ಸಾರಾಂಶ
ಹೊಳೆನರಸೀಪುರ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದ ತಮ್ಮ ಹುಟ್ಟುಹಬ್ಬದ ಆಚರಣೆ ವೇಳೆ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಜೆಡಿಎಸ್ ಪಕ್ಷದೊಳಗೇ ಇದ್ದುಕೊಂಡು ಮೋಸ ಮಾಡಿದವರ ವಿರುದ್ಧ ಆಕ್ರೋಶ ಅಸಮಾಧಾನ ಹೊರಹಾಕಿದರು. ನಾನು ನಿನ್ನೆ, ಮೊನ್ನೆ ಪೆನ್‌ಡ್ರೈವ್ ಹಂಚಿ ಎಂಎಲ್‌ಸಿ ಆಗಿಲ್ಲ. ಯಾವುದೇ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆ ನನ್ನ ಗಮನಕ್ಕೆ ತನ್ನಿ. ನಿಮ್ಮ ನೆರವಿಗೆ ಯಾರು ಬರ್ತಾರೋ, ಬಿಡ್ತಾರೋ ಈ ಸೂರಜ್ ರೇವಣ್ಣ ಬರ್ತಾನೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದ ತಮ್ಮ ಹುಟ್ಟುಹಬ್ಬದ ಆಚರಣೆ ವೇಳೆ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಜೆಡಿಎಸ್ ಪಕ್ಷದೊಳಗೇ ಇದ್ದುಕೊಂಡು ಮೋಸ ಮಾಡಿದವರ ವಿರುದ್ಧ ಆಕ್ರೋಶ ಅಸಮಾಧಾನ ಹೊರಹಾಕಿದರು.ನಮ್ಮ ತಾತ ದೇವೇಗೌಡರು ಹೇಳುತ್ತಿದ್ದರು, ಹಾಸನದಲ್ಲಿ ಯಾವುದೇ ಪಕ್ಷ ಇಲ್ಲ, ಇರುವುದು ಎರಡೇ ಪಕ್ಷ. ಒಂದು ದೇವೇಗೌಡರ ಪರ, ಇನ್ನೊಂದು ದೇವೇಗೌಡರ ವಿರುದ್ಧ. ಈಗ ಅದು ನನಗೆ ಅನುಭವ ಆಗುತ್ತಿದೆ. ನಾಟಕ ಆಡಿಕೊಂಡು ಅವರು ಬಂದಾಗ ಹಾಲು ಕೊಟ್ಟು ಜೊತೆಯಲ್ಲೇ ಇರ್ತೇವೆ ಅಂತಾರೆ. ಇನ್ನೊಬ್ಬರು ಬಂದಾಗಲೂ ಹಾಲು ಕೊಡ್ತಾರೆ. ನಾನು ನಿನ್ನೆ, ಮೊನ್ನೆ ಪೆನ್‌ಡ್ರೈವ್ ಹಂಚಿ ಎಂಎಲ್‌ಸಿ ಆಗಿಲ್ಲ. ಯಾವುದೇ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆ ನನ್ನ ಗಮನಕ್ಕೆ ತನ್ನಿ. ನಿಮ್ಮ ನೆರವಿಗೆ ಯಾರು ಬರ್ತಾರೋ, ಬಿಡ್ತಾರೋ ಈ ಸೂರಜ್ ರೇವಣ್ಣ ಬರ್ತಾನೆ ಎಂದರು.
ಯಾವುದೇ ಜಾತಿ, ಜನಾಂಗ ನೋಡಬೇಡ, ಎಲ್ಲಾ ಹಳ್ಳಿಗಳಿಗೂ ಒಳ್ಳೆಯದು ಮಾಡು ಎಂದು ನಮ್ಮ ತಾತ ಹೇಳಿದ್ದಾರೆ. ಒಮ್ಮೆ ಒಂದು ಸಮುದಾಯ ಕೈಬಿಡಬಹುದು. ಅರ್ಥ ಆದ ಬಳಿಕ ನಿನ್ನೆ ಕೈ ಹಿಡಿತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಾತಿ ಎನ್ನುವ ವಿಷ ಬೀಜ ಬಿತ್ತಿ ಅಗ್ರಹಾರದಲ್ಲಿ ಮತ ಪಡೆದರು. ರೇವಣ್ಣ ಅವರು ಎಷ್ಟು ದೇವಸ್ಥಾನ ಕಟ್ಟಿದ್ದಾರೆ ಆ ನಂಬರ್ ಸಂಸದರಿಗೆ ಗೊತ್ತಾ ಕೇಳಿಕೊಂಡು ಬರಲು ಹೇಳಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರವಾಗಿ ಕೆಲಸ ಮಾಡದ ಜೆಡಿಎಸ್ ಮುಖಂಡರ ವಿರುದ್ಧ ಎಂಎಲ್‌ಸಿ ಸೂರಜ್ ರೇವಣ್ಣ ಆಕ್ಷೇಪಾರ್ಹ ಪದ ಬಳಸಿ ಆಕ್ರೋಶ ವ್ಯಕ್ತಪಡಿಸಿದರು.