ಶರಣರು ನಿರಾಸೆ ಭಾವದ ಕಾಯಕ ಶ್ರೇಷ್ಠರು- ಶಶಿಧರ ಶಾಸ್ತ್ರಿ

| Published : Apr 27 2025, 01:45 AM IST

ಸಾರಾಂಶ

ಶರಣರು ಸರ್ವಸಂಘ ಪರಿತ್ಯಾಗಿಗಳಾಗಿ, ಲೌಕಿಕ ಪಾರಮಾರ್ಥಗಳನ್ನು ಗೆದ್ದವರು, ಅಂಥಾ ಮಹಾ ಶರಣರಿಂದ ನಮ್ಮ ಸಮಾಜ ಪರಿವರ್ತನೆಯಾಗಿದೆ ಎಂದು ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ನರಗುಂದ

ಶರಣರು ಸರ್ವಸಂಘ ಪರಿತ್ಯಾಗಿಗಳಾಗಿ, ಲೌಕಿಕ ಪಾರಮಾರ್ಥಗಳನ್ನು ಗೆದ್ದವರು, ಅಂಥಾ ಮಹಾ ಶರಣರಿಂದ ನಮ್ಮ ಸಮಾಜ ಪರಿವರ್ತನೆಯಾಗಿದೆ ಎಂದು ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಶಾಖಾಮಠದ ಗದ್ದುಗೆ ಶಿಲಾ ಮಂಟಪ ಹಾಗೂ ಗೋಪುರ ಲೋಕಾರ್ಪಣೆ ನಿಮಿತ್ತ ನಡೆದ 23ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಸಿರಿತನ ಬಂದರೆ ಮನಸ್ಥಿತಿ ಮತ್ತು ಪರಿಸ್ಥಿತಿ ಎರಡೂ ಬದಲಾಗುತ್ತವೆ. ಶರಣರ ಸತ್ಯನುಡಿಗಳು ಶರೀರದ ಬಂಡಿಯ ಕಡೇ ಗೀಲು ಇದ್ದ ಹಾಗೆ ಎನ್ನುವ ಮೂಲಕ ಮಾನವ ಶರೀರವನ್ನು ವಚನಗಳಲ್ಲಿ ಅರ್ಥೈಸಿದ ಬಸವಾದಿ ಶಿವಶರಣರು. ಕಾಯವೇ ಭಗವಂತನಿಗೆ ಅರ್ಪಿತವಾಗಬೇಕು, ಆಸೆ ಎಂಬುದು ಅರಸಂಗಲ್ಲದೇ ಶಿವಭಕ್ತರಿಗೆ ಉಂಟೆ ಅಯ್ಯಾ, ಕಾಯಕದಲಿ ನಿರತನಾದರೆ ಗುರು ಲಿಂಗ ಜಂಗಮದ ಹಂಗ ಹರಿಯಬೇಕು ಎನ್ನುವಂತೆ ವಚನಗಳಿಗೆ ಶ್ರೀಕಾರ ಹಾಕಿದ ಶರಣ ದಾಸಿಮಯ್ಯನವರು, ಸುರಗಿ ಚೌಡಯ್ಯ, ಮೋಳಿಗೆ ಮಾರಯ್ಯ, ಕೃಷಿ ಕಾಯಕದ ಇಳಿಹಾಳ ಬೊಮ್ಮಯ್ಯ ನಮ್ಮ ರೈತ ಸಮುದಾಯದ ಆದರ್ಶ ಎಂದರು. ಕಲ್ಯಾಣದಲ್ಲಿ ಸಾಮಾಜಿಕ ಕ್ರಾಂತಿಯ ಜ್ವಾಲೆ ಕಾಯಕ ದಾಸೋಹ ಮತ್ತು ವಚನ ರಚನೆಯ ಮೂಲಕ ಸರ್ವವ್ಯಾಪಿಯಾಗಿ ಪಸರಿಸಿದ್ದವು ಎಂದರು.

ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡಮನಿ, ನಾಗನಗೌಡ ತಿಮ್ಮನಗೌಡ್ರ, ಗುರುಬಸವ ಶೆಲ್ಲಿಕೇರಿ, ಶಿವಾನಂದ ಯಲಿಬಳ್ಳಿ, ಗುರಬಸಯ್ಯ ನಾಗಲೋಟಿಮಠ, ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಆರ್.ಐ.ನದಾಫ, ಹನಮಂತ ಕಾಡಪ್ಪನವರ, ಲೋಕಪ್ಪ ಕರಕೀಕಟ್ಟಿ, ಬಸಣ್ಣ ಕುಪ್ಪಸ್ತ, ಪ್ರಭಾಕರ ಉಳ್ಳಾಗಡ್ಡಿ, ಸುರೇಶ ಬನ್ನಿಗಿಡದ, ಮಲ್ಲಪ್ಪ ಕುಪ್ಪಸ್ತ, ಜಗದೀಶ ವಸ್ತ್ರದ, ಮುತ್ತಪ್ಪ ಜೋರಲ, ಶರಣಪ್ಪಗೌಡ ತಿರಕನಗೌಡ್ರ, ಪ್ರಾಚಾಯ ಬಿ.ಆರ್. ಸಾಲಿಮಠ ಇದ್ದರು.