್ತೆ, ಎಚ್‌ಎಂಟಿಯ ಉಳಿವು ಸೇರಿದಂತೆ ಗುರುತರವಾದ ಕೆಲಸ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಬೆಂಗಳೂರಿಗೆ ಪರ್‍ಯಾಯವಾಗಿ ತುಮಕೂರನ್ನು ಬೆಳೆಸುವ ಜವಾಬ್ದಾರಿ ಇದೆ. ಮೆಟ್ರೋ ತರಬೇಕಿದೆ. ತೆಂಗಿನ ಬೆಳೆಗಳಿಗೆ ಮತ್ತು ಹುಣಸೆಗೆ ಪಾರ್ಕ್ ನಿರ್ಮಾಣ ಮಾಡಿಸಬೇಕಿದೆ ಅಲ್ಲದೇ ಹೇಳುತ್ತಾ ಹೋದರೆ ನೂರಾರು ಯೋಜನೆಗಳು ಕಾರ್ಯಗತವಾಗಬೇಕಿದೆ ಎಂದು ಮುದ್ದಹನುಮೇಗೌಡ ಹೇಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರ ಸೋಲಿಗೆ ನಾನು ಕಾರಣ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ೯ ಕಾಂಗ್ರೆಸ್ ಎಂ.ಪಿ ಗಳಲ್ಲಿ ಎಲ್ಲರಿಗೂ ಮತ್ತೆ ಟಿಕೆಟ್ ನೀಡಲಾಯಿತು. ಆದರೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದ್ದರು. ಮಾಜಿ ಪ್ರಧಾನಿಗಳು ತುಮಕೂರು ಕ್ಷೇತ್ರದಿಂದ ಸೋಲು ಕಂಡಿದ್ದು ನಮಗೂ ತುಂಬಾ ನೋವಾಗಿದೆ.

ನಾನು ಹಾಲಿ ಸಂಸದನಾಗಿದ್ದರು ಯಾರೂ ಸಹ ಚುನಾವಣೆಯ ಪ್ರಚಾರಕ್ಕೆ ಕರೆಯಲಿಲ್ಲ. ಸಹ ಮಧುಗಿರಿ ಕಾರ್ಯಕ್ರಮದಲ್ಲಿ ದೇವೇಗೌಡರ ಸಮ್ಮುಖದಲ್ಲಿ ಮತ ಕೇಳಿದ್ದೇನೆ. ದೇವೇಗೌಡರು ನಾನು ಜೊತೆಯಲ್ಲಿ ಸಂಸದರಾಗಿ ಕೆಲಸ ಮಾಡಿದ್ದೇವೆ. ರೈತರ ಪರವಾಗಿ ಹಾಗೂ ತೆಂಗು ಬೆಳೆಗಾರರ ಪರವಾಗಿ ನಾನು ಲೋಕಸಭೆಯಲ್ಲಿ ಮಾತನಾಡಿದ್ದನ್ನು ಕಂಡು ದೇವೇಗೌಡರೇ ನನ್ನನ್ನು ಹೊಗಳಿದರು. ದೇವೇಗೌಡರ ಬಗ್ಗೆ ನಾನು ಎಂದೂ ಕೆಟ್ಟದ್ದಾಗಿ ಯೋಚನೆ ಮಾಡಿಲ್ಲ. ಮುದ್ದಹನುಮೇಗೌಡ ಒಬ್ಬ ಡಿಫರೆಂಟ್ ಮನುಷ್ಯ. ನ್ಯಾಯಾಧೀಶನಾಗಿ ಕೆಲಸ ಮಾಡಿದ್ದೇನೆ. ಜನ ಸಾಮಾನ್ಯರು ನನ್ನನ್ನು ಬೇರೆ ದೃಷ್ಟಿಕೋನದಲ್ಲಿ ನೋಡುತ್ತಾರೆ. ದೇವೇಗೌಡರ ಸೋಲಿಗೆ ನಾನು ಕಾರಣ ಎಂಬ ಒಂದೇ ಒಂದು ಸಾಕ್ಷ್ಯ ತೋರಿಸಲಿ ಎಂದು ಮುದ್ದಹನುಮೇಗೌಡ ಸವಾಲು ಹಾಕಿದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿ ಹಲವು ಕ್ರಾಂತಿಕಾರಿ ಬದಲಾವಣೆ ಹಲವು ಯೋಜನೆಗಳನ್ನು ನೀಡಿದ್ದಾರೆ. ಫುಡ್ ಸೆಕ್ಯುರಿಟಿ, ನರೇಗಾ, ಆರ್.ಟಿ.ಐ ಅಂತಹ ಜನಪರವಾದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆದರೆ ೧೦ ವರ್ಷದ ಮೋದಿ ಸರ್ಕಾರದ ಸಾಧನೆ ಶೂನ್ಯವಾಗಿದೆ. ಪ್ರಧಾನಿ ಮೋದಿಯವರು ಕೇವಲ ಭಾವಾನಾತ್ಮಕವಾಗಿ ಮಾತನಾಡುತ್ತಾರೆ. ಅವರ ಸುಳ್ಳು ಭಾಷಣಗಳಿಂದ ಜನಸಾಮಾನ್ಯ ಜನರ ಹೊಟ್ಟೆ ತುಂಬುವುದಿಲ್ಲ. ತುಮಕೂರು ಕ್ಷೇತ್ರದಲ್ಲಿ ಮೋದಿಯವರ ಪ್ರಭಾವ ಇಲ್ಲ ಎಂದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಜನಸಾಮಾನ್ಯರಿಗೆ ಬಹಳ ಅನುಕೂಲವಾಗಿದೆ. ಜನಸಾಮಾನ್ಯರು ಸಹ ಆರ್ಥಿಕವಾಗಿ ಸಧೃಡರಾಗಿ ದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇದು ಉಪಯೋಗವಾಗಲಿದೆ. ಸಾಮಾನ್ಯ ಜನರು ಕಾಂಗ್ರೆಸ್ ಪಕ್ಷದ ಪರವಾಗಿ ಕೈ ಹಿಡಿಯುವ ಭರವಸೆ ಇದೆ. ಈ ಬಾರಿ ರಾಜ್ಯದಲ್ಲಿ ೨೦ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂದರು. ತಾಲೂಕಿನ ಕುಣಿಕೆನಹಳ್ಳಿ, ಕೋಡಿಹಳ್ಳಿ, ದುಂಡಾ ಗ್ರಾಮಗಳಲ್ಲಿ ಕೋಬಾಲ್ಡ್, ನಿಕ್ಕಲ್ ಗಣಿಗಾರಿಕೆ ಪ್ರಾರಂಭ ಮಾಡಲು ನಾನು ಬಿಡುವುದಿಲ್ಲ. ನಾನು ನಿಮ್ಮ ಪರವಾಗಿ ಹೋರಾಟ ಮಾಡುತ್ತೇನೆ. ನನಗೆ ಚುನಾವಣೆಯಲ್ಲಿ ಮತಹಾಕಿ ಗೆಲ್ಲಿಸಿ ನನಗೆ ಶಕ್ತಿ ತುಂಬಬೇಕು. ನಿಮ್ಮ ದನಿಯಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ನಿಮ್ಮ ಪರವಾಗಿ ಮಾತನಾಡುತ್ತೇನೆ. ಮತ ಬಹಿಷ್ಕಾರ ಸರಿಯಲ್ಲ. ಎಲ್ಲರೂ ಮತ ಚಲಾವಣೆ ಮಾಡಬೇಕು ಎಂದು ಮನವಿ ಮಾಡಿದರು. ಈ ಸಂಧರ್ಭದಲ್ಲಿ ಪಟ್ಟಣದ ವಕೀಲರ ಸಂಘಕ್ಕೆ ಭೇಟಿ ನೀಡಿ ವಕೀಲರ ಜೊತೆ ಚರ್ಚಿಸಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಳಾಲ ನಾಗರಾಜು, ಗುಡ್ಡೇನಹಳ್ಳಿ ಪ್ರಸನ್ನಕುಮಾರ್, ಮುಖಂಡರಾದ ಎನ್.ಆರ್.ಜಯರಾಮ್, ಸುಬ್ರಮಣಿ ಶ್ರೀಕಂಠೇಗೌಡ, ನಂಜುಂಡಪ್ಪ, ಲಕ್ಷ್ಮೀದೇವಮ್ಮ, ಪಟ್ಟಣ ಪಂಚಾಯಿತಿ ಸದಸ್ಯ ಯಜಮಾನ್ ಮಹೇಶ್, ಮೇಘನಾ ಸುನಿಲ್, ಮಾಜಿ ಸದಸ್ಯ ಶಶಿಶೇಖರ್, ಗೊಣಿತಮಕೂರು ಕಾಂತರಾಜು, ಮಾಳೆ ಕೃಷ್ಣಪ್ಪ ಸೇರಿದಂತೆ ಹಲವು ಮುಖಂಡರು ಇದ್ದರು.