ಸೂರ್ಯ ನಮಸ್ಕಾರದಿಂದ ದೇಹದ ಸರ್ವಾಂಗದಲ್ಲಿಯೂ ಲವಲವಿಕೆ: ಯೋಗಗುರು ಗಣೇಶ್

| Published : Feb 06 2025, 12:16 AM IST

ಸೂರ್ಯ ನಮಸ್ಕಾರದಿಂದ ದೇಹದ ಸರ್ವಾಂಗದಲ್ಲಿಯೂ ಲವಲವಿಕೆ: ಯೋಗಗುರು ಗಣೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನ ಭಗವಾನ್ ಸೂರ್ಯದೇವನ ಜನ್ಮದಿನವೆಂದು ಹಾಗೂ ಸೂರ್ಯನು ತನ್ನ ದೈವಿಕ ಬೆಳಕಿನಿಂದ ಇಡೀ ವಿಶ್ವವನ್ನು ಬೆಳಗಿಸುತ್ತಾರೆ ಎಂಬ ನಂಬಿಕೆ ಇದೆ.

ಹೊಳೆನರಸೀಪುರ: ಔಷಧಿ ಗುಣಗಳಿಂದ ಕೂಡಿದ ಸೂರ್ಯನ ಮುಂಜಾನೆಯ ಕಿರಣಗಳ ಸ್ಪರ್ಶದಿಂದ ಹಲವಾರು ಪ್ರಯೋಜನಗಳನ್ನು ಅನುಭವಿಸಿದ್ದೇವೆ. ಅದೇ ರೀತಿ ಸೂರ್ಯ ನಮಸ್ಕಾರದಿಂದ ದೇಹದ ಸರ್ವಾಂಗದಲ್ಲಿಯೂ ಲವಲವಿಕೆ, ಜ್ಞಾನ ಮತ್ತು ಆರೋಗ್ಯ ವೃದ್ಧಿಸುತ್ತದೆ ಎಂದು ಯೋಗಗುರು ಗಣೇಶ್ ಪ್ರಸಾದ್ ತಿಳಿಸಿದರು. ಪಟ್ಟಣದ ಪತಂಜಲಿ ಯೋಗ ಭವನದಲ್ಲಿ ಬುಧವಾರ ರಥಸಪ್ತಮಿ ಪ್ರಯುಕ್ತ ಆಯೋಜಿಸಿದ್ದ ೧೦೮ ಸೂರ್ಯ ನಮಸ್ಕಾರ ಮಾಡಿದ ನಂತರ ಮಾತನಾಡಿದರು. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನ ಭಗವಾನ್ ಸೂರ್ಯದೇವನ ಜನ್ಮದಿನವೆಂದು ಹಾಗೂ ಸೂರ್ಯನು ತನ್ನ ದೈವಿಕ ಬೆಳಕಿನಿಂದ ಇಡೀ ವಿಶ್ವವನ್ನು ಬೆಳಗಿಸುತ್ತಾರೆ ಎಂಬ ನಂಬಿಕೆ ಇದೆ. ಜತೆಗೆ ಪೂರ್ವಿಕರ ಕಾಲದಿಂದಲೂ ಯೋಗಾಸನದಲ್ಲಿ ಸೂರ್ಯ ನಮಸ್ಕಾರಕ್ಕೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ ೨೦೦೪ರಿಂದ ರಥಸಪ್ತಮಿಯಂದು ಸೂರ್ಯ ನಮಸ್ಕಾರ ಮಾಡುವ ಮೂಲಕ ಸೂರ್ಯದೇವನಿಗೆ ವಂದಿಸುತ್ತೇವೆ ಎಂದು ತಿಳಿಸಿ, ಸೂರ್ಯ ಕಿರಣಗಳಿಂದ ಮನುಷ್ಯನ ದೇಹದ ಮೇಲಿನ ಪ್ರಭಾವ ಹಾಗೂ ಉಪಯೋಗಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಹಿರಿಯರಾದ ಸತ್ಯನಾರಾಯಣಶೆಟ್ಟಿ, ಕರುಣಾಕರ್, ಪತಂಜಲಿ ಯೋಗಕೂಟದ ಅಧ್ಯಕ್ಷ ಎಚ್.ಎಸ್.ಲೋಕೇಶ್, ಉಪಾಧ್ಯಕ್ಷೆ ಪ್ರೇಮ ಮಂಜುನಾಥ್, ವಾಸುದೇವಮೂರ್ತಿ, ದಿನೇಶ್ ಎಂ.ಪಿ., ಎಚ್.ಕೆ.ನರಸಿಂಹ, ಮಂಜುನಾಥ್, ನಾರಾಯಣಪ್ಪ, ದೇವರಾಜು, ಕೃಷ್ಣಮೂರ್ತಿ, ಮಲ್ಲಿಕಾ, ದರ್ಶನ್, ಚಂದ್ರಮತಿ, ಸುಜಾತ, ಪ್ರತಿಮಾ, ಧನಲಕ್ಷ್ಮೀ, ಸುರಕ್ಷಾ, ವಿಜಯ, ನೇತ್ರಾವತಿ, ಗುಂವತಿ, ರೂಪ, ಮಹೇಶ್ವರಿ ಹಾಗೂ ಇತರರು ಭಾಗವಹಿಸಿದ್ದರು.