ಯುವಜನತೆಗೆ ಪ್ರೇರಣೆ ಸ್ವಾಮಿ ವಿವೇಕಾನಂದರು: ಡಾ.ಅಶೋಕ

| Published : Jan 14 2025, 01:04 AM IST

ಸಾರಾಂಶ

ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜ.೧೨ ಭಾರತದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯಾಗಿ ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಯುವಜನತೆಗೆ ಸ್ವಾಮಿ ವಿವೇಕಾನಂದರ ನೀಡಿದ ಮೌಲಿಕ ತತ್ವಗಳು ಮತ್ತು ಸಂದೇಶಗಳನ್ನು ಪುನಃ ನೆನಪಿಸುವ ಹಾಗೂ ದೇಶದ ಅಭಿವೃದ್ಧಿಗೆ ಯುವಕರ ಪಾತ್ರವನ್ನು ಒತ್ತಿ ಹೇಳುವ ಮಹತ್ವದ ಸಂದರ್ಭವಾಗಿದೆ ಎಂದು ಡಾ.ಅಶೋಕ ನರೋಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ (ರ-ಬ)

ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜ.೧೨ ಭಾರತದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯಾಗಿ ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಯುವಜನತೆಗೆ ಸ್ವಾಮಿ ವಿವೇಕಾನಂದರ ನೀಡಿದ ಮೌಲಿಕ ತತ್ವಗಳು ಮತ್ತು ಸಂದೇಶಗಳನ್ನು ಪುನಃ ನೆನಪಿಸುವ ಹಾಗೂ ದೇಶದ ಅಭಿವೃದ್ಧಿಗೆ ಯುವಕರ ಪಾತ್ರವನ್ನು ಒತ್ತಿ ಹೇಳುವ ಮಹತ್ವದ ಸಂದರ್ಭವಾಗಿದೆ ಎಂದು ಡಾ.ಅಶೋಕ ನರೋಡೆ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಮಹಾವಿದ್ಯಾಲಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವಿವೇಕಾನಂದರ ತತ್ವಗಳು, ಅವರ ಚಿಂತನೆಗಳು ಮತ್ತು ಸಂದೇಶಗಳನ್ನು ಯುವಜನತೆಗೆ ಶಕ್ತಿ, ಧೈರ್ಯ, ಮತ್ತು ಆತ್ಮವಿಶ್ವಾಸವನ್ನು ತುಂಬುವಲ್ಲಿ ಮಹತ್ವದ್ದಾಗಿದ್ದು, ಇಂದಿಗೂ ಯುವ ವರ್ಗಕ್ಕೆ ಸ್ಫೂರ್ತಿಯ ಸೆಲೆಯಾಗಿವೆ ಎಂದು ತಿಳಿಸಿದರು.ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದ ಚಿಕಾಗೋ ಭಾಷಣದಲ್ಲಿ ವಿಶ್ವಕ್ಕೆ ಸಹೋದರತೆಯ ಸಂದೇಶವನ್ನು ಸಾರಿದ್ದರು. ಅವರ ಈ ಸಂದೇಶವನ್ನು ನೆನಪಿಸಿಕೊಂಡು, ಯುವಜನತೆ ನಡುವೆ ಸಹಕಾರ ಮತ್ತು ಸಹಬಾಳ್ವೆಯ ಮಹತ್ವವನ್ನು ಅರಿತು ಬದುಕಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಪ್ರೊ.ಟಿ.ಡಿ.ಡಂಗಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಿ.ಎಂ.ಐಗಳಿ, ವಿನಾಯಕ, ಐ.ಪಿ.ಬಸವರಾಜ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿವೇಕಾನಂದರ ತತ್ವಗಳು, ಅವರ ಚಿಂತನೆಗಳು ಮತ್ತು ಸಂದೇಶಗಳನ್ನು ಯುವಜನತೆಗೆ ಶಕ್ತಿ, ಧೈರ್ಯ, ಮತ್ತು ಆತ್ಮವಿಶ್ವಾಸವನ್ನು ತುಂಬುವಲ್ಲಿ ಮಹತ್ವದ್ದಾಗಿದ್ದು, ಇಂದಿಗೂ ಯುವ ವರ್ಗಕ್ಕೆ ಸ್ಫೂರ್ತಿಯ ಸೆಲೆಯಾಗಿವೆ.

-ಡಾ.ಅಶೋಕ ನರೋಡೆ.