ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾಡಳಿತದಿಂದ ಈಗಾಗಲೇ ಸಮೀಕ್ಷೆ ನಡೆಸಿ ೯೬೨ ಕೆರೆಗಳ ಅಳತೆಯನ್ನು ನಿಗದಿಪಡಿಸಲಾಗಿಸಿದೆ. ಒತ್ತುವರಿ ತೆರವುಗೊಳಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆರೆ ಒತ್ತುವರಿ ತೆರವು ಸಮಿತಿ ಸಭೆ ನಡೆಸಿ ಇಲಾಖೆವಾರು ವ್ಯಾಪ್ತಿಗೆ ಬರುವ ಕೆರೆಗಳ ಒತ್ತುವರಿ ಹಾಗೂ ತೆರವುಗೊಳಿಸಿದ ವಿವರ ಪಡೆದುಕೊಂಡರು.
ಕೆರೆಗಳ ಸರ್ವೇ ಮಾಡಿಕೊಡಲಾಗಿದೆ. ಅಧಿಕಾರಿಗಳು ಮಹಜರು ಮಾಡಿ ಒತ್ತುವರಿ ತೆರವುಗೊಳಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು. ಅದರ ಸಂರಕ್ಷಣೆ ಮಾಡಿಕೊಳ್ಳಲು ಯೋಜನೆ ರೂಪಿಸಿಕೊಂಡು ಅನುದಾನ ಪಡೆದು ಕ್ರಮ ಕೈಗೊಳ್ಳುವುದು. ಕೆರೆಗಳ ಸುತ್ತ ಆಗಿಂದಾಗ್ಗೆ ಪರಿಶೀಲನೆ ನಡೆಸಿ ಮತ್ತೆ ಒತ್ತುವರಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕೆರೆ ಒತ್ತುವರಿ ತೆರವು ಕುರಿತು ಸರ್ಕಾರಕ್ಕೆ ವರದಿ ನೀಡಬೇಕಿರುವುದರಿಂದ ವರದಿಯನ್ನು ಶೀಘ್ರವಾಗಿ ಸಲ್ಲಿಸುವಂತೆ ತಿಳಿಸಿದರಲ್ಲದೇ, ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುವವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯ್ತಿ, ಎಚ್‌ಎಲ್‌ಬಿಸಿ ಕಾವೇರಿ ನೀರಾವರಿ ನಿಗಮ, ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ೯೬೨ ಕೆರೆಗಳ ನೀರನ್ನು ಪರೀಕ್ಷೆಗೊಳಪಡಿಸಿ, ಪ್ರತಿ ಕೆರೆಗಳಿಗೂ ಸಹ ಜಿಪಿಎಸ್ ಮ್ಯಾಪಿಂಗ್ ಕಡ್ಡಾಯವಾಗಿ ಮಾಡಿಸುವಂತೆ ತಿಳಿಸಿದರಲ್ಲದೇ, ಕೆರೆ ನೀರು ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳ ಜವಾಬ್ದಾರಿ ಹಾಗೂ ಸಾರ್ವಜನಿಕರು ಕೆರೆಗಳನ್ನು ಕಲುಷಿತ ಮಾಡದಂತೆ ಜಾಗೃತಿ ಸೂಚನಾ ಫಲಕಗಳನ್ನು ಅಳವಡಿಸಿ ಅದರ ಛಾಯಾಚಿತ್ರಗಳನ್ನು ಲಗತ್ತಿಸುವಂತೆ ತಿಳಿಸಿದರು.
ಸಾರ್ವಜನಿಕರು ಕೆರೆ ಕಲುಷಿತಗೊಳಿಸದಂತೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನರಿಗೆ ಅರಿವು ಮೂಡಿಸುವುದು. ಕೆರೆಗಳ ನೀರನ್ನು ಕಲುಷಿತಗೊಳಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ವಿಷಯವಾಗಿ ದೂರು ನೀಡಲು ಜಿಲ್ಲಾ ಮಟ್ಟದಲ್ಲಿ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಬೇಕು, ಕೆರೆಗಳನ್ನು ಸಂರಕ್ಷಿಸಲು ಸ್ಥಳೀಯವಾಗಿ ಕೆರೆ ಸಂರಕ್ಷಣಾ ಸಮಿತಿಯನ್ನು ರಚಿಸುವಂತೆ ಹೇಳಿದರು.ಸಭೆಯಲ್ಲಿ ಪರಿಸರ ಹಾಗೂ ವಾಯುಮಾಲಿನ್ಯ ನಿಯಂತ್ರಣ ಅಧಿಕಾರಿ ಗೀತಾ, ಜಲಮಂಡಳಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಮೇಘಾ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಸಿ ನಾಲೆಗೆ ಕಾರು ಉರುಳಿ ಮೂವರು ಸಾವು ಪ್ರಕರಣ:ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳು ವಾರಸುದಾರರಿಗೆ ಹಸ್ತಾಂತರ
ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ತಿಬ್ಬನಹಳ್ಳಿ ವಿಸಿ ನಾಲೆಗೆ ಕಾರು ಉರುಳಿ ಮೃತಪಟ್ಟ ಮೂವರು ಶವಗಳ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು.
ಸೋಮವಾರ ವಿಸಿ ನಾಲೆಗೆ ಕಾರು ಬಿದ್ದ ಪ್ರಕರಣದಲ್ಲಿ ಹಾಲಹಳ್ಳಿ ಮುಸ್ಲಿಂ ಬ್ಲಾಕ್ ನ ಫಯಾಜ್ ಬ್ಯಾಟರಿ, ಅಸ್ಲಂಪಾಷ ಮತ್ತು ಫೀರ್ ಖಾನ್ ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ ಇಬ್ಬರು ಶವಗಳು ಪತ್ತೆಯಾಗಿದ್ದವು. ಮಂಗಳವಾರ ಮತ್ತೊಂದು ಶವ ಪತ್ತೆಯಾಯಿತು. ಮಿಮ್ಸ್ ಶವಗಾರದಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು.ತಲಾ 10 ಲಕ್ಷ ರು. ಪರಿಹಾರಕ್ಕೆ ಆಗ್ರಹ:
ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 10 ಲಕ್ಷ ರು. ಪರಿಹಾರ ನೀಡುವಂತೆ ಸಂಬಂಧಿಗಳು, ಸ್ನೇಹಿತರು ಆಗ್ರಹಿಸಿದರು. ಮೃತ ಪಟ್ಟವರು ಮರಗೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಇಡೀ ಕುಟುಂಬದ ಜೀವನ ನಿರ್ವಹಣೆ ಮೃತರ ದುಡಿಮೆಯಿಂದಲೇ ನಡೆಯುತ್ತಿದೆ. ಆದ್ದರಿಂದ ಸಂಕಷ್ಟಕ್ಕೆ ಸಿಲುಕಿರುವ ಅವರ ಕುಟುಂಬಕ್ಕೆ ಸರ್ಕಾರ ನೆರವಾಗಬೇಕು ಎಂದು ಒತ್ತಾಯಿಸಿದರು.ಬದುಕುಳಿದ ನಯಾಜ್ ಸ್ಥಿತಿ ಗಂಭೀರ:
ವಿಸಿ ನಾಲೆಗೆ ಕಾರು ಬಿದ್ದ ಪ್ರಕರಣದಲ್ಲಿ ಬದುಕುಳಿದ ನಯಾಜ್‌ಗೆ ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಯಾಜ್ ಕುತ್ತಿಗೆಗೆ ತೀವ್ರ ಪೆಟ್ಟು ಬಿದ್ದಿರುವುದರಿಂದ ಸದ್ಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮಿಮ್ಸ್ ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುದ್ದಾರೆ.