ಸಾರಾಂಶ
ಕೆ.ಕೆ.ಹುಂಡಿ ಗ್ರಾಮದ ರೇವಪ್ಪ ಎಂಬವರಿಗೆ ಸೇರಿದ ಹಸು ಹುಲಿ ದಾಳಿಗೆ ಬಲಿಯಾಗಿದೆ.
ಚಾಮರಾಜನಗರ:
ಗುಂಡ್ಲುಪೇಟೆ ತಾಲೂಕಿನ ಕೆ.ಕೆ.ಹುಂಡಿ ಸಮೀಪ ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು ವನ್ಯಜೀವಿ ದಾಳಿಗೆ ಬಲಿಯಾಗಿದ್ದು, ಹುಲಿ ದಾಳಿ ಶಂಕೆ ವ್ಯಕ್ತವಾಗಿದೆ.ಕೆ.ಕೆ.ಹುಂಡಿ ಗ್ರಾಮದ ರೇವಪ್ಪ ಎಂಬವರಿಗೆ ಸೇರಿದ ಹಸು ಹುಲಿ ದಾಳಿಗೆ ಬಲಿಯಾಗಿದೆ. ರೇವಪ್ಪ ಕುಟುಂಬ ಜಮೀನಿನಲ್ಲಿ ವಾಸವಿದ್ದು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸುವನ್ನು 50-60 ಮೀ. ದೂರಕ್ಕೆ ಎಳೆದೊಯ್ದು ರಸ್ತೆಯಲ್ಲೇ ರಕ್ತ ಹೀರಿ ಬಲಿ ಪಡೆದಿದೆ.ಹಸು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ಕೊಡಬೇಕು. ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ. ಇನ್ನು, ಕೊಟ್ಟಿಗೆಯಲ್ಲಿದ್ದ ಹಸವನ್ನು ರಸ್ತೆಗೆ ಎಳೆದೊಯ್ದು ರಕ್ತ ಹೀರಿದ್ದನ್ನು ಕಂಡ ಸ್ಥಳೀಯರು ಭೀತಿಗೊಳಗಾಗಿದ್ದಾರೆ.
----------26ಸಿಎಚ್‌ಎನ್54
ಗುಂಡ್ಲುಪೇಟೆ ತಾಲೂಕಿನ ಕೆ.ಕೆ.ಹುಂಡಿ ಸಮೀಪ ಕೆ.ಕೆ.ಹುಂಡಿ ಗ್ರಾಮದ ರೇವಪ್ಪ ಎಂಬವರಿಗೆ ಸೇರಿದ ಹಸು ಹುಲಿ ದಾಳಿಯಿಂದ ಸಾವನ್ನಪ್ಪಿರುವುದು.--------