ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ನಿಶಾಂತ್ ಅವರು ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡುತ್ತಿರುವ ಸಮಾಜ ಸೇವೆ, ಮತದಾರರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಅವರಿಗೆ ಬೆಂಬಲ ನೀಡಲಿದ್ದೇವೆ ಎಂದು ಉಪ್ಪಾರ ಸಮುದಾಯದ ಮುಖಂಡ ಚಿಕ್ಕನಂಜ ಶೆಟ್ಟಿ ತಿಳಿಸಿದರು.ಹನೂರು ಕ್ಷೇತ್ರ ವ್ಯಾಪ್ತಿಯ ಮಧುವನಹಳ್ಳಿ ಗ್ರಾಮದಲ್ಲಿ ಮಾಧ್ಯಮದ ಜತೆ ಮಾತನಾಡಿ, ಕಳೆದ ಐದು ವರ್ಷಗಳಿಂದ ಯುವ ಮುಖಂಡ ನಿಶಾಂತ್ ಸಚಿವರು, ಶಾಸಕರಾಗಿ ಮಾಡುವ ಕೆಲಸವನ್ನು ಅಧಿಕಾರವಿಲ್ಲದೆ ಕ್ಷೇತ್ರದ ಜನರಿಗೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇವರಿಗೆ ಕೆಟ್ಟ ಹೆಸರು ತರಲು ಕಾಣದ ಕೈಗಳು ಜಿನಕನಹಳ್ಳಿ ಗ್ರಾಮದಲ್ಲಿ ನಿಶಾಂತ್ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಯಾವುದೋ ವಿಡಿಯೋ ಕಳುಹಿಸಿ ಮಾಧ್ಯಮದಲ್ಲಿ ಬರುವಂತೆ ಮಾಡಿದ್ದಾರೆ.
ಇದು ಸತ್ಯಕ್ಕೆ ದೂರವಾದ ವಿಚಾರ ನಿಶಾಂತ್ ಅವರು ಪ್ರತಿಯೊಂದು ಹಳ್ಳಿಗೂ ತಮ್ಮದೇ ಆದ ಕೈಲಾದ ಸಹಾಯ ಮಾಡಿದ್ದಾರೆ. ಅಂಗವಿಕಲರು ಮಠಮಾನ್ಯಗಳು, ದೇವಸ್ಥಾನಗಳು ಸಮುದಾಯ ಭವನಗಳು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಇವರ ಸೇವೆಯನ್ನು ಮತ್ತಷ್ಟು ಪಡೆಯಬೇಕಾದರೆ ಇವರನ್ನು ಮುಂದಿನ ದಿನಗಳಲ್ಲಿ ನಮ್ಮ ಜನಪ್ರತಿನಿಧಿಯನ್ನಾಗಿ ಮಾಡಲು ಶ್ರಮಿಸುತ್ತೇವೆ ಎಂದರು.ಪಕ್ಷದ ಮುಖಂಡ ವೃಷಭೇಂದ್ರ ಎಂಬವರು ಇವರಿಗೆ ಕೆಟ್ಟ ಹೆಸರು ತರಲು ಮಾಧ್ಯಮಕ್ಕೆ ವಿಡಿಯೋ ಕಳುಹಿಸಿದ್ದಾರೆ. ಇವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು. ಮಧುವನಹಳ್ಳಿ ಗ್ರಾಮದ ಮಹದೇವಸ್ವಾಮಿ ಮಾತನಾಡಿ, ಯುವ ಮುಖಂಡ ನಿಶಾಂತ್ ಜನಪ್ರಿಯತೆ ಸಹಿಸದ ಕೆಲವು ಕಿಡಿಗೇಡಿಗಳು ಅವರ ಹೆಸರಿಗೆ ಕೆಟ್ಟ ಹೆಸರು ತರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ಮಧುವನಹಳ್ಳಿ ಗ್ರಾಮಕ್ಕೆ 28 ಲಕ್ಷಕ್ಕೂ ಹೆಚ್ಚು ಆರ್ಥಿಕ ಸಹಾಯ ಮಾಡಿದ್ದಾರೆ. ಅವರಿಗೆ ಋಣಿಯಾಗಿ ಇರಬೇಕಾಗಿರುವುದು ನಮ್ಮ ಕರ್ತವ್ಯ. ಮುಂದಿನ ದಿನಗಳಲ್ಲಿ ಆ ದೇವರು ಅವರಿಗೆ ಮತ್ತಷ್ಟು ಅಧಿಕಾರ ಕರುಣಿಸಲಿ, ರಾಜಕೀಯದಲ್ಲಿ ಸಣ್ಣಪುಟ್ಟ ವೈಷಮ್ಯ, ಟೀಕೆ ಟಿಪ್ಪಣಿಗಳು ಬರುವುದು ಸಹಜ ಇದನ್ನೆಲ್ಲವನ್ನು ಮೆಟ್ಟಿ ನಿಂತರೆ ಮಾತ್ರ ನಿಜವಾದ ಜನನಾಯಕನಾಗಲು ಸಾಧ್ಯ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಯಾವುದಕ್ಕೂ ಹೆದರುವುದು ಬೇಡ ನೀವು ನಿಮ್ಮ ಸೇವೆಯನ್ನು ಮುಂದುವರೆಸಿ ಎಂದು ಧೈರ್ಯ ತುಂಬಿದರು.ಮಧುವನಹಳ್ಳಿ ಗ್ರಾಮದ ವಿವಿಧ ಸಮುದಾಯದ ಮುಖಂಡರಾದ ಕಪ್ಪಣಶೆಟ್ಟರು ಮಾಸ್ಟರ್, ಕೆಂಪಶೆಟ್ರು, ಉತ್ತಮ್, ಮಹೇಶ್, ರಾಚಪ್ಪಾಜಿ, ನಿಂಗರಾಜು, ರಂಗಸ್ವಾಮಿ, ಆರ್.ಮಹದೇವಸ್ವಾಮಿ, ಆಟೋ ಚಾಲಕರ ಸಂಘದ ಅಧ್ಯಕ್ಷ ರಾಜೇಶ್, ಮಹದೇವಸ್ವಾಮಿ, ದೊಡ್ಡಸಿದ್ದಶೆಟ್ಟಿ ಹಾಜರಿದ್ದರು.