ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಕಳೆದ ೩ ದಶಕದಿಂದ ದತ್ತಾಂಶದ ನಿಖರತೆಯ ಗೊಂದಲದಿಂದಾಗಿ ನಿವೃತ್ತ ನ್ಯಾಯಾಮೂರ್ತಿ ನಾಗಮೋಹನದಾಸ್ ಏಕಪೀಠ ಸದಸ್ಯತ್ವದ ಆಯೋಗ ಸಮಿತಿ ರಚಿಸಿದ್ದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲು ನಿಖರವಾದ ದತ್ತಾಂಶ ಪಡೆಯಲು ಸಮೀಕ್ಷೆಗಳಲ್ಲಿ ಸಮರ್ಪವಾದ ಮಾಹಿತಿ ನೋಂದಾಯಿಸಿದಾಗ ಮಾತ್ರ ನಿಖರವಾದ ಮೀಸಲಾತಿ ಪಡೆಯಲು ಸಾಧ್ಯ. ಜಾತಿ ಗಣತಿಯ ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಉಪಜಾತಿಯ ಜೊತೆಗೆ ಮೂಲಜಾತಿ ನೋಂದಾಯಿಸಕೊಳ್ಳಬೇಕೆಂಬ ಅರಿವು ಮೂಡಿಸಬೇಕಾಗಿದೆ ಎಂದು ಚಿತ್ರದುರ್ಗ ಭೋವಿ ಗುರು ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ವಿಚಾರಗಳನ್ನು ಪರಿಪೂರ್ಣವಾಗಿ ಅರಿಯಲು ದತ್ತಾಂಶದ ಅಗತ್ಯವಿದೆ ಇದರಿಂದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.ನ್ಯಾ.ನಾಗಮೋಹನ್ ದಾಸ್ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವಂತ ಕೈಪಿಡಿಗಳನ್ನು ಅಧ್ಯಯನ ಮಾಡುವಂತಾಗಬೇಕು, ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಬೇಕು, ನಮಗೆ ದೊರೆತಿರುವ ಮಾಹಿತಿ ಪ್ರಕಾರ ೨೦೨೫ರಲ್ಲಿ ಸುಮಾರು ೬.೮೦ ಕೋಟಿ ಜನಸಂಖ್ಯೆ ಹೊಂದಿದ್ದೇವೆ. ಇದನ್ನು ನಿಖರಪಡಿಸಿಕೊಳ್ಳಲು ಸರ್ಕಾರವು ಸೂಚಿಸಿರುವ ಸಮಿತಿಯ ವರದಿಯಲ್ಲಿ ಖಚಿತಪಡಿಸಿಕೊಳ್ಳಬೇಕು ಹಾಗಾಗಿ ಎಲ್ಲರೂ ಸಮೀಕ್ಷೆಗೆ ಒಳಪಟ್ಟು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಬೇಕು ಎಂದರು.ಸಮೀಕ್ಷೆ ಸಂದರ್ಭದಲ್ಲಿ ತಮ್ಮ ಚುನಾವಣಾ ಗುರುತಿನ ಚೀಟಿ/ ಆಧಾರ್ ಕಾರ್ಡನೊಂದಿಗೆ ತಮ್ಮ ಉಪಜಾತಿ ವಡ್ಡರ್ ಜೊತೆಗೆ ಭೋವಿ ಎಂದು ನೋಂದಾಯಿಸಿಕೊಳ್ಳಬೇಕು. ತಮ್ಮ ಮನೆಗಳ ಮೇಲೆ ಜಾತಿ, ಉಪಜಾತಿ ಸ್ಟೀಕರ್‌ನ್ನು ಅಳವಡಿಸಬೇಕು. ಇದರಿಂದ ಸಮೀಕ್ಷೆಗೆ ಬರುವವರು ತಮ್ಮ ಮನೆಗಳನ್ನು ಗುರುತಿಸಲು ಸುಲಭವಾಗಲಿದೆ. ಬಹುತೇಕ ಮಂದಿ ಊರಿಂದ ಊರಿಗೆ ಅಲೆಮಾರಿಗಳ ಬದುಕು ಹೊಂದಿರುವವರಿಂದಾಗಿ ಸಮೀಕ್ಷೆಯಲ್ಲಿ ಕೈತಪ್ಪಿ ಹೋದಲ್ಲಿ ಮುಂದಿನ ಭವಿಷ್ಯದ ಪೀಳಿಗೆಗಳಿಗೆ ಅನ್ಯಾಯವಾಗಲಿದೆ. ವಂಚನೆಯಾಗಲಿದೆ ಅದಕ್ಕೆ ಅವಕಾಶ ಮಾಡಿಕೊಡದೆ ಮೇ.೫ರಿಂದ ೧೭ರವರೆಗೆ ಮಾಡಲಿರುವ ಸಮೀಕ್ಷೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿ ಪಾಲಿಸಬೇಕೆಂದು ಕರೆ ನೀಡಿದರು.
ಒಳಮೀಸಲಾತಿಯಲ್ಲಿ ೧೦೧ ಉಪಜಾತಿಗಳಿವೆ. ನಮ್ಮದು ೨೩ (೧ ರಿಂದ ೭)ರವರೆಗೆ ಭೋವಿಯ ವಿವಿಧ ಉಪಜಾತಿಗಳಾಗಿದೆ. ಉಪಜಾತಿಯ ಕೈಪಿಡಿಯಲ್ಲಿ ಕಾಲಂ ೨೩ರ (೪) ವಡ್ಡರ್ ಎಂದಿರುವುದನ್ನು ಗುರುತಿಸಬೇಕಾಗಿದೆ. ಆದಿಕಾಲದಿಂದ ಆಧುನಿಕ ಕಾಲದವರೆಗೆ ನಾನಾ ವಿಧವಾದ ಆಲಯಗಳನ್ನು ನಿರ್ಮಾಣ ಮಾಡಿರುವ ವಡ್ಡರ್ ಸಮುದಾಯದ ಕಲ್ಲು ಕೆಲಸಗಳು ಕುಲ ಕಸುಬು ಎಂದು ಗುರುತಿಸಲಾಗಿದೆ. ಕಾಲಂ ೧೫ ರಂತೆ ೨೩ರ ಪ್ರಕಾರ ಕಲ್ಲು ಕುಟುಕರು, ಕ್ರಮ ಸಂಖ್ಯೆ ೬೩ ಎಂದು ನಮೂದಿಸಬೇಕಾಗುತ್ತದೆ. ಕಟ್ಟಡ ನಿರ್ಮಾಟದಲ್ಲಿಯೇ ವಿವಿಧ ಕಸುಬುಗಳಿಗೆ ವಿವಿಧ ಸಂಖ್ಯೆಗಳನ್ನು ನೀಡಿ ಗುರುತಿಸಲಾಗಿದೆ ಎಂದು ವಿವರಿಸಿದರು.ಜಾತಿಯ ಹೆಸರನ್ನು ನಮೂದಿಸಿಕೊಳ್ಳಲು ಯಾವುದೇ ಕೀಳರಿಮೆ ಬೇಡ. ಪ್ರತಿಯೊಬ್ಬರು ಕೈಪಿಡಿ ಅಧ್ಯಯನ ಮಾಡಬೇಕು, ಶಿಕ್ಷಣವಂತರು ಅನಕ್ಷಸ್ಥರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಸರ್ಕಾರವು ಇತಿಹಾಸದ ಕುಲಶಾಸ್ತ್ರದ ಅಧ್ಯಯನದಲ್ಲಿ ಬ್ರಾಹ್ಮಣ ಹಾಗೂ ಬ್ರಾಹ್ಮಣೇತರು ಎಂದು ಗುರುತಿಸಲಾಗಿದೆ. ಆಯಾಯಾ ವೃತ್ತಿಗೆ ಅನುಸಾರವಾಗಿ ಜಾತಿಗಳನ್ನು ಉಪಜಾತಿಗಳನ್ನು ವಿಂಗಡಿಸಿರುವುದು ಕಂಡು ಬರುವುದು. ಪರಿಶಿಷ್ಟರಲ್ಲಿ ಭೋವಿ ಸಮುದಾಯದವರು ಕಟ್ಟಡ ನಿರ್ಮಾಣದ ಅತ್ಯಂತ ಕಠಿಣವಾದ ಶ್ರಮಿಕವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಗುರುತಿಸಲಾಗಿದೆ, ಒಳ ಮೀಸಲಾತಿಯಲ್ಲಿ ೮೦ ಜಾತಿಗಳು ಸೇರಿದ್ದು ಇದರಲ್ಲಿ ಭೋವಿ ವರ್ಗದವರನ್ನು ೫-೬ ಪಂಗಡಗಳಲ್ಲಿ ಗುರುತಿಸಲಾಗಿದೆ ಎಂದು ಹೇಳಿದರು. ವಿವಿಧ ರೀತಿಯ ಕಟ್ಟಣಗಳ ನಿರ್ಮಾತರಾಗಿರುವ ಭೋವಿ ಸಮುದಾಯದವರನ್ನು ಇದರಲ್ಲೂ ಪ್ರತ್ಯೇಕತೆ ಗುರುತಿಸಿದೆ, ಕಲ್ಲುಗಾರಿಕೆಯ ಮೂಲ ಕಸುಬು ಆಗಿದ್ದು ಇದರಲ್ಲಿ ಇನ್ನು ಹಲವು ವರ್ಗಗಳನ್ನು ಗುರುತಿಸುವುದು ಬಾಕಿ ಉಳಿದಿದೆ ಅವರುಗಳನ್ನು ಗುರುತಿಸದಿದ್ದರೆ ನಮ್ಮ ಪೀಳಿಗೆಗಳ ಭವಿಷ್ಯಕ್ಕೆ ಅನ್ಯಾಯ, ವಂಚನೆಯಾಗಲಿದೆ ಹಾಗಾಗಿ ಅದಕ್ಕೆ ಅವಕಾಶ ನೀಡದಂತೆ ಸಮೀಕ್ಷೆಯಲ್ಲಿ ನಿಖರವಾಗಿ ಯಾವುದೇ ಮುಜುಗಾರಕ್ಕೆ ಒಳಗಾಗದೆ ಉಪಜಾತಿಯೊಂದಿಗೆ ಮೂಲಜಾತಿಯನ್ನು ಎಲ್ಲರೂ ಒಂದೇ ರೀತಿಯಲ್ಲಿ ನಮೂದಿಸಿದಾಗ ಮಾತ್ರ ಗೊಂದಲ ಬಗೆಹರಿದು ನಿಖರವಾದ ಮೀಸಲಾತಿ ಸಿಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ಭೋಮಿ ಸಮುದಾಯದ ಮುಖಂಡ ಶ್ರೀಕೃಷ್ಣ, ಭೋವಿ ಸಂಘಟನೆಯ ಅಧ್ಯಕ್ಷ ಎಲ್.ಜಿ.ಮುನಿರಾಜು, ಮುಖಂಡರಾದ ಸಿ.ವಿ.ಗೋಪಾಲ್, ವರದೇನಹಳ್ಳಿ ವೆಂಕಟೇಶ್, ಕೆ.ವೈ. ಹರಿಕೃಷ್ಣನ್, ಶ್ರೀನಿವಾಸ್, ರಾಮಾಂಜನಪ್ಪ, ಶ್ರೀನಾಥ್ ಬಾಬು, ಪ್ರಕಾಶ್, ಕೆ.ಜಿ.ಎಫ್ ಪ್ರಕಾಶ್, ಬಾಬು, ಶ್ರೀನಿವಾಸ್, ವೆಂಕಟೇಶ್, ಕಾಶಿ, ಮುರಳಿ ಇದ್ದರು.ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ದಾಳಿ ಖಂಡನೀಯಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪದಕರು ಅಮಾಯಕರ ಮೇಲೆ ಮಾಡಿದ ಮರಣ ಹೋಮ ನಾವು ತೀವ್ರವಾಗಿ ಖಂಡಿಸುತ್ತೇವೆ, ಧರ್ಮದ ರಕ್ಷಣೆಗೆ ಕ್ರಾಂತಿ ಅನಿವಾರ್ಯವಾಗಿದೆ, ನಾವುಗಳು ಶಾಂತಿಗೂ ಬದ್ದರಾಗಿರೋಣಾ, ಕ್ರಾಂತಿಗೂ ಸಿದ್ದವಾಗಿರೋಣಾ, ನಮ್ಮ ಮುಂದಿನ ಭವಿಷ್ಯದ ಸುಂದರ ಬದುಕಿಗಾಗಿ ಮುಂದಿನ ಪೀಳಿಗೆಗಳಿಗೆ ಅವುಗಳು ಸಿಗಬೇಕು ಅಂದರೆ ಛಡಿ ಏಟು ಬೀಸುವ ಮೂಲಕ ಪಾಠ ಕಲಿಸಬೇಕಾಗಿದೆ. ನಮ್ಮ ಮನೆಗೆ ಶಸ್ತ್ರಗಳೊಂದಿಗೆ ನುಗ್ಗಿದಾಗ ನಾವುಗಳು ಶಾಂತಿಯ ಪಾಠ ಕಲಿಸಲು ಆಗುವುದಿಲ್ಲ ಹಾಗಾಗಿ ನಾವುಗಳು ಶಸ್ತ್ರಾಸ್ತಗಳೊಂದಿಗೆಯೇ ಉತ್ತರಿಸಬೇಕೆಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.