ಸಾರಾಂಶ
ಕಳೆದ 30 ವರ್ಷಗಳ ಸತತ ಹೋರಾಟ ಸುಪ್ರೀಂ ಕೋರ್ಟಿನ 7 ನ್ಯಾಯಮೂರ್ತಿಗಳ ಪೀಠವು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ರಾಜ್ಯಗಳಿಗೆ ಸಾಂವಿಧಾನಿಕ ಅಧಿಕಾರವಿದೆ ಎಂಬ ಐತಿಹಾಸಿಕ ತೀರ್ಪು ನೀಡಿದೆ. ಆ ತೀರ್ಪನ್ನು ತಾಲೂಕಿನ ಮಾದಿಗ ಸಮಾಜ ಸ್ವಾಗತಿಸುತ್ತದೆ ಎಂದು ಮುಖಂಡ ಸೋಮಶೇಖರ್ ಹೊಸಮನಿ ಹೇಳಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಕಳೆದ 30 ವರ್ಷಗಳ ಸತತ ಹೋರಾಟ ಸುಪ್ರೀಂ ಕೋರ್ಟಿನ 7 ನ್ಯಾಯಮೂರ್ತಿಗಳ ಪೀಠವು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ರಾಜ್ಯಗಳಿಗೆ ಸಾಂವಿಧಾನಿಕ ಅಧಿಕಾರವಿದೆ ಎಂಬ ಐತಿಹಾಸಿಕ ತೀರ್ಪು ನೀಡಿದೆ. ಆ ತೀರ್ಪನ್ನು ತಾಲೂಕಿನ ಮಾದಿಗ ಸಮಾಜ ಸ್ವಾಗತಿಸುತ್ತದೆ ಎಂದು ಮುಖಂಡ ಸೋಮಶೇಖರ್ ಹೊಸಮನಿ ಹೇಳಿದರು.ಒಳ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಹಿನ್ನೆಲೆಯಲ್ಲಿ ನಗರದ ಕಂದಗಲ್ ರಸ್ತೆಯಲ್ಲಿರುವ ಬಾಬು ಜಗಜೀವನರಾಮ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್ ಆದೇಶದ ಬೆನ್ನಲ್ಲೆ ಒಳ ಮೀಸಲಾತಿ ವಿಚಾರವಾಗಿ ಎಲ್ಲಾ ರಾಜಕೀಯ ಪಕ್ಷಗಳು ಮೊಸಳೆ ಕಣ್ಣೀರು ಸುರಿಸುತ್ತಾ ಬಂದಿದ್ದು ಆದರೆ ಸುಪ್ರೀಂಕೋರ್ಟ್ ತೀರ್ಪು ಎಲ್ಲರ ಕಣ್ಣು ತರಿಸಿದೆ. ಯಾರಿಗೂ ಒಳ ಮೀಸಲಾತಿ ಕಾರ್ಯಗತಗೊಳಿಸುವ ಧೈರ್ಯ ಇರಲಿಲ್ಲ. 30 ವರ್ಷಗಳ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಒಳ ಮೀಸಲಾತಿ ಅಡತಡೆಗಳು ನಿವಾರಣೆಯಾಗಿದೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ರಾಜ್ಯಗಳಿಗೆ ಸಾಂವಿಧಾನಿಕ ಅಧಿಕಾರವಿದೆ ಎಂಬ ಐತಿಹಾಸಿಕ ತೀರ್ಪು ಇದಾಗಿದೆ ಎಂದರು.ನಮ್ಮ ಮಾದಿಗ ಸಮಾಜ ಮೂರು ದಶಕಗಳ ಕಾಲ ಅಂದರೆ 30 ವರ್ಷದಿಂದ ಹೋರಾಟದ ಪ್ರತಿಫಲವಾಗಿ ಪಕ್ಷಾತೀತವಾಗಿ ನಮ್ಮ ಸಮಾಜದ ಮುಖಂಡರ ಸತತ ಹೋರಾಟ ಪ್ರಯತ್ನದಿಂದ ಇದು ನಮಗೆ ದೊರಕಿದ್ದು, ಈಗ ರಾಜ್ಯ ಸರ್ಕಾರ ಈ ಸುಪ್ರೀಂ ಕೋರ್ಟಿನ ತೀರ್ಪನ್ನು ಆದಷ್ಟು ಬೇಗ ಇಂಪ್ಲಿಮೆಂಟ್ ಮಾಡಿ ಶೋಷಿತ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಬರಮಾರೆಡ್ಡಿ ಚಿಂತಕಮಲದಿನ್ನಿ ಅವರು ಹೇಳಿದರು.
ಲಕ್ಷ್ಮಣ್ ಚಂದ್ರಗಿರಿ ಮಾತನಾಡಿ, ಮಾದಿಗ ಸಮಾಜದ ಪಕ್ಷಾತೀತವಾದ ಮುಖಂಡರಾಗಳಾದ ಕೆಎಚ್ ಮುನಿಯಪ್ಪ, ಹೆಚ್ ಆಂಜನೇಯ,ಗೋವಿಂದ ಕಾರಜೋಳ, ನಾರಾಯಣಸ್ವಾಮಿ,ಹಾಗೂ ಮಾದಿಗ ಸಮಾಜದ ಸ್ವಾಮೀಜಿಗಳು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಹೋರಾಟದಿಂದ ಇವತ್ತು ಜಯ ಸಿಕ್ಕಿದ್ದು ಸುಪ್ರೀಂ ಕೋರ್ಟಿನ ಆದೇಶವನ್ನು ರಾಜ್ಯ ಸರ್ಕಾರ ಆದಷ್ಟು ಬೇಗ ಸಚಿವ ಸಂಪುಟ ಸಭೆ ಕರೆದು ಇಂಪ್ಲಿಮೆಂಟ್ ಮಾಡಿ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ವೀರೇಶ ಹಿರೇಮನಿ, ಸೋಮಶೇಖರ ಹೊಸಮನಿ, ಸಿದ್ದಪ್ಪ ಮಾದರ, ಬರಮಾರೆಡ್ಡಿ ಚಿಂತಕಮಲದಿನ್ನಿ, ಚಂದಪ್ಪ ಮಾದರ, ಲಕ್ಷ್ಮಣ್ ಚಂದ್ರಗಿರಿ, ಶಾಂತು ಗೊರಬಾಳ, ಮಹಾಂತೇಶ ಹೊಸಮನಿ, ಹೆಚ್ ಎಮ್ ಹಗೆದಾಳ, ಮಂಜುನಾಥ ಮಾದರ, ಬಿ ಹೆಚ್ ಮಾದರ, ಸಿತಿಮಾ ಮಾದರ, ಬಾಳಪ್ಪ ಮಾದರ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.