ಸಾರಾಂಶ
ಲಕ್ಕಪ್ಪನಹಳ್ಳಿ ಗ್ರಾಮದ ಪಕ್ಕದ ಗುಡ್ಡ ಬೆಟ್ಟಗಳಲ್ಲಿ ಚಿರತೆಗಳು ವಾಸವಾಗಿದ್ದು ಸುತ್ತಮುತ್ತ ಓಡಾಟ ನಡೆಸುತ್ತಿವೆ.
ರಾಮನಗರ: ಎರಡು ಚಿರತೆ ಮರಿಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ತಾಲೂಕಿನ ಕೈಲಾಂಚ ಹೋಬಳಿಯಲ್ಲಿ ನಡೆದಿದೆ. ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕಪ್ಪನಹಳ್ಳಿ ಗ್ರಾಮದಲ್ಲಿ ಎರಡು ಚಿರತೆ ಮರಿಗಳು ಸಾವನ್ನಪ್ಪಿದ್ದು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಕಾಡು ಹಂದಿ ದಾಳಿಗೆ ಒಳಗಾಗಿ ಸಾವನ್ನಪ್ಪಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯಿಂದ ಅಷ್ಟೇ ಚಿರತೆಗಳ ಸಾವಿಗೆ ಕಾರಣ ತಿಳಿದು ಬರಬೇಕಿದೆ. ಲಕ್ಕಪ್ಪನಹಳ್ಳಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ ಚಿರತೆ ಮರಿಗಳ ಶವಗಳು ಕಂಡುಬಂದಿದ್ದು, ಲಕ್ಕಪ್ಪನಹಳ್ಳಿ ಗ್ರಾಮದ ಪಕ್ಕದ ಗುಡ್ಡ ಬೆಟ್ಟಗಳಲ್ಲಿ ಚಿರತೆಗಳು ವಾಸವಾಗಿದ್ದು ಸುತ್ತಮುತ್ತ ಓಡಾಟ ನಡೆಸುತ್ತಿವೆ, ಜೊತೆಗೆ ಆಹಾರ ಅರಸಿ ಬಂದ ಸಂದರ್ಭದಲ್ಲಿ ಚಿರತೆಗಳ ಸಾವಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.