ದೇಶಾದ್ಯಂತ ಔಷಧ ಮಳಿಗೆಗಳ ಬಂದ್‌ಗೆ ಕರೆ ಕೊಟ್ಟಿದ್ದು, ಬುಧವಾರ ಕುಂದಾಪುರದಲ್ಲೂ ಬಹುತೇಕ ಔಷಧಿ ಅಂಗಡಿಗಳು ಮುಚ್ಚಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ದೇಶಾದ್ಯಂತ ಔಷಧ ಮಳಿಗೆಗಳ ಬಂದ್‌ಗೆ ಕರೆ ಕೊಟ್ಟಿದ್ದು, ಬುಧವಾರ ಕುಂದಾಪುರದಲ್ಲೂ ಬಹುತೇಕ ಔಷಧಿ ಅಂಗಡಿಗಳು ಮುಚ್ಚಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಕುಂದಾಪುರ, ಕೋಟೇಶ್ವರ ಹಾಗೂ ತಾಲುಕಿನ ಬಹುತೇಕ ಕಡೆಗಳಲ್ಲಿ ಔಷಧಿ ವ್ಯಾಪಾರಸ್ಥರು ಬಂದ್‌ಗೆ ಬೆಂಬಲ ನೀಡಿ ಹರತಾಳ ನಡೆಸಿದ್ದರಿಂದಾಗಿ ಸಾರ್ವಜನಿಕರಿಗೆ ಕೆಲ ಅಗತ್ಯದ ಔಷಧಿಗಳು ಸಿಗದೆ ಸ್ವಲ್ಪ ಮಟ್ಟಿಗೆ ತೊಂದರೆ ಅನುಭವಿಸುವಂತಾಯಿತು. ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವು ಖಾಸಗಿ ಆಸ್ಪತ್ರೆಗಳ ಬಳಿಯ ಮೆಡಿಕಲ್ ಅಂಗಡಿಗಳು ತೆರೆದಿದ್ದುದರಿಂದ, ಸಾರ್ವಜನಿಕರಿಗೆ ಹೇಳಿಕೊಳ್ಳುವ ಅನಾನುಕೂಲ ಆಗಿಲ್ಲ.

ಮನವಿ ಸಲ್ಲಿಕೆ : ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘಟನೆ ನಿರ್ದೇಶನದಂತೆ ಉಡುಪಿ ಜಿಲ್ಲಾ ವ್ಯಾಪಾರಸ್ಥರ ಸಂಘದ ಸೂಚನೆಯಂತೆ ಸಂಘದ ಗೌರವಾಧ್ಯಕ್ಷ ಹಲ್ಸನಾಡ್ ಸದಾಶಿವ್ ರಾವ್ ನೇತೃತ್ವದಲ್ಲಿ ಸಂಘಟನೆ ಸದಸ್ಯರು ಮಿನಿ ವಿಧಾನಸೌಧಕ್ಕೆ ತೆರಳಿ ಉಪ ತಹಸೀಲ್ದಾರ್ ಪ್ರಕಾಶ್ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.

ದಿನಕರ್ ಶೆಟ್ಟಿ, ರಾಮಚಂದ್ರ ಶೆಟ್ಟಿ, ಮಾರ್ಕೋಡು ಸುಧೀರ್ ಶೆಟ್ಟಿ, ಕರುಣಾಕರ ಹೆಗ್ಡೆ, ಗಿರೀಶ್ ಹಲ್ಸನಾಡ್, ಮೀನಾ ಸುರೇಶ್, ನಟರಾಜ, ನೂತನ್ ಪ್ರಸನ್ನ, ಕಪಿಲ ಕೃಷ್ಣ, ರಾಘವೇಂದ್ರ ಹೆಬ್ಬಾರ್, ಹರೀಶ, ಉದಯ ಭಂಡಾರ್ಕರ್, ಗಣೇಶ್ ಬೆಟ್ಟನ್, ಕಾರ್ತಿಕೇಯ ಹಲ್ಸನಾಡ ಇದ್ದರು.