ಖಾದ್ರಿಗೆ ಕೈ ಟಿಕೆಟ್‌ ನೀಡುವಂತೆ ಬೆಂಬಲಿಗರಿಂದ ಪಾದಯಾತ್ರೆ

| Published : Jun 21 2024, 01:01 AM IST

ಖಾದ್ರಿಗೆ ಕೈ ಟಿಕೆಟ್‌ ನೀಡುವಂತೆ ಬೆಂಬಲಿಗರಿಂದ ಪಾದಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಫಿಕ್ಸ್ ಆಗುತ್ತಿದ್ದಂತೆ ಟಿಕೆಟ್‌ ಆಕಾಂಕ್ಷಿಗಳಿಂದ ಈಗಲೇ ಶಕ್ತಿ ಪ್ರದರ್ಶನ ಶುರುವಾಗಿದೆ. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವಂತೆ ಆಗ್ರಹಿಸಿ ಸಾವಿರಾರು ಬೆಂಬಲಿಗರು ಗುರುವಾರ ಶಿಗ್ಗಾಂವಿಯಲ್ಲಿ ಪಾದಯಾತ್ರೆ ಮೂಲಕ ಹಕ್ಕೊತ್ತಾಯ ಮಾಡಿದರು.

ಹಾವೇರಿ: ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಫಿಕ್ಸ್ ಆಗುತ್ತಿದ್ದಂತೆ ಟಿಕೆಟ್‌ ಆಕಾಂಕ್ಷಿಗಳಿಂದ ಈಗಲೇ ಶಕ್ತಿ ಪ್ರದರ್ಶನ ಶುರುವಾಗಿದೆ. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವಂತೆ ಆಗ್ರಹಿಸಿ ಸಾವಿರಾರು ಬೆಂಬಲಿಗರು ಗುರುವಾರ ಶಿಗ್ಗಾಂವಿಯಲ್ಲಿ ಪಾದಯಾತ್ರೆ ಮೂಲಕ ಹಕ್ಕೊತ್ತಾಯ ಮಾಡಿದರು.

ಶಿಗ್ಗಾಂವಿ ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಚೆನ್ನಮ್ಮ ವೃತ್ತದವರೆಗೆ ಪಾದಯಾತ್ರೆ ಮಾಡಿದ ಖಾದ್ರಿ ಬೆಂಬಲಿಗರು ಶಕ್ತಿ ಪ್ರದರ್ಶನ ನಡೆಸಿದರು. ಬಸವರಾಜ ಬೊಮ್ಮಾಯಿ ಎದುರು ಮೂರು ಸಲ ಸೋತಿರುವ ಖಾದ್ರಿಗೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್ ಕೈತಪ್ಪಿತ್ತು. ಆದರೆ, ಈಗ ಉಪಚುನಾವಣೆ ನಿಶ್ಚಿತವಾಗುತ್ತಿದ್ದಂತೆ ಖಾದ್ರಿ ಅಖಾಡಕ್ಕಿಳಿದಿದ್ದಾರೆ. ಈ ಸಲ ಟಿಕೆಟ್‌ ಖಾದ್ರಿ ಅವರಿಗೇ ನೀಡಬೇಕು ಎಂದು ಬೆಂಬಲಿಗರು ಬೀದಿಗಿಳಿದಿದ್ದಾರೆ. ಖಾದ್ರಿ ಸ್ಪರ್ಧಿಸಿದರೆ ಮಾತ್ರ ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಬೆಂಬಲಿಗರು ಪಾದಯಾತ್ರೆ ವೇಳೆ ಹಕ್ಕೊತ್ತಾಯ ಮಾಡಿದರು. ಆ ಮೂಲಕ ಪಕ್ಷದ ನಾಯಕರ ಮೇಲೆ ಖಾದ್ರಿ ಒತ್ತಡ ಹೇರುವ ತಂತ್ರ ನಡೆಸಿರುವುದು ಇನ್ನುಳಿದ ಆಕಾಂಕ್ಷಿಗಳಿಗೆ ಆತಂಕ ಮೂಡಿಸಿದೆ.