ಸುರಪುರ: ಶಾಂತಿಯುತ ಹೋಳಿ ಹಬ್ಬ ಆಚರಣೆ

| Published : Mar 26 2024, 01:00 AM IST

ಸಾರಾಂಶ

ಸುರಪುರ ತಾಲೂಕಿನ ಕೆಂಭಾವಿಯ ಉತ್ತರಾದಿ ಮಠ ಬೀದಿಯಲ್ಲಿ ಮಂಗಳವಾರ ನಡೆದ ಕಾಮ ದಹನ ಎಲ್ಲರ ಗಮನ ಸೆಳೆಯಿತು. ಯಾಳಗಿ ಗ್ರಾಮದಲ್ಲಿ ಸೋಮವಾರ ಚಿಣ್ಣರು ಬಣ್ಣದಾಟದಲ್ಲಿ ತೊಡಗಿರುವುದು.

ಕನ್ನಡಪ್ರಭ ವಾರ್ತೆ ಸುರಪುರ

ಸುರಪುರ, ಕೆಂಭಾವಿ, ಕಕ್ಕೇರಾ ಹೋಬಳಿ ಸೇರಿ ವಿವಿಧೆಡೆ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಸೋಮವಾರ ಆಚರಿಸಲಾಯಿತು.

ಹುಣ್ಣಿಮೆಯ ದಿನವಾದ ಭಾನುವಾರ ರಾತ್ರಿ ಸುರಪುರದ ನಗರದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತ, ಹಳೆ ಬಸ್ ನಿಲ್ದಾಣ, ರಂಗಂಪೇಟೆ, ಕೆಂಭಾವಿ ಪಟ್ಟಣದ ಉತ್ತರಾದಿ ಮಠ ಬೀದಿಯಲ್ಲಿ ನಡೆದ ಕಾಮದಹನ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.

ಕಲಾವಿದ ಹಳ್ಳೇರಾವ ಕುಲಕರ್ಣಿ ಮತ್ತು ಈರಣ್ಣ ಕಂಬಾರ ಅವರ ಕೈಚಳಕದಲ್ಲಿ ತಯಾರಾದ ಕಾಮಣ್ಣನ ಅಣಕು ಮೂರ್ತಿ ಎಲ್ಲರ ಗಮನ ಸೆಳೆಯಿತು. ರಾತ್ರಿ ನೂರಾರು ಯುವಕರು ಪ್ರಮುಖ ಬೀದಿಗಳಲ್ಲಿ ಕಾಮಣ್ಣನ ಮೆರವಣಿಗೆ ನಡೆಸಿ ನಂತರ ಕಾಮದಹನ ಮಾಡಿದರು. ಇದಕ್ಕೂ ಮೊದಲು ಯಮುನೇಶ ಯಾಳಗಿ ಮತ್ತು ಹಳ್ಳೇರಾವ ಕುಲಕರ್ಣಿ ಅವರ ಹಲಿಗಿ ಮೇಳದ ಜುಗಲ್ ಬಂದಿ, ಹೋಳಿಹುಣ್ಣಿಮೆ ಹಾಡುಗಳು, ಚಿಣ್ಣರ ನರ್ತನ ನೆರೆದಿದ್ದ ನೂರಾರು ಆಸ್ತಿಕ ಜನರನ್ನು ತನ್ನತ್ತ ಸೆಳೆಯಿತು.

ಕೆಂಭಾವಿಯ ಹಳ್ಳೆಪ್ಪಾಚಾರ್ಯ ಚನ್ನೂರ, ಮೋಹನರಾವ ಕುಲಕರ್ಣಿ, ಡಾ. ಹಳ್ಳೇರಾವ ಎಸ್ ಕುಲಕರ್ಣಿ ಆನಂದ ಕುಲಕರ್ಣಿ, ರಾಘವೇಂದ್ರ ದೇಶಪಾಂಡೆ, ಶ್ರೀಹರಿ ನಾಡಿಗೇರ, ಶಿವಭಟ್ಟ ಜೋಷಿ, ಗುರುರಾಜ ಕುಲಕರ್ಣಿ, ಸುರೇಶ ಸಾಸಾಬಾಳ, ಮಧ್ವರಾವ ನಾಡಿಗೇರ, ಗೋಪಾಲ ವಿಶ್ವಕರ್ಮ ಇದ್ದರು.