ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ, ಸಂದೇಶಗಳು ದಿಕ್ಸೂಚಿ: ಮೀರಾ ಶಿವಲಿಂಗಯ್ಯ

| Published : Sep 02 2024, 02:06 AM IST

ಸಾರಾಂಶ

ಮಾನವ ಕುಲಕ್ಕೆ ಶಿಕ್ಷಣ ಮತ್ತು ವ್ಯಕ್ತಿತ್ವ ಹೇಗಿರಬೇಕು ಎಂದು ವಿವೇಕಾ ಬೆಳಕು ತೋರಿದ ಮಹಾನ್ ವೀರ ಸನ್ಯಾನಿಯನ್ನು ಜಗತ್ತು ಮರೆಯಲ್ಲ. ಈ ವಿಶ್ವಕ್ಕೆ ಭಾರತದ ಆಧ್ಯಾತ್ಮಿಕತೆ, ಸಂಸ್ಕಾರ, ಸಂಸ್ಕೃತಿಯನ್ನು ಪರಿಚಯ ಮಾಡಿದವರು ವಿವೇಕಾನಂದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಮತ್ತು ಸಂದೇಶಗಳು ಜಗತ್ತಿಗೆ ದಿಕ್ಸೂಚಿಯಾಗಿದೆ ಎಂದು ಎಸ್.ಬಿ.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಮೀರಾಶಿವಲಿಂಗಯ್ಯ ಹೇಳಿದರು.

ನಗರದ ಕೆರೆಯಂಗಳ ಕೆ.ಎಚ್.ಬಿ.ಬಡಾವಣೆಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ವಿವೇಕ ಬೆಳಕು- ಯುವ ಜನತೆಗೊಂದು ದಿಕ್ಸೂಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವ ಕುಲಕ್ಕೆ ಶಿಕ್ಷಣ ಮತ್ತು ವ್ಯಕ್ತಿತ್ವ ಹೇಗಿರಬೇಕು ಎಂದು ವಿವೇಕಾ ಬೆಳಕು ತೋರಿದ ಮಹಾನ್ ವೀರ ಸನ್ಯಾನಿಯನ್ನು ಜಗತ್ತು ಮರೆಯಲ್ಲ. ಈ ವಿಶ್ವಕ್ಕೆ ಭಾರತದ ಆಧ್ಯಾತ್ಮಿಕತೆ, ಸಂಸ್ಕಾರ, ಸಂಸ್ಕೃತಿಯನ್ನು ಪರಿಚಯ ಮಾಡಿದವರು ವಿವೇಕಾನಂದರು ತಿಳಿಸಿದರು.

ಆಶ್ರಮದ ಭಗವತ್ ಸೇವಕ ಬ್ರಹ್ಮಚಾರಿ ಮಂಜುನಾಥ್ ಮಾಕನಾಡಿ, ದೇಶದಲ್ಲಿ ಬದಲಾವಣೆ ಕ್ರಾಂತಿಯಾಗಿರುವುದು ತಾಯಿಯಿಂದ. ಹೆಣ್ಣು ಸನ್ಮಾರ್ಗದಲ್ಲಿ ನಡೆದರೆ ಉತ್ತಮ ಪ್ರಗತಿ ಸಾಧ್ಯವಿದೆ ಎಂದು ವಿವೇಕಾನಂದರು ಎಚ್ಚರಿಸಿದ್ದರು ಎಂದು ಸ್ಮರಿಸಿದರು.

ಇದೇ ವೇಳೆ ಕರಡಗೆರೆ ಮಾರುತಿ ಪ್ರಸನ್ನ ನೇಗಿಲ ಯೋಗಿ ಮಹಿಳಾ ತಂಡದಿಂದ ಜಾನಪದ ಡೊಳ್ಳುಕುಣಿತ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಧರಣೇಂದ್ರಯ್ಯ, ಸಂಪನ್ಮೂಲ ವ್ಯಕ್ತಿ ರಮೇಶ್‌ ಉಮರಾಣಿ, ಬಿಸಿಎಂ ತಾಲೂಕು ಕಲ್ಯಾಣಾಧಿಕಾರಿ ಎಂ.ಟಿ.ಶ್ರೀನಿವಾಸ್, ಹಿರಿಯ ಪತ್ರಕರ್ತ ಶ್ರೀಪಾದು, ರಾಷ್ಟ್ರೀಯಯ ಯುವ ಪ್ರಶಸ್ತಿ ಪುರಸ್ಕೃತೆ ಅನುಪಮಾ ಇದ್ದರು.ಆಧಾರ್‌ ಜೋಡಣೆಯಾಗದ ಅಂಗವಿಕಲ ಫಲಾನುಭವಿಗಳ ಪಿಂಚಣಿ ಸ್ಥಗಿತ

ಮಂಡ್ಯ: ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಂದಾದ ಅಂಗವಿಕಲ ವೇತನ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಕೆಲವೊಂದು ಫಲಾನುಭವಿಗಳ ಪಿಂಚಣಿಗೆ ಆಧಾರ್ ಜೋಡಣೆಯಾಗಿರುವುದಿಲ್ಲ. ಅಂತಹ ಫಲಾನುಭವಿಗಳ ವಿವರಗಳನ್ನು ಮಂಡ್ಯ ತಹಸೀಲ್ದಾರ್ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಇನ್ನು 5 ದಿನಳಗಾಗಿ ಸಂಬಂಧಪಟ್ಟ ಫಲಾನುಭವಿ ತಮ್ಮ ವೃತ್ತದ ಗ್ರಾಮ ಆಡಳಿತಾಧಿಕಾರಿ, ನಾಡ ಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿ ತಮ್ಮ ಆಧಾರ್ ಕಾರ್ಡ್, ಪಿಂಚಣಿ ಮಂಜೂರಾತಿ ಆದೇಶ ಪ್ರತಿ, ಬ್ಯಾಂಕ್ ಖಾತೆ ಪುಸ್ತಕ ನಕಲು ಪ್ರತಿಯನ್ನು ನೀಡಲು ಕೋರಿದೆ. ಇಲ್ಲದಿದ್ದರೆ ಪಿಂಚಣಿ ಸ್ಥಗಿತಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.