ಸಾರಾಂಶ
ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತಿಯನ್ನು ರಾಷ್ಟ್ರೀಯ ಯುವ ದಿನವಾಗಿ ಶುಕ್ರವಾರ ಆಚರಿಸಲಾಯಿತು.ಈ ವೇಳೆ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ಸ್ವಾಮಿ ವಿವೇಕಾನಂದರು ಸ್ವಾರ್ಥರಹಿತವಾದ ತತ್ತ್ವಾದರ್ಶಗಳಿಂದ ಜಗತ್ಪ್ರಸಿದ್ಧಿಯನ್ನು ಪಡೆದರು. ಭಾರತದ ಹಿರಿಮೆ ಮತ್ತು ಧರ್ಮ ಸಹಿಷ್ಣುತೆಯನ್ನು ಸ್ವಾಮಿ ವಿವೇಕಾನಂದರು ಇಡೀ ವಿಶ್ವಕ್ಕೆ ಸಾರಿದರು ಎಂದರು.
ಇಂದಿನ ಯುವಜನತೆ ಅವರ ಆದರ್ಶಗಳನ್ನು ಪಾಲಿಸಿ ಜೀವನದಲ್ಲಿ ಅತ್ಯಂತ ಅವಶ್ಯಕವಾಗಿರುವ ಸತ್ಯಶೀಲತೆ, ಶಿಸ್ತುಬದ್ಧ ಜೀವನ, ವ್ಯಾಯಾಮ, ವಿದ್ಯಾರ್ಜನೆ, ದೇಶಪ್ರೇಮ ಮತ್ತು ಅಹಂಭಾವವನ್ನು ತೊರೆಯುವಿಕೆ ಮುಂತಾದ ಸದ್ವಿಚಾರಗಳನ್ನು ಅನುಸರಿಸಬೇಕು. ಏಕಾಗ್ರತೆ, ಧ್ಯಾನ, ಪರೋಪಕಾರ, ದೀನದಲಿತರ ಸೇವೆ, ಪ್ರಾರ್ಥನೆ ಮತ್ತು ಸನ್ನಡತೆಯಿಂದ ದೇವರ ಸಾಕ್ಷಾತ್ಕಾರ ಸಾಧ್ಯ ಎಂದು ಅವರು ಹೇಳಿದರು.ಉಪನ್ಯಾಸಕರಾದ ಎನ್. ಅನಿತಾ, ಕೆ.ವಿ. ಸಂಜಯ, ಕೆ.ಆರ್. ಮಂಜುನಾಥ್ ಇದ್ದರು.