ತರಬೇತಿ ಶಿಬಿರಗಳಿಂದ ಮಾನಸಿಕ, ದೈಹಿಕ ಸದೃಢ: ರೇಖಾ ಉಲ್ಲಾಸ

| Published : May 25 2025, 01:44 AM IST

ತರಬೇತಿ ಶಿಬಿರಗಳಿಂದ ಮಾನಸಿಕ, ದೈಹಿಕ ಸದೃಢ: ರೇಖಾ ಉಲ್ಲಾಸ
Share this Article
  • FB
  • TW
  • Linkdin
  • Email

ಸಾರಾಂಶ

ತರಬೇತಿ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಶಿಬಿರಾರ್ಥಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಬಹುದು ಎಂದು ನಿವೃತ್ತ ಶಿಕ್ಷಕಿ ಮಂಜಂಡ್ರ ರೇಖಾ ಉಲ್ಲಾಸ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಶಿಬಿರಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬಹುದು ಎಂದು ನಿವೃತ್ತ ಶಿಕ್ಷಕಿ ಮಂಜಂಡ್ರ ರೇಖಾ ಉಲ್ಲಾಸ ಹೇಳಿದರು.

ಸಮೀಪದ ಕಕ್ಕಬ್ಬೆಯ ನಾಲಡಿ ಗ್ರಾಮದ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಮೇ ಒಂದರಿಂದ ನಾಲಡಿ ಅಂಬಲ ಹೊಳೆಯಲ್ಲಿ ಆಯೋಜಿಸಲಾಗಿದ್ದ ಈಜು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳ ಶ್ರೇಯೋಭಿವೃದ್ಧಿಗೆ ಪೋಷಕರ ಸಹಕಾರ ಮುಖ್ಯವಾಗಿದ್ದು ಇಂತಹ ತರಬೇತಿ ಶಿಬಿರಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಿವರ್ ಸ್ವಿಮ್ಮಿಂಗ್ ಕ್ಲಬ್ ನ ಅಧ್ಯಕ್ಷ ಬೊಲಿಯಾಡಿರ ಸಂತು ಸಂತ್ರಮಣಿ ಮಾತನಾಡಿ ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶಿಷ್ಟವಾದ ಈಜು ತರಬೇತಿ ಶಿಬಿರವನ್ನುನುರಿತ ತರಬೇತಿದಾರರಿಂದ ಆಯೋಜಿಸಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಶಿಬಿರಕ್ಕೆ ಉತ್ತಮ ಪ್ರೋತ್ಸಾಹ ಇದೆ. ಈ ವರ್ಷ 45 ವಿದ್ಯಾರ್ಥಿಗಳು ಈಜು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು ಇದಕ್ಕೆ ಪೋಷಕರ ಸಹಕಾರ ಮುಖ್ಯವಾಗಿದೆ. ಇದರಲ್ಲಿ ತಜ್ಞ ತರಬೇತುದಾರರಾದ ಕಂಗಂಡ ಅಪ್ಪಚ್ಚ, ಕಾಂಡoಡ ಸಜನ್, ಕಂಬೆಯಂಡ ತರುಣ್, ಬಾಚಮಂಡ ದೇವಯ್ಯ, ಕರೋಟಿರ ಪುವಣ್ಣ ಭಾಗವಹಿಸಿ ಸೂಕ್ತ ಮಾರ್ಗದರ್ಶನ ಹಾಗೂ ನುರಿತ ತರಬೇತಿ ನೀಡಿದ್ದಾರೆ. ಶಿಬಿರಾರ್ಥಿಗಳು ಹೆಚ್ಚಿನ ತರಬೇತಿ ಪಡೆದುಕೊಂಡು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪಾಲ್ಗೊಂಡು ಗೌರವಕ್ಕೆ ಪಾತರಾಗಿದ್ದಾರೆ ಎಂದರು.

ಅತಿಥಿಗಳಾಗಿ ಮಾಳೆಯಂಡ ಅಪ್ಪಣ್ಣ, ಅಪ್ಪಾರಂಡ ಸೀನುನಂಜಪ್ಪ, ಅಯ್ಯನೆರವಂಡ ಅಪ್ಪಣ್ಣ, ಚೇನಂಡ ಬೋಪಣ್ಣ ಉಪಸ್ಥಿತರಿದ್ದು ಪೋಷಕರು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.