ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್: ಬಳ್ಳಾರಿಗೆ 5 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕ

| Published : Apr 02 2024, 01:13 AM IST / Updated: Apr 02 2024, 07:46 AM IST

ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್: ಬಳ್ಳಾರಿಗೆ 5 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ, ಈಜು ಸ್ಪರ್ಧಿಗಳಾದ ಗೋಪಿಚಂದ್, ಯೋಜಿತ್, ಸಾಯಿ ಬೇಬಿ, ಸಾಯಿ ನಿಖಿಲ್, ಕೆ.ಕವಿತಾ ಭಾಗವಹಿಸಿದ್ದರು.

ಬಳ್ಳಾರಿ:  ಮಧ್ಯಪ್ರದೇಶದ ಗ್ವಾಲಿಯರ್‌ನ ಅಟಲ್ ಬಿಹಾರಿ ವಾಜಪೇಯಿ ತರಬೇತಿ ಕೇಂದ್ರದಲ್ಲಿ ಮಾ.29ರಿಂದ 31ರವರೆಗೆ ನಡೆದ 2023-24ನೇ ಸಾಲಿನ ರಾಷ್ಟ್ರಮಟ್ಟದ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಗಳಲ್ಲಿ ಬಳ್ಳಾರಿ ಜಿಲ್ಲೆಗೆ ಒಟ್ಟು 5 ಚಿನ್ನ, 2 ಬೆಳ್ಳಿ, 3 ಕಂಚು ಪದಕ ಲಭಿಸಿವೆ.

ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ, ಈಜು ಸ್ಪರ್ಧಿಗಳಾದ ಗೋಪಿಚಂದ್, ಯೋಜಿತ್, ಸಾಯಿ ಬೇಬಿ, ಸಾಯಿ ನಿಖಿಲ್, ಕೆ.ಕವಿತಾ ಭಾಗವಹಿಸಿದ್ದರು.ಈಜುಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಗೋಪಿಚಂದ್ ಅವರಿಗೆ 3 ಚಿನ್ನದ ಪದಕ, ಯೋಜಿತ್‍ಗೆ 1 ಚಿನ್ನ ಹಾಗೂ 1 ಬೆಳ್ಳಿ ಪದಕ, ಸಾಯಿ ಬೇಬಿ ಅವರಿಗೆ 1 ಕಂಚು, ಸಾಯಿ ನಿಖಿಲ್‍ಗೆ 1 ಚಿನ್ನ ಹಾಗೂ 2 ಕಂಚಿನ ಪದಕ ಮತ್ತು ಕೆ.ಕವಿತಾ 1 ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಸ್ಪರ್ಧಿಗಳು ರಜನಿ ಲಕ್ಕ, ಸ್ವಾಮಿ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಶರತ್ ಗಾಯಕ್‍ವಾಡ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದುಕೊಂಡಿದ್ದರು.

ಈಜುಪಟುಗಳ ಸಾಧನೆಗೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಎಸ್ಪಿ ರಂಜಿತಕುಮಾರ್ ಬಂಡಾರು, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಅಭಿನಂದಿಸಿದ್ದಾರೆ.