ದಾಬಸ್‍ಪೇಟೆ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರಕ್ಕೆ ರಾಗಿ ಮಾರಾಟ ಮಾಡಿದ ತಾಲೂಕಿನ ರೈತರಿಗೆ ಮೂರು ತಿಂಗಳಾದರೂ ಹಣವೇ ಬಿಡುಗಡೆಯಾಗಿಲ್ಲ. ಬಹಳಷ್ಟು ರೈತರು ಯಾವಾಗ ಹಣ ಬಿಡುಗಡೆ ಆಗುತ್ತದೆ ಎಂದು ಅಧಿಕಾರಿಗಳನ್ನು ಕೇಳುತ್ತಲೇ ಅಧಿಕಾರಿಗಳು ನಮ್ಮದೇನಿಲ್ಲ ಎಂದು ಸರ್ಕಾರದತ್ತ ಬೆರಳು ತೋರುತ್ತಿದ್ದಾರೆ

ದಾಬಸ್‍ಪೇಟೆ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರಕ್ಕೆ ರಾಗಿ ಮಾರಾಟ ಮಾಡಿದ ತಾಲೂಕಿನ ರೈತರಿಗೆ ಮೂರು ತಿಂಗಳಾದರೂ ಹಣವೇ ಬಿಡುಗಡೆಯಾಗಿಲ್ಲ. ಬಹಳಷ್ಟು ರೈತರು ಯಾವಾಗ ಹಣ ಬಿಡುಗಡೆ ಆಗುತ್ತದೆ ಎಂದು ಅಧಿಕಾರಿಗಳನ್ನು ಕೇಳುತ್ತಲೇ ಅಧಿಕಾರಿಗಳು ನಮ್ಮದೇನಿಲ್ಲ ಎಂದು ಸರ್ಕಾರದತ್ತ ಬೆರಳು ತೋರುತ್ತಿದ್ದಾರೆ.

ತಾಲೂಕಿನಲ್ಲಿ ಫೆಬ್ರವರಿಯಲ್ಲಿ 5600 ರೈತರು ರಾಗಿ ನೋಂದಣಿ ಮಾಡಿಸಿ ಸುಮಾರು 1,07,000 ರಾಗಿ ಕ್ವಿಂಟಲ್ ಖರೀದಿಯಾಗಿದ್ದು, ಇದರಲ್ಲಿ 5400 ರೈತರಿಗೆ ಹಣ ಬಿಡುಗಡೆಯಾಗಿದೆ. ಇನ್ನೂ 200 ರೈತರಿಗೆ ಹಣ ಬಿಡುಗಡೆಯಾಗದ ಪರಿಣಾಮ, ಯಾವಾಗ ಖಾತೆಗೆ ಜಮಾವಾಗಲಿದೆ ಎಂದು ಕಾತುರದಿಂದ ಕಾಯುವ ಪರಿಸ್ಥಿತಿ ಬಂದೊಂದಗಿದೆ.

ಈಗ ಮತ್ತೆ ಮುಂಗಾರು ಚಟುವಟಿಕೆಗಳು ಆರಂಭವಾಗಿವೆ. ಮುಂಗಾರಿಗೆ ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿ, ಉಳುಮೆಗೆ ಹಣ ಅಗತ್ಯ. ಬಹಳಷ್ಟು ರೈತರು ಒಂದಿಷ್ಟು ಉತ್ಪನ್ನಗಳನ್ನು ಮಾರಾಟ ಮಾಡಿ ಮುಂಗಾರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವರು. ಹಣ ಬಿಡುಗಡೆ ಆಗದಿರುವುದರಿಂದ ಮುಂಗಾರಿನ ಈ ಸಂದರ್ಭದಲ್ಲಿ ರೈತರು ಸಂಕಷ್ಟ ಎದುರಿಸಬೇಕಾಗಿದೆ. ಕೂಡಲೇ ಬೆಂಬಲ ಬೆಲೆ ಹಣ ಪಾವತಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಬೆಲೆ ಏರಿಕೆ ಬಿಸಿ: ಇತ್ತೀಚಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಪರಿಣಾಮ ಟ್ರ್ಯಾಕ್ಟರ್ ಮಾಲೀಕರು ಉಳುಮೆ ಬೆಲೆ ಏರಿಕೆ ಮಾಡಿದ್ದಾರೆ. ಯುದ್ಧದಿಂದಾಗಿ ಗೊಬ್ಬರ ಸರಬರಾಜು ಕಡಿಮೆ ಎಂದು ಖಾಸಗಿ ಅಂಗಡಿಯವರು ಗೊಬ್ಬರ ಹಾಗೂ ಬಿತ್ತನೆ ಬೀಜದ ದರವನ್ನು ಹೆಚ್ಚಿಸಿದ್ದಾರೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಗಿ ಖರೀದಿ ಹಣ ಸರ್ಕಾರ ಸರಿಯಾದ ಸಮಯಕ್ಕೆ ಪಾವತಿ ಮಾಡಿದರೆ ಅನುಕೂಲವಾಗುತ್ತದೆ. ಮೇ 25ಕ್ಕೆ ಹಣ ಪಾವತಿಯನ್ನು ನಿಲ್ಲಿಸಿದ್ದು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳ ಜತೆ ಹೋರಾಟ ಮಾಡಬೇಕಾಗುತ್ತದೆ ಎಂದು ನೆಲಮಂಗಲ ರೈತರು, ರೈತ ಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದಾರೆ.

ಕೋಟ್ ................

ಮಾ. 25ರವರೆಗೆ ರೈತರ ಖಾತೆಗೆ ಹಣ ಜಮೆಯಾಗಿದೆ. ಇನ್ನೊಂದು ವಾರದಲ್ಲಿ ಉಳಿದಿರುವ ಎಲ್ಲಾ ರೈತರ ಖಾತೆಗೆ ಹಣ ಜಮೆಯಾಗಲಿದೆ. ನಾವು ಸಹ ಬೇಗ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.

-ನರಸಿಂಹಮೇಗೌಡ, ಖರೀದಿ ಅಧಿಕಾರಿ, ರಾಗಿ ಖರೀದಿ ಕೇಂದ್ರ, ನೆಲಮಂಗಲ

ಕೋಟ್....................

ದುಬಾರಿ ಬೀಜ, ಗೊಬ್ಬರ ಹಾಗೂ ಕೂಲಿ ಆಳುಗಳ ಬೆಲೆ ಏರಿಕೆಯಾಗಿದೆ. ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಿದರೆ ಸಕಾಲಕ್ಕೆ ಹಣ ಪಾವತಿಯಾಗದಿರುವುದರಿಂದ ಸಂಕಷ್ಟದಿಂದ ಬಳಲುವಂತಾಗಿದೆ. ಕೂಡಲೇ ಸಂಬಂಧಿಸಿದ ಇಲಾಖಾಧಿಕಾರಿಗಳು ಹಣ ಪಾವತಿಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.

-ಮಂಜಣ್ಣ, ರೈತ

ಪೋಟೋ 1 :

ನೆಲಮಂಗಲದ ರಾಗಿ ಕೇಂದ್ರದಲ್ಲಿ ರೈತರ ರಾಗಿ ಖರೀದಿ ಮಾಡಿರುವುದು.