ರೈತರ ಚಳುವಳಿಗೆ ಕರವೇ ಬೆಂಬಲ

| Published : Nov 07 2025, 03:15 AM IST

ಸಾರಾಂಶ

ಕಬ್ಬಿಗೆ ನ್ಯಾಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿ 4ನೇ ದಿನವು ಮುಂದುವರೆದಿದ್ದು, ರೈತರ ಚಳುವಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಗುರುವಾರ ಬೆಂಬಲ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಕಬ್ಬಿಗೆ ನ್ಯಾಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿ 4ನೇ ದಿನವು ಮುಂದುವರೆದಿದ್ದು, ರೈತರ ಚಳುವಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಗುರುವಾರ ಬೆಂಬಲ ವ್ಯಕ್ತಪಡಿಸಿದರು.

ಕಳೆದ 5 ದಿನಗಳಿಂದ ನಗರದ ನಾಕಾ ನಂ. 1ರ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಹಮ್ಮಿಕೊಂಡ ಧರಣಿಯಲ್ಲಿ ಕರವೇ ಕಾರ್ಯಕರ್ತರು ಪಾಲ್ಗೊಂಡು ಪ್ರತಿ ಟನ್ ಕಬ್ಬಿಗೆ ₹3500 ಬೆಲೆ ನಿಗದಿಪಡಿಸುವವರೆಗೆ ಹೋರಾಟ ಕೈಬಿಡ ಬಾರದು ರೈತರ ಬೆನ್ನಿಗೆ ಕರವೇ ಯಾವತ್ತು ಬೆಂಬಲವಾಗಿ ನಿಲ್ಲಲಿದೆ ಎಂದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಸಂಚಾಲಯ ಗಣಪತಿ ಈಳಿಗೇರ, ಕರವೇ ರಾಜ್ಯ ಸಂಚಾಲಕ ಸುರೇಶ ಗವನ್ನವರ, ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ, ಪದಾಧಿಕಾರಿಗಳಾದ ಮಹಾದೇವ ಗೂಡೇರ, ಸುರೇಶ ಪರಗನ್ನವರ, ರಾಘವೇಂದ್ರ ನಾಯಿಕ, ಮಾಯಪ್ಪ ಲೋಕೂರೆ, ಮುತ್ತೇಪ್ಪ ಬಾಗನ್ನವರ, ದುಂಡಪ್ಪ ನಂದಗಾಂವಿ, ಮಂಜುಳಾ ಪೂಜೇರ, ಲಕ್ಷ್ಮಣ ಗಡಾದ ಸೇರಿದಂತೆ ಅನೇಕರು ಇದ್ದರು.