ಸಾರಾಂಶ
ಸುರತ್ಕಲ್ ಸಮೀಪದ ಸೂರಿಂಜೆಯಲ್ಲಿನ ಶ್ರೀ ಶಿರಿಡಿ ಸಾಯಿ ಬಾಬಾ ಮಂದಿರದಲ್ಲಿ ಶ್ರೀ ಶಿರಿಡಿ ಸಾಯಿ ಫ್ರೆಂಡ್ಸ್ ಆಯೋಜನೆಯಲ್ಲಿ ಗೂಡುದೀಪ ಸ್ಪರ್ಧೆ ನವಂಬರ್ 3 ರಂದು ನಡೆಯಲಿದೆ. ಸೂರಿಂಜೆ, ಕಾಟಿಪಳ್ಳ, ಕೃಷ್ಣಾಪುರ, ಕಿನ್ನಿಗೋಳಿ, ಪಕ್ಷಿಕೆರೆ, ಚೇಳಾಯರು, ಶಿಬರೂರು, ಕೈಕಂಬ, ಕುತ್ತೆತ್ತೂರು ಪರಿಸರದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸುರತ್ಕಲ್ ಸಮೀಪದ ಸೂರಿಂಜೆಯಲ್ಲಿನ ಶ್ರೀ ಶಿರಿಡಿ ಸಾಯಿ ಬಾಬಾ ಮಂದಿರದಲ್ಲಿ ಶ್ರೀ ಶಿರಿಡಿ ಸಾಯಿ ಫ್ರೆಂಡ್ಸ್ ಆಯೋಜನೆಯಲ್ಲಿ ಗೂಡುದೀಪ ಸ್ಪರ್ಧೆ ನವಂಬರ್ 3 ರಂದು ನಡೆಯಲಿದೆ.ಸೂರಿಂಜೆ, ಕಾಟಿಪಳ್ಳ, ಕೃಷ್ಣಾಪುರ, ಕಿನ್ನಿಗೋಳಿ, ಪಕ್ಷಿಕೆರೆ, ಚೇಳಾಯರು, ಶಿಬರೂರು, ಕೈಕಂಬ, ಕುತ್ತೆತ್ತೂರು ಪರಿಸರದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ನವಂಬರ್ 3 ರ ಸಂಜೆ 4 ರಿಂದ 7 ರ ವರೆಗೆ ತಾವು ತಯಾರಿಸಿದ ಗೂಡುದೀಪವನ್ನು ತಂದು ಮಂದಿರದ ಆಯೋಜಕರು ನಿಗದಿಪಡಿಸಿದ ಸ್ಥಳದಲ್ಲಿ ಅಳವಡಿಸಬೇಕು.ಗೂಡು ದೀಪವನ್ನು ತಮ್ಮ ತಮ್ಮ ಜಾಗದಲ್ಲಿ ತಯಾರಿಸಿ ತರಬಹುದಾಗಿದೆ. ಪರಿಸರಸ್ನೇಹಿ ಮತ್ತು ಸಾಂಪ್ರದಾಯಿಕ ಗೂಡುದೀಪಕ್ಕೆ ಆದ್ಯತೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೇಕ್ಷಕರಿಗೆ ಮತ ನೀಡಲು ವ್ಯವಸ್ಥೆ ಕಲ್ಪಿಸಲಾಗುವುದು. ಪ್ರೇಕ್ಷಕರು ನೀಡಿದ ಮತಗಳ ಆಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 10 ಇತರ ವಿಜೇತರೆಂದು ಘೋಷಿಸಿ ಬಹುಮಾನ ವಿತರಿಸಲಾಗುವುದು.
ಗೂಡುದೀಪ ಸ್ಪರ್ಧೆಗೆ ಭಾಗವಹಿಸಲು ಇಚ್ಚಿಸುವವರು 8197574625. ಮೊಬೈಲ್ ಸಂಖ್ಯೆಗೆ ಹೆಸರು, ಮೊಬೈಲ್ ನಂಬರ್ ಮತ್ತು ಊರನ್ನು ಅ.30ರೊಳಗೆ ವಾಟ್ಸಪ್ ಮೂಲಕ ಕಳುಹಿಸಬೇಕು.ವಿಜೇತರಿಗೆ ಮೊದಲನೇ ಬಹುಮಾನ: ರು. 5000, ಎರಡನೇ ಬಹುಮಾನ ರು. 3000,ತೃತೀಯ ಬಹುಮಾನ ರು. 2000 ಹಾಗೂ 10 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.