ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಳೆದ ಒಂದು ವಾರದಿಂದ ಎನ್.ಆರ್.ಪುರ, ಬಾಳೆಹೊನ್ನೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಲಘು ವಿಮಾನ ಹಾರಾಟ ನಡೆಸುತ್ತಿದ್ದು, ಸ್ಥಳೀಯರ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಜಿಲ್ಲಾ ಪೊಲೀಸರು ಸ್ಪಷ್ಟನೆ ನೀಡಿ ಲಘು ವಿಮಾನ ಖನಿಜ ನಿಕ್ಷೇಪಗಳ ಪತ್ತೆಗೆ ಸರ್ವೇ ನಡೆಸಿದೆ ಎಂದು ತಿಳಿಸಲಾಗಿದೆ.ಭಾರತೀಯ ಭೂವೈಜ್ಞಾನಿಕ ಏರೋ ಜಿಯೋಫಿಸಿಕಲ್ (ವಾಯುಗಾಮಿ ಭೂಭೌತಿಕ) ಸಮೀಕ್ಷೆಯನ್ನು ಮೆಸರ್ಸ್ ಎಕ್ಸ್ಕ್ಯಾಲಿಬರ್ ಮೆಕ್ಫಾರ್ ಪ್ರೈವೇಟ್ ಕಂಪನಿಯಿಂದ ಖನಿಜ ನಿಕ್ಷೇಪಗಳ ಪ್ರದೇಶ ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ಈ ಸಮೀಕ್ಷೆ ಜುಲೈ 31ರ ವರೆಗೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕೆಲ ದಿನಗಳಿಂದ ಕಡಿಮೆ ಎತ್ತರದಲ್ಲಿ ವೈಮಾನಿಕ ಹಾರಾಟದ ದೃಶ್ಯ ಗೋಚರಿಸಲಿದೆ. ಈ ಬಗ್ಗೆ ಸಾರ್ವಜನಿಕರಲ್ಲಿನ ಗೊಂದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರಿಂದ ಈ ಸ್ಪಷ್ಟೀಕರಣಗಳನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಫೋಟೋ
ಕಳೆದ ಗುರುವಾರ ಲಘು ವಿಮಾನ ಹಾರಾಟ ನಡೆಸಿದ ಕುರಿತು ಪೊಲೀಸ್ ಇಲಾಖೆ ನಕ್ಷೆ ನೀಡಿದೆ.
