ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟಕ್ಕೆ ರೈತ ಸಂಘ, ಹಸಿರು ಸೇನೆ ಬೆಂಬಲ

| Published : Feb 17 2024, 01:17 AM IST

ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟಕ್ಕೆ ರೈತ ಸಂಘ, ಹಸಿರು ಸೇನೆ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ದೇಶದಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಬೀದರ್‌

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದೇಶದಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದೆ.

ಈ ಕುರಿತು ಪ್ರಧಾನಿ ಮೋದಿಗೆ ಬರೆದ ಮನವಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ಸಂಘದ ಪ್ರಮುಖರು, ಅಂದಾಜು 2 ವರ್ಷದ ಮೊದಲು ರೈತ ವಿರೋಧಿ 3 ಕೃಷಿ ಬಿಲ್‌ ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದ್ದಾಗ ಎಂಎಸ್‌ಪಿ ಮೇಲೆ ಗ್ಯಾರಂಟಿ ಕಾನೂನು ರಚಿಸುತ್ತೇವೆಂದು ಸರ್ಕಾರ ಹೇಳಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದಕಾರಣ ಸರ್ಕಾರದ ಇಂತಹ ತಪ್ಪು ನೀತಿಯಿಂದ ರೈತರು ಕಂಗಾಲಾಗಿದ್ದು, ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೂಡಲೆ ಎಂಎಸ್‌ಪಿ ಕಾನೂನು ರಚನೆ ಮಾಡಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ನುಡಿದಂತೆ ನಡೆಯಬೇಕೆಂದು ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಪ್ರಕಾಶ ಬಾವಗೆ, ಶಂಕ್ರೆಪ್ಪಾ ಪಾಟೀಲ ಅತಿವಾಳ, ನಾಗಯ್ಯಾ ಸ್ವಾಮಿ, ರಾಜಕುಮಾರ ಪಾಟೀಲ, ಸುಮಂತ ಗ್ರಾಮಲೆ, ಧೂಳಪ್ಪಾ ಆಣದೂರ, ಬಸಪ್ಪಾ ಆಲೂರೆ, ಕೃಷ್ಣಾರೆಡ್ಡಿ ಮಮದಾಪೂರ, ದತ್ತಾ ಚಿಮ್ಮಾಜಿ, ಝರಣಪ್ಪಾ ದೇಶಮುಖ, ಶಿವಾನಂದ ಹುಡಗೆ ಉಪಸ್ಥಿತರಿದ್ದರು.