ಸುರೇಶ್ ಬಾಬು ಆರೋಪ ಸುಳ್ಳು: ಗಂಗಾಧರ್

| Published : Dec 12 2023, 12:45 AM IST

ಸಾರಾಂಶ

ಚನ್ನಪಟ್ಟಣ: ನನ್ನ ವಿರುದ್ಧ ಗುತ್ತಿಗೆದಾರ ಸುರೇಶ್ ಬಾಬು ಮಾಡಿರುವ ಆರೋಪ ಸುಳ್ಳಿನಿಂದ ಕೂಡಿದ್ದು, ಅವರು ನಿರ್ವಹಿಸಿದ ಕಾಮಗಾರಿಯ ಪೂರ್ತಿ ಹಣವನ್ನು ಅವರಿಗೇ ನೀಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಸ್ಪಷ್ಟನೆ ನೀಡಿದ್ದಾರೆ.

ಚನ್ನಪಟ್ಟಣ: ನನ್ನ ವಿರುದ್ಧ ಗುತ್ತಿಗೆದಾರ ಸುರೇಶ್ ಬಾಬು ಮಾಡಿರುವ ಆರೋಪ ಸುಳ್ಳಿನಿಂದ ಕೂಡಿದ್ದು, ಅವರು ನಿರ್ವಹಿಸಿದ ಕಾಮಗಾರಿಯ ಪೂರ್ತಿ ಹಣವನ್ನು ಅವರಿಗೇ ನೀಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಸ್ಪಷ್ಟನೆ ನೀಡಿದ್ದಾರೆ.

ಸುರೇಶ್ ಬಾಬು ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಎಂ.ಇ. ಎಲೆಕ್ಟ್ರಾನಿಕಲ್ ಮತ್ತು ಇಂಜಿನಿಯರಿಂಗ್ ಕಂಪನಿಯಿಂದ ಸುರೇಶ್ ಬಾಬು ಅವರಿಗೆ ಉಪಗುತ್ತಿಗೆ ನೀಡಲಾಗಿತ್ತು. ಅವರು ಕೇವಲ 40% ಕಾಮಗಾರಿ ಮಾತ್ರ ಮಾಡಿದ್ದರು. ಆದರೂ ಮಾನವೀಯತೆಯಿಂದ ಅವರಿಗೆ ಶೇ.50ರಷ್ಟು ಹಣ ಸಂದಾಯ ಮಾಡಲಾಗಿದೆ ಎಂದು ತಿಳಿಸಿದರು.

25 ಲಕ್ಷ ಸಂದಾಯ: ಸುರೇಶ್ ಬಾಬು ಅವರು 52.52 ಲಕ್ಷದ ರು. ಕಾಮಗಾರಿ ನಡೆಸಿರುವ ಬಿಲ್ ಸಲ್ಲಿಸಿದ್ದರು. ಕಾಮಗಾರಿಯನ್ನು ಕಂಪನಿಯ ಇಂಜಿಯರ್ಸ್‌ ಪರಿಶೀಲಿಸಿ, ವರದಿ ಮೇರೆಗೆ ಸುರೇಶ್‌ಗೆ 25.91 ಲಕ್ಷ ರು. ಹಣ ಸಂದಾಯ ಮಾಡಲಾಗಿದೆ. ಅವರು ಕೆಲಸ ನಿರ್ವಹಿಸಿದಕ್ಕಿಂತ ಶೇ.10ರಷ್ಟು ಹಣವನ್ನು ಹೆಚ್ಚಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸುರೇಶ್ ಬಾಬು ಅವರಿಗೆ ನಮ್ಮ ಕಂಪನಿಯಿಂದ 3.25 ಲಕ್ಷ ಬಾಕಿ ಇದ್ದು, ಅದನ್ನು ಜಿಎಸ್‌ಟಿ ಪಾವತಿಯ ರಸೀದಿ ನೀಡಿ ಪಡೆದುಕೊಳ್ಳುವಂತೆ ಸಾಕಷ್ಟು ಬಾರಿ ತಿಳಿಸಲಾಗಿದೆ. ಅವರು ಬಿಲ್ ಪಾವತಿಸಿ ಹಣ ಪಡೆದುಕೊಂಡಿಲ್ಲ. ಅಲ್ಲದೇ ಅವರು ಸೆಟಲ್‌ಮೆಂಟ್ ಬಿಲ್ ಅನ್ನೂ ನೀಡಿಲ್ಲ. ಇವೆರಡನ್ನು ನೀಡಿ ಅವರು ಯಾವಾಗ ಬೇಕಾದರೂ ಬಾಕಿ ಹಣ ಪಡೆದುಕೊಳ್ಳಬಹುದು. ಒಂದು ಸಂಸ್ಥೆಗೆ ಅದರದೇ ಆದ ರೀತಿ-ನೀತಿ ಇರುತ್ತದೆ. ಅದಕ್ಕೆ ತಕ್ಕಂತೆ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಯಲ್ಲಪ್ಪ ಮಾಡಿರುವ ಆರೋಪ ಸಹ ಸುಳ್ಳು, ಅವರು ನಮ್ಮ ಸಂಸ್ಥೆಯ ಸಿಬ್ಬಂದಿಯೇ ಅಲ್ಲ. ಆದರೂ ಅವರಿಗೆ ನಮ್ಮ ಕಂಪನಿಯಿಂದ 12 ಲಕ್ಷ ಹಣ ಸಂದಾಯ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.ಪೊಟೋ೧೧ಸಿಪಿಟಿ೨:

ಎಸ್.ಗಂಗಾಧರ್