ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿ ಪ್ರಾಯಜೋಕತ್ವದಲ್ಲಿ ಕಲಬುರಗಿ ನಗರದ ವೀರೇಂದ್ರ ಪಾಟೀಲ ಬಡಾವಣೆಯ ಫುಪ್‌ಬಾಲ್ ಅಂಕಣದಲ್ಲಿ ನಡೆದ ‘ಸ್ವೀಪ್ ಫುಟ್‌ಬಾಲ್ ಲೀಗ್’ಗೆ ತೆರೆ ಬಿದ್ದಿದ್ದು, ಲೀಗ್ ಪೈನಲ್ ಪಂದ್ಯದಲ್ಲಿ ಕೆ.ಡಿ.ಎಫ್. ತಂಡ ಟ್ರೋಫಿ ಗೆದ್ದು ಸಂಭ್ರಮಿಸಿತು.ಲೀಗ್‍ನ ಫೈನಲ್ ಪಂದ್ಯ ಕೆ.ಡಿ.ಎಫ್ ಮತ್ತು ಐವಾನ್-ಎ-ಶಾಹಿ ತಂಡಗಳ ನಡುವೆ ನಡೆದು ಅಂತಿಮವಾಗಿ ಕೆ.ಡಿ.ಎಫ್ ತಂಡ ಗೆಲುವಿನ ನಗೆ ಬೀರಿತು. ಐವಾನ್-ಎ-ಶಾಹಿ ತಂಡ ರನ್ನರ್ ಆಫ್ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು. ಗೆದ್ದ ತಂಡಕ್ಕೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮತ್ತು ನಗರ ಪೆÇಲೀಸ್ ಆಯುಕ್ತ ಆರ್.ಚೇತನಕುಮಾರ, ರನ್ನರ್ ಆಫ್ ತಂಡಕ್ಕೆ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮತ್ತು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ ಅವರು ಪ್ರಶಸ್ತಿ ವಿತರಿಸಿ ಶುಭ ಕೋರಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಹಿಯಾ ತರನ್ನುಮ್ ಮಾತನಾಡಿ, ಮತದಾನದ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ವಿಭಿನ್ನ ಕಾರ್ಯಕ್ರಮ ಆಯೋಜಿಸುತ್ತಿದ್ದು, ಅದರಲ್ಲಿ ಈ ಪುಟ್ಬಾಲ್ ಲೀಗ್ ಸಹ ಸೇರಿದೆ ಎಂದರು. ಆಯುಕ್ತ ಚೇತನ್ ಆರ್. ಇದ್ದರು.ಪ್ರವೇಶ ಉಚಿತವಾದ ಕಾರಣ ಸುಮಾರು 8 ತಂಡಗಳು ಭಾಗವಹಿಸಿ ಪ್ರಶಸ್ತಿಗೆ ಸೆಣಸಾಡಿದವು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮತ್ತು ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ್ ಎನ್. ಅಷ್ಟಗಿ, ಜಿಲ್ಲಾ ಫುಟ್ಬಾಲ್ ಸಂಸ್ಥೆ ಕಾರ್ಯದರ್ಶಿ ರವಿಕುಮಾರ, ಹಾಕಿ ಕೋಚ್ ಸಂಜಯ್ ಬಾಣದ, ಬಾಸ್ಕೆಟ್ ಬಾಲ್ ಕೋಚ್ ಪ್ರವೀಣ ಪುಣೆ ಸೇರಿದಂತೆ ಪುಟ್‍ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))