ಮತದಾರರ ಋಣ ನನ್ನ ಮೇಲಿದೆ ಎಂದ ಸುರೇಶ್‌

| Published : Nov 23 2025, 01:45 AM IST

ಸಾರಾಂಶ

ಬಂಟೆನಹಳ್ಳಿ ಗ್ರಾಮ ಪಂಚಾಯತಿಗೆ ಬರುವ ಕೊರಟಿಗೆರೆ ರಸ್ತೆ ಹಲವಾರು ವರ್ಷಗಳಿಂದ ಹದಗೆಟ್ಟಿತ್ತು. ಈ ಹಿಂದೆ ಚುನಾಯಿತಾರಾದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ನೆನಗುದಿಗೆ ಬಿದ್ದಿತ್ತು, ಇಲ್ಲಿನ ನಾಗರಿಕರು ಪಟ್ಟಣಕ್ಕೆ ಬರಲು ಹರಸಾಹಸಪಡುತ್ತಿದ್ದನ್ನು ಗಮನಿಸಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಬಿಡುಗಡೆಯದ ಹಣದಲ್ಲಿ ಕಾಮಗಾರಿ ಮಾಡಲಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಮತದಾರರು ತಮ್ಮ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದು ಅಭಿವೃದ್ಧಿ ಕೆಲಸ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಅವರ ಋಣವನ್ನು ತೀರಿಸುವುದಾಗಿ ಶಾಸಕ ಎಚ್ ಕೆ ಸುರೇಶ್ ಹೇಳಿದರು.

ತಾಲೂಕಿನ ಬಂಟೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಟಗೆರೆ ಗ್ರಾಮದಲ್ಲಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಸುಮಾರು 650 ಮೀಟರ್‌ ಉದ್ದದ ಕಾಂಕ್ರಿಟ್ ರಸ್ತೆ, ಮತ್ತು ನಾರಾಯಣಪುರ ಗ್ರಾಮ ಪಂಚಾಯತಿ ಗ್ರಾಮದಲ್ಲಿ ಬನದಳ್ಳಿ ಗ್ರಾಮದ ರಸ್ತೆ ಸೇರಿ ಸುಮಾರು 31ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಬಂಟೆನಹಳ್ಳಿ ಗ್ರಾಮ ಪಂಚಾಯತಿಗೆ ಬರುವ ಕೊರಟಿಗೆರೆ ರಸ್ತೆ ಹಲವಾರು ವರ್ಷಗಳಿಂದ ಹದಗೆಟ್ಟಿತ್ತು. ಈ ಹಿಂದೆ ಚುನಾಯಿತಾರಾದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ನೆನಗುದಿಗೆ ಬಿದ್ದಿತ್ತು, ಇಲ್ಲಿನ ನಾಗರಿಕರು ಪಟ್ಟಣಕ್ಕೆ ಬರಲು ಹರಸಾಹಸಪಡುತ್ತಿದ್ದನ್ನು ಗಮನಿಸಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಬಿಡುಗಡೆಯದ ಹಣದಲ್ಲಿ ಕಾಮಗಾರಿ ಮಾಡಲಾಗುತ್ತಿದೆ ಎಂದರು.

ನಾನು ಶಾಸಕನಾದ ಮೇಲೆ ಅಲ್ಪಸ್ವಲ್ಪ ಅನುದಾನ ತರುತ್ತಿದ್ದೇನೆ. ಅದರಲ್ಲಿ ತುಂಬಾ ಕಳಪೆ ರಸ್ತೆಗಳನ್ನು ದುರಸ್ತಿ ಪಡಿಸಲು ನನ್ನ ಕೈಲಾದ ಕೆಲಸ ಮಾಡುತ್ತಿದ್ದೇನೆ. ಅಭಿವೃದ್ಧಿ ಪತದತ್ತ ಕೊಂಡೊಯಲು ಅವಿರತ ಪ್ರಯತ್ನ ಮಾಡುತ್ತಿದ್ದೇನೆ, ಕನಾಯಕನಹಳ್ಳಿಯ ಜನರು ಯಗಚಿ ನೀರನ್ನೇ ಬಳಸುತ್ತಿದ್ದರು ಕುಡಿಯಲು ಶುದ್ಧ ನೀರಿನ ಅವಶ್ಯಕತೆ ಇತ್ತು. ಇಲ್ಲಿನ ಹಿರಿಯರ ಒತ್ತಾಯದ ಮೇರೆಗೆ ತಮ್ಮ ಅನುದಾನದಲ್ಲಿ 5 ಲಕ್ಷ ರು. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ, ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ನಾರಾಯಣಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಕವಿತಾ ರಘು, ಪ್ರಸನ್ನ, ಪ್ರಶಾಂತ್, ಚಂದ್ರಕಲಾ, ಸುರೇಶ್, ಬಸವರಾಜ್, ಮೋಹನ ಕುಮಾರ್, ಉದಯ್, ವಸಂತ್, ಗುತ್ತಿಗೆದಾರರು, ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಇದ್ದರು