ಭಾರತದ ಸನಾತನ ಧರ್ಮ, ಸಂಸ್ಕೃತಿ, ಪರಂಪರೆ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು
ಕುಕನೂರು: ಸ್ವಾಮಿ ವಿವೇಕಾನಂದರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ ಹೇಳಿದರು.
ಮಂಗಳೂರಿನ ಕರ್ನಾಟಕ ಪಬ್ಲಿಕ್ ಶಾಲೆ(ಪ್ರಾಥಮಿಕ ವಿಭಾಗ)ಯಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಸನಾತನ ಧರ್ಮ, ಸಂಸ್ಕೃತಿ, ಪರಂಪರೆ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ವಿದ್ಯಾರ್ಥಿಗಳು ಗುರಿ ಹೊಂದಿ ಏಕಾಗ್ರತೆಯಿಂದ ಅಧ್ಯಯನ ಮಾಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಮಹಾನ್ ವ್ಯಕ್ತಿಗಳಿಗೆ ಸ್ಫೂರ್ತಿ ಹಾಗೂ ಆದರ್ಶವಾಗಿದ್ದಾರೆ. ಅವರ ಆದರ್ಶ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.ಮಾರುತಿ ಹಾದಿಮನಿರವರು ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ನೀಡಿದರು. ನೌಕರರ ಸಂಘದ ಖಜಾಂಚಿ ಬಸವರಾಜ ಬೆಲ್ಲದ, ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಗಳೇಶ ಯಲಿಗಾರ, ಪ್ರೌಢಶಾಲಾ ಮುಖ್ಯ ಶಿಕ್ಷಕ ಹನಮಂತಪ್ಪ ಅವರಾದಿ, ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ ಪಾಟೀಲ್ ಮಾತನಾಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಿವಪ್ಪ ಉಪ್ಪಾರ, ಸಮೂಹ ಸಂಪನ್ಮೂಲ ವ್ಯಕ್ತಿ ರವಿ ಮಳಗಿ, ಶಾಲೆಯ ಶಿಕ್ಷಕ ಬಸವರಾಜ ಸಿದ್ರಾಹುತ, ಶಿವಪ್ಪ ದುರಗಪ್ಪ, ಮಹಾವೀರ ಕಲ್ಭಾವಿ, ಮಂಜುನಾಥ ಕೊಡಕೇರಿ, ಬಾಬುಸಾಬ್ ಗುಡಿಹಿಂದಲ್ ಇತರರಿದ್ದರು.