ನಾಯಕ ಜನಾಂಗದ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ಹಾಗೂ ಕೋಮುಸಾಮರಸ್ಯವನ್ನು ಹಾಳುಮಾಡುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಈ ಕೂಡಲೇ ಅಮಾನತುಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ನಾಯಕ ಜನಾಂಗದ ಹೋರಾಟ ಸಮಿತಿಯು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಾಯಕ ಜನಾಂಗದ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ಹಾಗೂ ಕೋಮುಸಾಮರಸ್ಯವನ್ನು ಹಾಳುಮಾಡುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಈ ಕೂಡಲೇ ಅಮಾನತುಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ನಾಯಕ ಜನಾಂಗದ ಹೋರಾಟ ಸಮಿತಿಯು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ನಾಯಕ ಸಮುದಾಯ ತನ್ನದೆಯಾದ ಒಂದು ಇತಿಹಾಸ ಹೊಂದಿರುವ ಸಮುದಾಯವಾಗಿದ್ದು ಈ ಸಮುದಾಯದ ಕಿಡಿಗೇಡಿಗಳು ಕಳಂಕ ತರುವ ಕೆಲಸವನ್ನು ಮಾಡುತ್ತಿದ್ದಾರೆ. ತಪ್ಪಿಸ್ಥತ ಅಧಿಕಾರಿಗಳ ಮೇಲೆ ಒಂದು ವಾರದೊಳಗೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚಾಮರಾಜನಗರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಇತ್ತೀಚೆಗೆ ಕೋಮುಸೌಹಾರ್ದತೆಯನ್ನು ಹಾಳು ಮಾಡುವ ಕೆಲವು ಘಟನೆಗಳನ್ನು ಕಿಡಿಗೇಡಿಗಳು ಅವ್ಯಹಿತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇವರ ಈ ಕೃತ್ಯಕ್ಕೆ ಸಹಾಯವಾಗುವ ರೀತಿಯಲ್ಲಿ ಚಾಮರಾಜನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕವಿತ ಮತ್ತು ಅವರ ತಂಡದ ಸದಸ್ಯರಾದ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಸಾಗರ್, ನವೀನ್ ಹಾಗೂ ಎ.ಎಸ್.ಐ. ಮಹದೇವು ಅವರು ಕರ್ತವ್ಯ ನಿರ್ವಹಿಸಿದ್ದಾರೆ.ಚಾಮರಾಜನಗರ ತಾಲೂಕು ಬದನಗುಪ್ಪೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ನಿರ್ಣಯಕ್ಕೆ ವಿರುದ್ಧವಾಗಿ ನಾಮಫಲಕವನ್ನು ಅಳವಡಿಸಿರುವುದು, ಚಾಮರಾಜನಗರ ತಾಲೂಕು ಹೊಂಗನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ವಾಟರ್‌ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ಗ್ರಾಮ ಪಂಚಾಯಿತಿ ನೌಕರ ಚಿಕ್ಯೂಸನಾಯಕ ತನಗೆ 27 ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಂಬಳ ಮಾಡದೇ ಆರ್ಥಿಕವಾಗಿ ತೊಂದರೆ ಉಂಟು ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ರೂಪ ಮೋಹನ್‌ಕುಮಾರ್, ಅವರ ಪತಿ ಮೋಹನ್ ಕುಮಾರ್, ಪಿಡಿಒ ರಾಮೇಗೌಡ ಅವರುಗಳು ಮಾನಸಿಕವಾಗಿ ಕಿರುಕುಳ ನೀಡುವುದರ ಜೊತೆಗೆ ಸಂಬಳವನ್ನು ನೀಡದೇ ಇರುತ್ತಾರೆ. ಆ ಕಾರಣಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಮರಣ ಪತ್ರವನ್ನು ಬರೆದಿಟ್ಟು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇದುವರೆಗೆ ಅಪಾಧಿತರನ್ನು ಇನ್ನೂ ಸಹ ಬಂಧಿಸಿಲ್ಲ ಎಂದರು..ಚಾಮರಾಜನಗರ ತಾಲೂಕು ಜ್ಯೋತಿಗೌಡನಪುರ ಗ್ರಾಮದಲ್ಲಿ ಬುದ್ಧ ಪ್ರತಿಮೆ ಹಾಗೂ ಅಂಬೇಡ್ಕರ್ ನಾಮಫಲಕವನ್ನು ಧ್ವಂಸಗೊಳಿಸಿದ್ದು, ಈ ಘಟನೆಯಲ್ಲಿ ನೈಜ ಅಪರಾಧಿಗಳನ್ನು ಬಂಧಿಸದೇ ನಾಯಕ ಜನಾಂಗದ ಮೇಲೆ ದುರುದ್ದೇಶದಿಂದ ನಿರಪರಾಧಿಯನ್ನು ಬಂಧಿಸಿದ್ದು, ಬಂಧಿಸಿರುವ ವ್ಯಕ್ತಿಯ ಮೇಲೆ ಆಧಾರಗಳನ್ನು ಸೃಷ್ಟಿ ಮಾಡುವ ಸಲುವಾಗಿ ಅವನ ಸ್ನೇಹಿತನನ್ನು ಠಾಣೆಗೆ ಕರೆಯಿಸಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಲ್ಲೆ ಮಾಡಿದ್ದಾರೆ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕವಿತ ಮತ್ತು ಅವರ ತಂಡದ ಸದಸ್ಯರಾದ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಸಾಗರ್, ನವೀನ್ ಹಾಗೂ ಎ.ಎಸ್.ಐ. ಮಹದೇವು ಅವರು ನಡೆಸಿರುವ ಘಟನೆಯಾಗಿರುತ್ತದೆ.
ಎಲ್ಲಾ ವಿಚಾರಣೆಗಳನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ವಾಪಸ್ ಪಡೆದು, ಒಂದು ವಿಶೇಷ ತನಿಖಾ ತಂಡವನ್ನು ಅಥವಾ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಾಧೀಶರ ಮುಖಾಂತರ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ,ತಾಲೂಕು ವಿದ್ಯಾಭಿವೃದ್ದಿ ಸಂಘದ ಉಪಾಧ್ಯಕ್ಷ ಪು.ಶ್ರೀನಿವಾಸನಾಯಕ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಜಿ.ಪಂ.ಮಾಜಿ ಸದಸ್ಯರಾದ ಎಸ್.ಸೋಮನಾಯಕ, ಕೊಪ್ಪಾಳಿಮಹದೇವನಾಯಕ, ಬಿಜೆಪಿ ಮಾಜಿ ಅಧ್ಯಕ್ಷ ಆರ್.ಸುಂದರ್, ಬಿಜೆಪಿ ಎಸ್ ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ನಗರಸಭಾ ಮಾಜಿ ಅಧ್ಯಕ್ಷ ರಾಮಸಮುದ್ರ ಸುರೇಶ್, ಕಪಿನಿನಾಯಕ, ಯಳಂದೂರು ತಾಲೂಕು ಅಧ್ಯಕ್ಷ ಮುರುಳಿಕೃಷ್ಣ, ಜಿ.ಪಂ.ಮಾಜಿ ಸದಸ್ಯರಾದ ಎಸ್.ಸೋಮನಾಯಕ, ಕೊಪ್ಪಾಳಿ ಮಹದೇವನಾಯಕ, ರಮೇಶ್, ಮಲ್ಲೇಶ್, ಬುಲೆಟ್ ಚಂದ್ರು, ಶಿವರಾಂ, ನಾರಾಯಣ್, ವೆಂಕಟೇಶ್, ಸಿಂಗನಪುರ ಮಹೇಶ್, ನಗರಸಭಾ ಮಾಜಿ ಸದಸ್ಯ ಚೆಂಗುಮಣಿ, ಕೃಷ್ಣನಾಯಕ, ಕಂಡಕ್ಟರ್ ಸೋಮನಾಯಕ, ಕಂದಹಳ್ಳಿ ಮಹೇಶ್, ಪಾಳ್ಯ ಕೃಷ್ಣನಾಯಕ, ಚಂದ್ರಶೇಖರ್, ಇತರರು ಭಾಗವಹಿಸಿದ್ದರು.