ಸಾರಾಂಶ
ಕನ್ನಡಪ್ರಭ ವಾರ್ತೆ ಅಳ್ನಾವರ
ಭಾರತೀಯರ ಸನಾತನ, ಆಧ್ಯಾತ್ಮಿಕ ಮತ್ತು ಯುವ ಸಮುದಾಯದ ಶಕ್ತಿಯನ್ನು ಶತಮಾನಗಳ ಹಿಂದೆಯೇ ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಅಳ್ನಾವರ ತಾಲೂಕು ಕಸಾಪ ನಿಕಟ ಪೂರ್ವ ಅದ್ಯಕ್ಷ ಡಾ. ಬಸವರಾಜ ಮೂಡಬಾಗಿಲ ಹೇಳಿದರುಅಳ್ನಾವರದಲ್ಲಿ ಕಸಾಪ ತಾಲೂಕು ಘಟಕದಿಂದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಆಯೋಜಿಸಿದ್ದ ಯುವ ಜನೋತ್ಸವದಲ್ಲಿ ಮಾತನಾಡಿದರು.
ವಿವೇಕಾನಂದರ ಕಣ್ಣಿನಲ್ಲಿದ್ದ ತೇಜಸ್ಸು, ಕಾಂತಿ ಪ್ರತಿಯೊಬ್ಬರಲ್ಲಿಯೂ ಸಂಚಲನವನ್ನುಂಟು ಮಾಡಿ ಅವರ ಸಂದೇಶಗಳು ಪ್ರೇರೇಪಿತರನ್ನಾಗಿಸುವುದರ ಜೊತೆಗೆ, ಜಗತ್ತಿನ ಯುವ ಸಮುದಾಯಕ್ಕೆ ಅವರಲ್ಲಿದ್ದ ಆಂತರಿಕ ಮತ್ತು ದೈಹಿಕ ಶಕ್ತಿಯನ್ನು ಕಂಡುಕೊಳ್ಳಲು ಸಹಕಾರಿಯಾಗಿತ್ತು ಎಂದರು.ಕಸಾಪ ಅಧ್ಯಕ್ಷ ಗುರುರಾಜ ಸಬನೀಸ ಮಾತನಾಡಿ, ,ಸ್ವಾಮಿ ವಿವೇಕಾನಂದರ ಆದರ್ಶಯುತ ಬದುಕು ಮತ್ತು ಭೋದನೆಗಳು ಇಂದಿನ ಯುವ ಸಮುದಾಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಲಾವಿದೆ ಜಯಶ್ರೀ ಉಡುಪಿ ಮತ್ತು ನಿವೃತ್ತ ಶಿಕ್ಷಕ ಚನ್ನಬಸಯ್ಯ ಚರಂತಿಮಠ ವಿವೇಕಾನಂದರ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಎಂಎಸ್ಐಎಲ್ ಮಾಜಿ ನಿರ್ದೇಶಕ ಶಿವಾಜಿ ಡೊಳ್ಳಿನ, ಕಸಾಪ ಕೋಶಾಧ್ಯಕ್ಷ ಪ್ರವೀಣ ಪವಾರ, ಸತ್ತಾರ ಬಾತಖಂಡೆ, ಸುರೇಂದ್ರ ಕಡಕೋಳ, ಅರ್ಜುನ ಬೆನ್ನಳ್ಳಿ, ಬಾಬು ಸುಣಗಾರ, ಜಾಕೋಬ ಖನ್ನಾ, ಆಕಾಶ ಜನಕಾಟಿ, ಎಸ್.ಡಿ. ದೇಗಾಂವಿಮಠ ಇದ್ದರು.
ಶ್ರೀರಾಮ ಹಿಂದಿ ವಿದ್ಯಾಲಯ:ಇಲ್ಲಿನ ಶ್ರೀರಾಮ ಹಿಂದಿ ವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದರ 161ನೇ ಜಯಂತಿಯಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ನಾರಾಯಣ ಮೋರೆ ಹಾಗೂ ಎಸ್.ಡಿ. ದೇಗಾವಿಮಠ ಮಾತನಾಡಿ, ಯುವಕರಿಗೆ ಸ್ಫೂರ್ತಿದಾಯಕ ನುಡಿಗಳಿಂದ ಏಳಿ, ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂದು ಹುರುದುಂಬಿಸಿದ ವಿವೇಕಾನಂದರ ಆದರ್ಶ ಸ್ತುಸ್ತ್ಯಾರ್ಹವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕಾಧ್ಯಕ್ಷ ಗುರುರಾಜ ಸಬನೀಸ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಆಧ್ಯಾತ್ಮ, ಏಕಾಗ್ರತೆಯಿಂದ ದೇಶದ ಕೀರ್ತಿ ಉತ್ತುಗಂಕ್ಕೆ ಏರಿಸಿ ದೇಶ ಹಾಗೂ ವಿದೇಶದ ಯುವಕರ ಕಣ್ಮಣಿಯಾಗಿದ್ದ ವಿವೇಕಾನಂದರು ನಡೆದು ಬಂದ ಮಾರ್ಗ ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದೆ ಎಂದರು.ಇದೇ ಸಂಧರ್ಭದಲ್ಲಿ ಅಳ್ನಾವರ ರೈಲು ನಿಲ್ದಾಣದ ಸಲಹಾ ಸಮಿತಿ ಸದಸ್ಯರಾಗಿ ನೇಮಕಗೊಂಡ ಲಿಂಗರಾಜ ಮೂಲಿಮನಿ, ಸಂತೋಷ ಬಡಿಗೇರ ಹಾಗೂ ಕಸಾಪ ತಾಲೂಕು ಘಟಕದ ಅಧ್ಯಕ್ಷ ಗುರುರಾಜ ಸಬನೀಸ್ ಅವರ ಸತ್ಕಾರ ನಡೆಯಿತು.
ಡಾ. ಸಂಜಯ ಚಂದರಗಿಮಠ, ಬಸಯ್ಯ ಹಿರೇಮಠ, ನೇತ್ರಾವತಿ ಕಡಕೋಳ, ಮಂಗಲಾ ರವಳಪ್ಪನವರ, ಮಲ್ಲಿಕಾರ್ಜುನ ಹಿರೇಮಠ, ಅಶೋಕ ಬರಗುಂಡಿ, ಅನ್ನಪೂರ್ಣ ಕೌಜಲಗಿ, ಪ್ರಭಾಕರ ಜಳಗೇಕರ, ಪ್ರಭಾಕರ ಶಾಸ್ತ್ರೀಜಿ , ಬಾಳಕೃಷ್ಣ ಲಂಕಲ್, ಆನಂತ ರವಳಪ್ಪನವರ ಇದ್ದರು.