ಸಾರಾಂಶ
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಶಿಕ್ಷಣ ಶಿಲ್ಪಿ ಮಹಾದೇವಪ್ಪ ರಾಂಪುರೆ ಅವರ 51ನೇ ಪುಣ್ಯಸ್ಮರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಸುರಪುರ
ನಗರದ ಪ್ರಭು ಕಲಾ ವಿಜ್ಞಾನ ಮತ್ತು ಜೆ.ಎಂ. ಬೋಹರಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಶಿಕ್ಷಣ ಶಿಲ್ಪಿ ಮಹಾದೇವಪ್ಪ ರಾಂಪುರೆ ಅವರ 51ನೇ ಪುಣ್ಯಸ್ಮರಣೆ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕ ಡಾ. ಸಾಯಿಬಣ್ಣ ಮೂಡಬುಳ, ದಿ. ಮಹಾದೇವಪ್ಪ ರಾಂಪುರೆ ಅವರು ಹೈದ್ರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯೆ ನೀಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣೀಭೂತರಾಗಿದ್ದಾರೆ. ಅವರ ಸೇವೆ ಸದಾ ಸ್ಮರಣೀಯ ಎಂದರು.
ನಿವೃತ್ತ ಪ್ರೊ. ವೇಣುಗೋಪಾಲ ಜೇವರ್ಗಿ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ.ಡಿ. ವಾರಿಸ್, ಪ್ರಾಧ್ಯಾಪಕರಾದ ಡಾ. ಸಿ.ಎಂ. ಸುತಾರ, ಡಾ. ಬಾಲರಾಜ ಸರಾಫ್, ಮುನಿಷಕುಮಾರ, ಡಾ. ಅಡಿವೆಪ್ಪ, ಡಾ. ಗೌಡಪ್ಪಗೌಡ, ಎಸ್.ಎಂ. ಸಜ್ಜನ್, ಹಣಮಂತ ಸಿಂಘೆ, ಜ್ಯೋತಿ ಮಾಮಡಿ, ಡಾ. ಉಪೇಂದ್ರ ನಾಯಕ, ಸುನಿತಾ ಹಳ್ಳದ, ಮದಿಹಾ, ಮೌನೇಶ, ಕಚೇರಿ ಅಧಿಕ್ಷಕ ಮಲ್ಲಾರಾವ್ ಕುಲಕರ್ಣಿ, ಶಿವಕುಮಾರ ಕೊಳ್ಳಿ, ಶಿವು ಸತ್ಯಂಪೇಟೆ ಸೇರಿ ಇತರರಿದ್ದರು. ಐಶ್ವರ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿಜಯಕುಮಾರ ಬಣಗಾರ ಸ್ವಾಗತಿಸಿದರು. ಡಾ. ಸುರೇಶ ಮಾಮಡಿ ನಿರೂಪಿಸಿದರು. ಅಮರೇಶ ವಂದಿಸಿದರು.;Resize=(128,128))
;Resize=(128,128))