ಸಾರಾಂಶ
ಕನ್ನಡಪ್ರಭ ವಾರ್ತೆ ಬೆಟ್ಟದಪುರಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕೋರಗಲ್ಲು ಗ್ರಾಮದ ಕೆ.ಎಂ. ಲೋಹಿತಾಶ್ವ ಅವರು ಕೇಂದ್ರೀಯ ರೇಷ್ಮೆ ಕಿರಿಯ ವಿಜ್ಞಾನಿಯಾಗಿ ಆಯ್ಕೆಯಾಗಿದ್ದು ಅವರನ್ನು ಬೆಟ್ಟದಪುರದ ಕೂರ್ಗಲ್ಲು ಗ್ರಾಮಸ್ಥರು ಹಾಗೂ ಸ್ವರ್ಣಂಬ ಚಿಪ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕೂರ್ಗಲ್ ಗ್ರಾಮದ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.ತಂದೆ ಮಹಾದೇವಪ್ಪ, ತಾಯಿ ಚಿಂತಾಮಣಿ ಅವರ ನೇತೃತ್ವದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಲೋಹಿತಾಶ್ವ ಮಾತನಾಡಿ, ಬೆಂಗಳೂರಿನ ಜಿಕೆವಿಕೆಯ ಎಂಎಸ್ಸಿ ಕೃಷಿಗೆ ತೋಟಗಾರಿಕೆ ಸಂಬಂಧಿಸಿದಂತೆ ಹಲವು ಬೆಳೆಗಳ ಬಗ್ಗೆ ಪಿಎಚ್.ಡಿ ನಡೆಸಿದ್ದು, ರೇಷ್ಮೆ ಕೃಷಿಯ ಬಗ್ಗೆ ಹಲವು ವಿಷಯ ಮಂಡಿಸಿದ್ದು, ಈಗ ಕೇಂದ್ರೀಯ ರೇಷ್ಮೆ ಮಂಡಲಿಗೆ ಆಯ್ಕೆಯಾಗಿರುವುದು ಮುಂದಿನ ದಿನಗಳಲ್ಲಿ ರೈತರಿಗೆ ರೇಷ್ಮೆ ಬೆಳೆ ಹಾಗೂ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.ನಾನು ಕಾಶ್ಮೀರ ಅಥವಾ ಅಸ್ಸಾಂ ರಾಜ್ಯಕ್ಕೆ ಮೊದಲು ವೃತ್ತಿಗೆ ಹಾಜರಿ ಆಗಬೇಕಾಗಿದೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ತಂದೆ ತಾಯಿಗಳು, ಗ್ರಾಮಸ್ಥರು ಹಾಗೂ ಸ್ನೇಹಿತರು ಉಪನ್ಯಾಸಕರು ನನ್ನ ಪ್ರಾಥಮಿಕ ಶಾಲಾ ಶಿಕ್ಷಕರು ಇತರರಿಗೂ ಅಭಿನಂದಿಸುವುದಾಗಿ ತಿಳಿಸಿದರು.ಸ್ವರ್ಣಂಬ ಚಿಪ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಶಿವಕುಮಾರ ಸ್ವಾಮೀಜಿ ಮಾತನಾಡಿ, ನಮ್ಮ ಗ್ರಾಮದ ಯುವಕನ್ನೊಬ್ಬ ಕೇಂದ್ರೀಯ ವಿಜ್ಞಾನಿ ನೇಮಕಗೊಂಡಿದ್ದು ಈ ಗ್ರಾಮಕ್ಕೆ ಅಲ್ಲದೆ ತಾಲೂಕಿಗೆ ಹೆಸರು ಬಂದಿದೆ. ಅಲ್ಲದೆ ವೀರಶೈವ ಲಿಂಗಾಯತ ಸಮಾಜಕ್ಕೆ ಒಂದು ಉನ್ನತ ಹುದ್ದೆ ಅಲಂಕರಿಸುವ ವ್ಯಕ್ತಿಯಾಗಿ ಬಂದಿರುವುದು ನಮ್ಮ ಗ್ರಾಮಕ್ಕೆ ಹಾಗೂ ನಮ್ಮ ಸಮಾಜಕ್ಕೆ ಹೆಮ್ಮೆ ಎಂದು ಅವರು ತಿಳಿಸಿದರು.ಈ ವೇಳೆ ಲೋಹಿತಾಶ್ವ ಅವರ ತಾತ ಸಂಗಪ್ಪ, ಅಜ್ಜಿ ಮಹಾದೇವಮ್ಮ, ಮುಖಂಡರಾದ ಶಿವಕುಮಾರಸ್ವಾಮಿ, ಪರಮೇಶ್, ಶಿವಶಂಕರ್, ಬೆಟ್ಟದಪುರ ವೀರಶೈವ ಲಿಂಗಾಯತ ಸಮಾಜದ ಮುಖಂಡ ಬಿ.ಎಸ್. ಶಿವದೇವ, ಬಿ.ಸಿ. ಮಹಾದೇವಪ್ಪ, ರಾಜೇಂದ್ರ, ಮದನ್, ಸ್ವರ್ಣಂಬ ಚಿಟ್ಸ್ ಪ್ರೈ. ಲಿ. ಆಡಳಿತ ಮಂಡಳಿಯ ಶಿವಕುಮಾರ್, ಶ್ವೇತಾ ಚಂದ್ರು ಮೊದಲಾದವರು ಇದ್ದರು