ಸಾರಾಂಶ
Surrender drive to MLA for Rayanna Murthy rally
ಬಸವಕಲ್ಯಾಣ: ಐತಿಹಾಸಿಕ ಕೋಟೆ ಬಸವಕಲ್ಯಾಣ ಮುಂಭಾಗದಲ್ಲಿ ಸ್ವಾತಂತ್ರ ಹೋರಾಟಗಾರ ಕ್ರಾಂತಿವೀರಸಂಗೋಳ್ಳಿ ರಾಯಣ್ಣನವರ ಹತ್ತು ಮೂರ್ತಿಗಳ ಭವ್ಯ ಮೇರವಣಿಗೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ಬಳಿಕ ಭಕ್ತಿ ಗೀತೆಗಳನ್ನು ಹಾಡುತ್ತಾ ಯುವಕರ ಜೊತೆಯಲ್ಲಿ ಕುಣಿದು ಕುಪ್ಪಳಿಸಿದರು. ವಿವಿಧ ಗ್ರಾಮಗಳಿಗೆ ಮೂರ್ತಿಗಳನ್ನು ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಕಾಶ ಕುದರಿ, ಬಿಜೆಪಿ ತಾಲೂಕು ಗ್ರಾಮೀಣ ಅಧ್ಯಕ್ಷ ಜ್ಞಾನೇಶ್ವರ ಮೂಳೆ, ನಗರ ಅಧ್ಯಕ್ಷ ಸಿದ್ದು ಬಿರಾದಾರ, ಕಾರ್ಯದರ್ಶಿ ಪ್ರದೀಪ ಬೆಂದ್ರೆ ಸಂಗೋಳ್ಳಿ ರಾಯಣ್ಣ ಗೊಂಡ ಸಂಘದ ಪದಾಧಿಕಾರಿಗಳು, ನಗರದ ಗಣ್ಯರು, ಪ್ರಮುಖರು ಭಾಗವಹಿಸಿದರು.
-------ಚಿತ್ರ 15ಬಿಡಿಆರ್60ಬಸವಕಲ್ಯಾಣದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಹತ್ತು ಮೂರ್ತಿಗಳ ಭವ್ಯ ಮೇರವಣಿಗೆ ನಡೆಯಿತು.