ಸಾರಾಂಶ
ಗುತ್ತಿಗೆದಾರರಿಂದ ನಾನು ಹಣ ಪಡೆದಿಲ್ಲ. ಸೆ.20ರಂದು ಶನಿವಾರ ಮಧ್ಯಾಹ್ನ 1 ಗಂಟೆಗೆ ಕುಂದೂರು ಆಂಜನೇಯ ದೇವಸ್ಥಾನಕ್ಕೆ ಬಂದು ಈ ಬಗ್ಗೆ ನಾನು ಪ್ರಮಾಣ ಮಾಡುತ್ತೇನೆ. ನನ್ನ ವಿರುದ್ಧ ಕುಂದೂರಲ್ಲಿ ನಡೆದ ರೈತ ಸಮಾವೇಶದಲ್ಲಿ ಆರೋಪಿಸಿರುವ ಜಿಲ್ಲಾ ರೈತ ಒಕ್ಕೂಟ ಅಧ್ಯಕ್ಷ ಕೊಳೇನಹಳ್ಳಿ ಸತೀಶ್ ನೀವೂ ಬನ್ನಿರಿ ಎಂದು ಶಾಸಕ ಡಿ.ಜಿ.ಶಾಂತನಗೌಡ ಪಂಥಾಹ್ವಾನ ನೀಡಿದ್ದಾರೆ.
- ರೈತ ಒಕ್ಕೂಟ ಅಧ್ಯಕ್ಷರೇ ನೀವೂ ಬನ್ನಿ ಎಂದು ಪಂಥಾಹ್ವಾನ
- - -ಹೊನ್ನಾಳಿ: ಗುತ್ತಿಗೆದಾರರಿಂದ ನಾನು ಹಣ ಪಡೆದಿಲ್ಲ. ಸೆ.20ರಂದು ಶನಿವಾರ ಮಧ್ಯಾಹ್ನ 1 ಗಂಟೆಗೆ ಕುಂದೂರು ಆಂಜನೇಯ ದೇವಸ್ಥಾನಕ್ಕೆ ಬಂದು ಈ ಬಗ್ಗೆ ನಾನು ಪ್ರಮಾಣ ಮಾಡುತ್ತೇನೆ. ನನ್ನ ವಿರುದ್ಧ ಕುಂದೂರಲ್ಲಿ ನಡೆದ ರೈತ ಸಮಾವೇಶದಲ್ಲಿ ಆರೋಪಿಸಿರುವ ಜಿಲ್ಲಾ ರೈತ ಒಕ್ಕೂಟ ಅಧ್ಯಕ್ಷ ಕೊಳೇನಹಳ್ಳಿ ಸತೀಶ್ ನೀವೂ ಬನ್ನಿರಿ ಎಂದು ಶಾಸಕ ಡಿ.ಜಿ.ಶಾಂತನಗೌಡ ಪಂಥಾಹ್ವಾನ ನೀಡಿದರು.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೆರಡು ತಿಂಗಳಿನಿಂದಲ್ಲೂ ಭದ್ರಾ ನಾಲೆಯಿಂದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಕುಡಿಯುವ ನೀರು ಕೊಂಡೊಯ್ಯುವ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಗುತ್ತಿಗೆದಾರರಿಂದ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶದ ಶಾಸಕರು ಹಣ ಪಡೆದಿದ್ದಾರೆ. ಅದಕ್ಕಾಗಿ ಅವರು ಕಾಮಗಾರಿ ಬಗ್ಗೆ ಮಾತನಾಡುತ್ತಿಲ್ಲ. ಒಂದುವೇಳೆ ಶಾಸಕರು ಹಣ ತೆಗೆದುಕೊಂಡಿಲ್ಲವಾಗಿದ್ದರೆ ಕುಂದೂರು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಬೇಕು ಎಂದು ಜಿಲ್ಲಾ ರೈತ ಒಕ್ಕೂಟ ಅಧ್ಯಕ್ಷ ಕೊಳೇನಹಳ್ಳಿ ಸತೀಶ್ ಹೇಳಿದ್ದಾರೆ. ಅದಕ್ಕಾಗಿ ಈ ಪಂಥಾಹ್ವಾನ ನೀಡುತ್ತಿದ್ದೇನೆ ಎಂದರು.ಭದ್ರಾ ಬಲದಂಡೆಯಿಂದ 30 ಕ್ಯು. ಕುಡಿಯುವ ನೀರನ್ನು ಹೊಸದುರ್ಗ ತಾಲೂಕಿನ 430 ಗ್ರಾಮ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ 130 ಗ್ರಾಮಗಳಿಗೆ ಕುಡಿಯುವ ನೀರು ತೆಗೆದುಕೊಂಡಲು ಹೋಗಲು ಭದ್ರಾ ಬಲದಂಡೆ ನಾಲೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸವಂತಪ್ಪ, ಭೋಜನಾಯ್ಕ್ ಇತರರು ಇದ್ದರು.- - -
-18ಎಚ್.ಎಲ್.ಐ2:ಶಾಸಕ ಡಿ.ಜಿ.ಶಾಂತನಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಸವಂತಪ್ಪ, ಭೋಜಾನಾಯ್ಕ ಇತರರು ಇದ್ದರು.