ಸಾರಾಂಶ
ತನ್ನ ಸ್ನೇಹಿತೆ ಜತೆ ಬಂದು ಲಾಡ್ಜ್‌ನಲ್ಲಿ ತಂಗಿದ್ದ ಪದವಿ ವಿದ್ಯಾರ್ಥಿಯೊಬ್ಬ ಶಂಕಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತನ್ನ ಸ್ನೇಹಿತೆ ಜತೆ ಬಂದು ಲಾಡ್ಜ್‌ನಲ್ಲಿ ತಂಗಿದ್ದ ಪದವಿ ವಿದ್ಯಾರ್ಥಿಯೊಬ್ಬ ಶಂಕಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ತಕ್ಷಿತ್ (20) ಮೃತ ದುರ್ದೈವಿ. ಲಾಡ್ಜ್‌ನ ರೂಮ್‌ನಲ್ಲಿ ಶುಕ್ರವಾರ ಆತನ ಮೃತದೇಹ ಪತ್ತೆಯಾಗಿದೆ. ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಆತ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ವಾರದ ಹಿಂದೆ ನಗರಕ್ಕೆ ಬಂದಿದ್ದ ತಕ್ಷಿತ್ ಹಾಗೂ ಆತನ ಸ್ನೇಹಿತೆ, ಮಡಿವಾಳದ ಮಾರುತಿ ನಗರದ ಬಸ್ ನಿಲ್ದಾಣ ಸಮೀಪದ ಲಾಡ್ಜ್‌ನಲ್ಲಿ ತಂಗಿದ್ದರು. ತಾನು ಗೆಳೆಯನ ಜತೆ ಕೆಲಸ ಹುಡುಕಿಕೊಂಡು ಬಂದಿದ್ದಾಗಿ ಆಕೆ ಹೇಳಿದ್ದಳು. ಬಳಿಕ ಆನ್‌ಲೈನ್ ಮೂಲಕವೇ ಯುವತಿ ಹಣ ಪಾವತಿಸಿದ್ದಳು. ಮೂರು ದಿನಗಳ ಬಳಿಕ ಮೃತನ ಸ್ನೇಹಿತೆ ಊರಿಗೆ ಮರಳಿದ್ದಳು. ನಂತರ ಸಹ ಅದೇ ಲಾಡ್ಜ್‌ನಲ್ಲಿ ತಕ್ಷಿತ್ ಉಳಿದುಕೊಂಡಿದ್ದ. ಆತನ ಉಟೋಪಾಚಾರಗಳಿಗೆ ಮೃತನ ಸ್ನೇಹಿತೆಯೇ ಆನ್‌ಲೈನ್ ಮೂಲಕ ಹಣ ಪಾವತಿಸಿದ್ದಳು. ತಕ್ಷಿತ್ ಸಾವಿನ ಬಗ್ಗೆ ಆತನ ಪೋಷಕರು ಸಹ ಅನುಮಾನ ವ್ಯಕ್ತಪಡಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.