ಭ್ರಷ್ಟಾಚಾರ ತೊಲಗಿಸಲು ಮೋದಿ ಬೆಂಬಲಿಸಿ

| Published : Apr 26 2024, 12:50 AM IST

ಸಾರಾಂಶ

ಭಾರತದಲ್ಲಿ ಭ್ರಷ್ಟಾಚಾರದ ಜತೆಗೆ ಕಡುಬಡತನವನ್ನೂ ಕೊನೆಗೊಳಿಸಬೇಕೆಂದು ಮೋದಿ ಸಂಕಲ್ಪ ಮಾಡಿದ್ದಾರೆ. ಪ್ರಧಾನಿಯಾದ ಮೊದಲ ದಿನದಿಂದಲೂ ಇದಕ್ಕಾಗಿ ಶ್ರಮಿಸಿದ್ದಾರೆ.

ಧಾರವಾಡ:

ಬಡವರ ಹೊಟ್ಟೆ ಮೇಲೆ ಹೊಡೆಯುವಂತಿದ್ದ ಭ್ರಷ್ಟಾಚಾರ ತೊಲಗಿಸಲು ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕಲಘಟಗಿ ವಿಧಾನಸಭಾ ಕ್ಷೇತ್ರದ ಕಲಕೇರಿ ಗ್ರಾಮದಲ್ಲಿ ಗುರುವಾರ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು. ಭ್ರಷ್ಟಾಚಾರ ನಿಯಂತ್ರಣಕ್ಕೆ ಮೋದಿ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಉಪಕ್ರಮಗಳನ್ನು ಜಾರಿಗೊಳಿಸಿದ್ದಾರೆ ಎಂದು ಪ್ರತಿಪಾದಿಸಿದರು.

ಭಾರತದಲ್ಲಿ ಭ್ರಷ್ಟಾಚಾರದ ಜತೆಗೆ ಕಡುಬಡತನವನ್ನೂ ಕೊನೆಗೊಳಿಸಬೇಕೆಂದು ಮೋದಿ ಸಂಕಲ್ಪ ಮಾಡಿದ್ದಾರೆ. ಪ್ರಧಾನಿಯಾದ ಮೊದಲ ದಿನದಿಂದಲೂ ಇದಕ್ಕಾಗಿ ಶ್ರಮಿಸಿದ್ದಾರೆ ಎಂದ ಜೋಶಿ, ದೇಶದಲ್ಲಿ ಸರ್ವ ಸಮುದಾಯದ ಏಳಿಗೆ, ಸಮಗ್ರ ಅಭಿವೃದ್ಧಿ ಮತ್ತು ಮಹಿಳೆಯರ ರಕ್ಷಣೆ ಮೋದಿಯಿಂದ ಮಾತ್ರ ಸಾಧ್ಯ. ಹೀಗಾಗಿ ಬಿಜೆಪಿಗೆ ಬಹುಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಪ್ರಚಾರ ಸಭೆಯಲ್ಲಿ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಪ್ರಮುಖರಾದ ಬಸವರಾಜ್ ಕುಂದಗೋಳಮಠ, ಮಡವಾಳಿ ಬಾವಕ್ಕನವರ, ಸಿದ್ದಪ್ಪ ಗಮನಕಟ್ಟಿ, ಮಹೇಶ್ ವಾಲಿಕರ್, ಅಣ್ಣಾಸಾಹೇಬ ಪಾಟೀಲ, ಬಸಪ್ಪ ಅಂಗಡಿ, ಮಂಜುನಾಥ ಇದ್ದಲಿ, ಯಲ್ಲಪ್ಪ ಮುಮ್ಮಿಗಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.ಮಠಕ್ಕೆ ಭೇಟಿ:

ಪ್ರಹ್ಲಾದ ಜೋಶಿ ಗುರುವಾರ ಧಾರವಾಡದ ಮಹಾಮನೆ ಮಠದಲ್ಲಿ ಶ್ರೀ ಬಸವಾನಂದ ಸ್ವಾಮಿಗಳ ಹಾಗೂ ದೇವರ ಹುಬ್ಬಳ್ಳಿಯ ಸಿದ್ಧಾಶ್ರಮ ಮಠದಲ್ಲಿ ಶ್ರೀ ಸಿದ್ಧಯೋಗಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಳಿಕ ದೇವರ ಹುಬ್ಬಳ್ಳಿಯಲ್ಲಿ ಪ್ರಚಾರ ಮಾಡಿದರು.

ಈ ವೇಳೆ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಆರತಿ ಹಿರೇಮಠ, ಕಲ್ಮೇಶ ಬೇಲೂರು, ರುದ್ರಗೌಡ ಪಾಟೀಲ್, ಮಾಲತೇಶ ತೌಲಿ, ಬಸವರಾಜ್ ಮನಗುಂದ, ಮಲ್ಲನಗೌಡ ಪಾಟೀಲ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.