ಹೊಸ ಕಂದಾಯ ಗ್ರಾಮಕ್ಕೆ ಸರ್ವೆ ಕಾರ್ಯ: ತಹಸೀಲ್ದಾರ್‌ ಶ್ರುತಿ

| Published : Feb 11 2024, 01:45 AM IST

ಹೊಸ ಕಂದಾಯ ಗ್ರಾಮಕ್ಕೆ ಸರ್ವೆ ಕಾರ್ಯ: ತಹಸೀಲ್ದಾರ್‌ ಶ್ರುತಿ
Share this Article
  • FB
  • TW
  • Linkdin
  • Email

ಸಾರಾಂಶ

ಮರಿಯಮ್ಮನಹಳ್ಳಿ ಹೋಬಳಿಯ ಮೂಲ ತಿಮ್ಮಲಾಪುರ ಗ್ರಾಮದ ಹೊಸಕಂದಾಯ ಗ್ರಾಮ ಪೋತಲಕಟ್ಟೆ, ಮೂಲ ಡಣಾಯಕನಕೆರೆ ಗ್ರಾಮದ ಹೊಸಗ್ರಾಮ ದೇವಲಾಪುರವನ್ನು ಕಂದಾಯ ಗ್ರಾಮ ಮಾಡಲು ಸರ್ವೆ ನಡೆಯುತ್ತಿದೆ ಎಂದು ಹೊಸಪೇಟೆ ತಹಸೀಲ್ದಾರ್‌ ಶ್ರುತಿ ಎಂ.ಎಂ. ಹೇಳಿದ್ದಾರೆ.

ಮರಿಯಮ್ಮನಹಳ್ಳಿ: ಮೂಲಗ್ರಾಮದಿಂದ ಅಂದಾಜು ಒಂದು ಕಿ.ಮೀ. ದೂರದಲ್ಲಿರುವ 300 ಜನಸಂಖ್ಯೆಯುಳ್ಳ ಗ್ರಾಮವನ್ನು ಕಂದಾಯ ಗ್ರಾಮಗಳನ್ನಾಗಿಸಲು ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಸರ್ವೆ ನಡೆಸಲಾಗುತ್ತಿದೆ ಎಂದು ಹೊಸಪೇಟೆಯ ನೂತನ ತಹಸೀಲ್ದಾರ್‌ ಶ್ರುತಿ ಎಂ.ಎಂ. ಹೇಳಿದರು.

ಅವರು ಪಟ್ಟಣದ ಶ್ರೀ ಲಕ್ಷ್ಮೀನಾರಾಯಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ‌ ನಡೆಯುವ ಪ್ರತಿ ಅಮಾವಾಸ್ಯೆಯ ನಿಮಿತ್ತ ಮುಜರಾಯಿ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಹೋಬಳಿಯ ಮೂಲ ತಿಮ್ಮಲಾಪುರ ಗ್ರಾಮದ ಹೊಸಕಂದಾಯ ಗ್ರಾಮ ಪೋತಲಕಟ್ಟೆ, ಮೂಲ ಡಣಾಯಕನಕೆರೆ ಗ್ರಾಮದ ಹೊಸಗ್ರಾಮ ದೇವಲಾಪುರವನ್ನು ಕಂದಾಯ ಗ್ರಾಮ ಮಾಡಲು ಸರ್ವೆ ನಡೆಯುತ್ತಿದೆ. ಮೂಲ ತಾಳೆಬಸಾಪುರ ಗ್ರಾಮದ ಹೊಸ ಕಂದಾಯ ಗ್ರಾಮ ತಾಳೆಬಸಾಪುರ ತಾಂಡದ ಅಧಿಸೂಚನೆ ಅಂತಿಮ ಹಂತದಲ್ಲಿದೆ ಎಂದು ಅವರು ತಿಳಿಸಿದರು.

ಆನಂತರ ಪಟ್ಟಣದ ಶ್ರೀ ಲಕ್ಷ್ಮೀನಾರಾಯಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿಯ ನೂತನ ಜೋಡಿ ರಥಗಳ ನಿರ್ಮಾಣದ ಕಾರ್ಯವನ್ನು ಪರಿಶೀಲಿಸಿದರು.

ದೇವಸ್ಥಾನದ ಆಡಳಿತಾಧಿಕಾರಿ, ಉಪತಹಸೀಲ್ದಾರ್ ಎಚ್. ನಾಗರಾಜ, ಕಮಲಾಪುರದ ಉಪತಹಸೀಲ್ದಾರ್‌ ಮಂಜುನಾಥ, ಕಂದಾಯ ನಿರೀಕ್ಷಕ ಬಸವರಾಜಯ್ಯ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಎಲೆಗಾರ ಮಂಜುನಾಥ, ಸ್ಥಳೀಯ ಮುಖಂಡರಾದ ಗುಂಡಾಸ್ವಾಮಿ ಉಪಸ್ಥಿತರಿದ್ದರು.