ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಕಲ್ಪತರು ನಾಡು ತಿಪಟೂರು ಜಿಲ್ಲೆಯಾಗಬೇಕೆಂಬುದು ಜನರ ಬಹುದಿನಗಳ ಹೋರಾಟವಾಗಿದ್ದು ಜಿಲ್ಲಾ ಕೇಂದ್ರದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು ಸೂಕ್ತ ಸಂದರ್ಭದಲ್ಲಿ ಎಲ್ಲಾ ಶಾಸಕರು ಸೇರಿ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ತಿಳಿಸಿದರು.ನಗರದ ಜಿಕೆಎಂ ನಗರದಲ್ಲಿ ಟೀಮ್ ಹಲ್ಕ್ ವತಿಯಿಂದ ಆಯೋಜಿಸಿದ ಮಿಸ್ಟರ್ ತಿಪಟೂರು ದೇಹಧಾರ್ಡ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ತಿಪಟೂರು ಜಿಲ್ಲೆಯಾಗಬೇಕು ಎನ್ನುವುದು ಈ ಭಾಗದ ಜನರ ಒತ್ತಾಸೆಯಾಗಿದ್ದು ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಅಗತ್ಯ ಸಮಯದಲ್ಲಿ ಎಲ್ಲಾ ಶಾಸಕರು ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ. ತಿಪಟೂರು, ಅರಸೀಕೆರೆ, ಚನ್ನರಾಯಪಟ್ಟಣ್ಣ, ಚಿಕ್ಕನಾಯ್ಕನಹಳ್ಳಿ, ತುರುವೇಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ರೋಗಕ್ಕೆ ಒಳಗಾಗಿರುವ ತೆಂಗಿಗೆ ಸೂಕ್ತ ಔಷೋಧೋಪಚಾರಕ್ಕೆ ಕೇರಳದಿಂದ ಬಂದ ತಜ್ಞರ ತಂಡಸೂಚನೆ ನೀಡಿದ್ದು ಮುಂದಿನ ವಾರದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಹಾಗೂ ಅನೇಕ ಮಂತ್ರಿಗಳು ಅರಸೀಕೆರೆಗೆ ಆಗಮಿಸುತ್ತಿದ್ದಾರೆ. ತೆಂಗುಬೆಳೆಗಾರರಿಗೆ ಆಗಿರುವ ತೊಂದರೆ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು. ತೆಂಗಿಗೆ ಆವರಿಸಿರುವ ರೋಗ ನಿವಾರಣಗೆ ಕನಿಷ್ಠ 250 ರಿಂದ 300ಕೋಟಿ ಖರ್ಚಾಗುತ್ತದೆ. ಈಗ ಸರ್ಕಾರ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸಬೇಕು. ಈ ನಿಟ್ಟಿನಲ್ಲಿ ಪಕ್ಷಾತೀತ ಹೋರಾಟ ಅಗತ್ಯವಿದ್ದು, ರೈತರ ಹಿತಕ್ಕಾಗಿ ಎಲ್ಲರೂ ಸಂಘಟಿತ ಹೋರಾಟ ಮಾಡಬೇಕಿದೆ ಎಂದ ಅವರು, ಮನುಷ್ಯನ ಉತ್ತಮ ಆರೋಗ್ಯ ನಿರಂತರ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು. ಯುವಕರು ದುಶ್ಚಟ ಬಿಟ್ಟು ಸಧೃಡ ಆರೋಗ್ಯ ಕೊಳ್ಳಬೇಕು. ಈ ನಿಟ್ಟಿನಲ್ಲಿ ಟೀಮ್ ಹಲ್ಕ್ ಆಯೋಜನೆ ಮಾಡಿರುವ ದೇಹಧಾರ್ಡ್ಯ ಸ್ಪರ್ಧೆ ಸ್ಫೂರ್ತಿದಾಯಕವಾಗಿದೆ ಎಂದರು ನಿವೃತ್ತ ಎಸಿಪಿ ಹಾಗೂ ಬಿಜೆಪಿ ಮುಖಂಡ ಲೋಕೇಶ್ವರ ಮಾತನಾಡಿ ಯುವಕರು ದುಶ್ಚಟಗಳಿಗೆ ಬಲಿಯಾಗದೆ ವ್ಯಾಯಾಮ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬೇಕು. ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಇದರಿಂದ ಆರೋಗ್ಯವು ಚೆನ್ನಾಗಿರುತ್ತದೆ ಸಮಾಜದಿಂದಲ್ಲೂ ಗೌರವ ಸಿಗಲಿದೆ ಎಂದರು. ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಯಮುನಾ, ಉಪಾಧ್ಯಕ್ಷೆ ಮೇಘನಾ, ಅರಸೀಕೆರೆ ನಗರಸಭೆ ಅಧ್ಯಕ್ಷ ಸಮ್ಮಿವುಲ್ಲಾ, ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಸೈಫುಲ್ಲ, ಮುತ್ತಾವಲ್ಲಿ ಮಹಮದ್ ದಸ್ತಗೀರ್, ಸಮೀವುಲ್ಲಾ ಮತ್ತಿರರಿದ್ದರು. ದೇಹಧಾರ್ಡ್ಯ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಬಹುಮಾನ ಪ್ರಜ್ವಲ್ ಹುಳಿಯಾರ್, ದ್ವಿತೀಯ ಭರತ್ ತಿಪಟೂರು ಟೀಮ್ ಹಲ್ಕ್, ತೃತೀಯ ಸ್ಥಾನ ಘಜ಼ಾಲಿ ಹುಳಿಯಾರು ಪಡೆದುಕೊಂಡರು.