ಶ್ವೇತಾ ಅಧಿಕಾರ ಸ್ವೀಕಾರ: ಮಿಥುನ್‌ ಕೀಮಾವತ್‌ ಬೀಳ್ಕೊಡುಗೆ

| Published : Jul 20 2024, 12:53 AM IST

ಶ್ವೇತಾ ಅಧಿಕಾರ ಸ್ವೀಕಾರ: ಮಿಥುನ್‌ ಕೀಮಾವತ್‌ ಬೀಳ್ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಚಿತ್ರದುರ್ಗದ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ವರ್ಗಾವಣೆಯಾದ ಹಿನ್ನೆಲೆ ಅವರ ಸ್ಥಾನದಲ್ಲಿ ಶ್ವೇತಾ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಜಗಳೂರು: ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಚಿತ್ರದುರ್ಗದ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ವರ್ಗಾವಣೆಯಾದ ಹಿನ್ನೆಲೆ ಅವರ ಸ್ಥಾನದಲ್ಲಿ ಶ್ವೇತಾ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ನೂತನ ಅಧಿಕಾರಿ ಶ್ವೇತಾ ಚಿತ್ರದುರ್ಗ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಕೊಪ್ಪಳದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದರು. ಈಗ ಜಗಳೂರಿಗೆ ವರ್ಗಾವಣೆಯಾಗಿದ್ದಾರೆ. ಶ್ವೇತಾ ಅವರನ್ನು ಸ್ವಾಗತಿಸಲಾಯಿತು ಹಾಗೂ ಮಿಥುನ್ ಕಿಮಾವತ್ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ವರ್ಷಗಳಿಂದ ರೈತಸ್ನೇಹಿ ಅಧಿಕಾರಿ ಆಗಿದ್ದ ಮಿಥುನ್ ಕಿಮಾವತ್ ಇತ್ತೀಚೆಗೆ ತಾಲೂಕು ಪಂಚಾಯಿತಿ ಪ್ರಭಾರ ಇಒ ಆಗಿ ಸಹ ಕಾರ್ಯನಿರ್ವಹಿಸಿದ್ದರು. ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ನಿರ್ಮಾಣಕ್ಕೆ ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಗೋದಾಮು ನಿರ್ಮಾಣಕ್ಕೆ ಸಹಾಯಧನ ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಸಹಕಾರ ನೀಡಿದ್ದರು. ಗುಣಮಟ್ಟದ ಬಿತ್ತನೆಬೀಜ ಮತ್ತು ರೈತರಿಗೆ ಕೃಷಿ ಕಾಮಗಾರಿಗಳಿಗೆ ಅವಕಾಶ ನೀಡುವ ಮೂಲಕ ರೈತ ಪರವಾಗಿ ಕಾರ್ಯನಿರ್ವಹಿಸಿದ್ದರು ಎಂದು ಈ ವೇಳೆ ಹಾಜರಿದ್ದ ಎಫ್ಪಿಒ ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್, ರೈತ ಮುಖಂಡರು ಹಾಗೂ ಬಂಜಾರ್ ಸಮಾಜದ ಅಧ್ಯಕ್ಷ ಪುರುಷೋತ್ತಮ ನಾಯ್ಕ್ ಸ್ಮರಿಸಿದರು.

- - - -19 ಜೆ.ಎಲ್.ಆರ್3: